ತಿರುವನಂತಪುರ : ಓಣಂ ಹಬ್ಬದ ಹಿನ್ನೆಲೆಯಲ್ಲಿ ವಾಡಿಕೆಯಂತೆ ಈ ಬಾರಿಯೂ ಕೇರಳೀಯರು ಕುಡಿದು ತೂರಾಡಿದ್ದು, ಕಳೆದ 10ದಿನಗಳಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ. ನಿನ್ನೆಯ ತನಕ ರಾಜ್ಯದಲ್ಲಿ 826.38ಕೋಟಿ ರೂಗಳ ಮದ್ಯ ಮಾರಾಟವಾಗಿದೆ. ಕಳೆದ ಬಾರಿಗಿಂತ ಇದು ದಾಖಲೆಯ ಏರಿಕೆಯಾಗಿದ್ದು, ಈ ಬಾರಿ ಈ ಹಿಂದಿನದ್ದಕ್ಕಿಂತ 50ಕೋಟಿ ರೂಗಳ ಮಾರಾಟ ಹೆಚ್ಚಳವಾಗಿದೆ. ಕಳೆದ ಬಾರಿ ಓಣಂ ಸಮಯದಲ್ಲಿ 776ಕೋಟಿ ರೂಗಳ ಮದ್ಯ ಮಾರಾಟವಾಗಿತ್ತು.

ತೀರುವೋಣಂ ಮುನ್ನಾದಿನವಾದ ಉತ್ರಾಡಂ ದಿವಸವಾದ ನಿನ್ನೆ ಒಂದೇ ದಿನದಲ್ಲಿ 137ಕೋಟಿ ರೂಗಳ ವಹಿವಾಟು ನಡೆದಿದೆ. ಕಳೆದ ವರ್ಷ ಇದೇ ದಿನ 126ಕೋಟಿಯ ವ್ಯಾಪಾರ ನಡೆದಿತ್ತು. ಒಣಂ ಸಮಯದ ಮದ್ಯ ಮಾರಾಟದಲ್ಲಿ ಕರುನಾಗಪಳ್ಳಿ ಔಟ್ಲೆಟ್ ಮೊದಲ ಸ್ಥಾನದಲ್ಲಿದೆ. ಇಲ್ಲಿ ನಿನ್ನೆ ಒಂದೇ ದಿನದಲ್ಲಿ 146.08ಲಕ್ಷ ರೂಗಳ ವಹಿವಾಟು ನಡೆದಿದೆ.
ಓಣಂ ಹಬ್ಬಾಚರಣೆಗೆ ವರ್ಷಂಪ್ರತಿ ಆತ್ಯಧಿಕ ಮದ್ಯ ಮಾರಾಟ ನಡೆಯುತಿದ್ದು, ಬ್ರಿವರೇಜ್ ನಿಗಮದ ಔಟ್ಲೆಟ್ ಮೂಲಕ ಭಾರೀ ಪ್ರಮಾಣದ ಮಾರಾಟ ವಹಿವಾಟು ನಡೆಯುತ್ತಿದೆ.






