ಭಾರತದ ವಿರುದ್ಧ ಜಿಹಾದಿ ಕಾರ್ಯಾಚರಣೆ ತೀವ್ರಗೊಳಿಸುವುದಾಗಿ ಜಾಗತಿಕ ಉಗ್ರ ಮಸೂದ್ ಘೋಷಣೆ
ಎರಡು ದಶಕದ ಬಳಿಕ ಪಾಕಿಸ್ಥಾನದಲ್ಲಿ ಬಹಿರಂಗ ಸಭೆಯಲ್ಲಿ ಕಾಣಿಸಿದ ಉಗ್ರನ ಹೇಳಿಕೆಗೆ ಭಾರತದ ಆಕ್ರೋಶ
ಪಾಕಿಸ್ತಾನದ ಬಹಿರಂಗ ಸಭೆಯಲ್ಲಿ ಉಗ್ರಗಾಮಿ ಮುಖಂಡ ಮಸೂದ್ ಭಾಷಣ ಮಾಡಿ ಭಾರತದ ವಿರುದ್ಧ ಜಿಹಾದಿ ಕಾರ್ಯಾಚರಣೆ ತೀವ್ರಗೊಳಿಸುವುದೆಂಬ ಹೇಳಿಕೆ ಇತ್ತಿದ್ದಾನೆ. ಇದನ್ನು ಭಾರತದ ವಿದೇಶಾಂಗ ಖಾತೆ ತೀವ್ರ ಖಂಡಿಸಿದೆ.
ಸಂಸತ್ ಧಾಳಿ ಸೇರಿದಂತೆ ಹಲವು ಧಾಳಿಗಳನ್ನು ರೂಪಿಸಿದ ನಿಷೇಧಿತ ಭಯೋತ್ಪಾದನಾ ಸಂಘಟನೆ ಜೈಷ್ – ಇ- ಮೊಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ಥಾನವನ್ನು ಭಾರತ ಒತ್ತಾಯಿಸಿದೆ.
2ದಶಕದ ಬಳಿಕ ಉಗ್ರ ಮಸೂದ್ ಇದೇ ಮೊದಲ ಬಾರಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿ, ಭಾರತದ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವುದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಜಿಹಾದಿ ಕಾರ್ಯಾಚರಣೆ ನವೀಕರಿಸುವ ಹೇಳಿಕೆಗೆ ಭಾರತದ ವಿದೇಶಾಂಗ ವಕ್ತಾರರು ತೀವ್ರ ಆಕ್ರೋಶ ಪ್ರಕಟಿಸಿದ್ದಾರೆ.