ಉಪ್ಪಳ(ಜು 19):
ಇಲ್ಲಿನ ಕುಬಣೂರು ಸುವರ್ಣ ಹೊಳೆ ಹರಿವನ್ನು ತಡೆಯುತ್ತಿದ್ದ ಭಾರೀ ಪ್ರಮಾಣದ ಮಾಲಿನ್ಯ ರಾಶಿಯನ್ನು ತೆಗೆದು ಹೊಳೆಯನ್ನು ಮಲಿನ ಮುಕ್ತವಾಗಿಸಿ ಸ್ವಚ್ಛಗೊಳಿಸುವ ಮೂಲಕ
ಕುಬಣೂರಿನ ನಾಗರಿಕರು ಪ್ರಶಂಸೆಗೆ ಪಾತ್ರರಾದರು.
ಕುಬಣೂರಿನ ಸುವರ್ಣಗಿರಿ ಹೊಳೆಯ ಕಿಂಡಿ ಅಣೆಕಟ್ಟಿನ ಭಾಗದಲ್ಲಿ ಮಳೆ ನೀರಿನೊಂದಿಗೆ ಕೊಚ್ಚಿ ಬಂದ ಬೃಹತ್ ಗಾತ್ರದ ಮರದ ದಿಮ್ಮಿಗಳ ಸಹಿತ ಮಾಲಿನ್ಯ ಕಟ್ಟಿ ನಿಂತು ಜಲ ಪ್ರವಾಹದ ಸುಗಮತೆಯನ್ನು ತಡೆದಿತ್ತು.
ಇಂದು ಭಾನುವಾರದ ಬಿಡುವಿನಲ್ಲಿ ಊರವರು, ಶ್ರೀರಾಮ ಯುವಕ ಕಲಾ ಮಂಡಳಿಯ ಸದಸ್ಯರು, ಅಗ್ನಿಶಾಮಕ ದಳ ಸಿಬಂದಿಗಳು ಸೇರಿ ಮಾಲಿನ್ಯ ರಾಶಿ ತೆರವು ಮಾಡಿದರು. ಗ್ರಾ. ಪಂ. ಸದಸ್ಯೆ ಸಾಕ್ಷಿ ಶೆಟ್ಟಿ, ವಸಂತ ಮಯ್ಯ ತಿಂಬರ, ಸತೀಶ್ ಮಾಸ್ತರ್ ಒಡ್ಡಂಬೆಟ್ಟು ಮೊದಲಾದವರು ನೇತೃತ್ವ ನೀಡಿದರು.








