admin
– ಎಂ.ನಾ. ಚಂಬಲ್ತಿಮಾರ್ (ಗ್ರೂಪ್ ಎಡಿಟರ್ @ ಕಣಿಪುರ)
ಪ್ರಿಯ ಓದುಗರೇ..
ನಮ್ಮ ಕಣ್ಣೆದುರಿನ ಜಗತ್ತು ತಂತ್ರಜ್ಞಾನ ಯುಗದ ಆಧುನಿಕ ಪರಿಷ್ಕಾರಗಳೊಂದಿಗೆ ನಾಗಾಲೋಟದಲ್ಲಿದೆ. ದಿನೇ ದಿನೇ ಸರ್ವ ವಲಯಗಳೂ ಸ್ಥಿತ್ಯಂತರಗಳ ಬದಲಾವಣೆಯನ್ನು ಕಾಣುತ್ತಲೇ ಇದೆ. ಇದು ಎಲ್ಲರ ಬದುಕಿನಲ್ಲೂ ಹಾಸುಹೊಕ್ಕಾಗಿದೆ. ಈ ಕಾಲ ಅಂತರ್ಜಾಲವನ್ನು ಅವಲಂಬಿಸಿದ ತಂತ್ರಜ್ಞಾನ ವಿಪ್ಲವದ ಇ-ಯುಗ. ಇಲ್ಲಿ ದಿನೇ, ದಿನೇ ಜಗತ್ತು ಪರಿಷ್ಕಾರಗೊಳ್ಳುತ್ತಲೇ, ಸರ್ವವೂ ಆನ್ಲೈನ್ ಆಗುತ್ತಿದೆ. ನಮ್ಮ ಬದುಕೂ ಇದಕ್ಕೆ ಹೊರತಾಗಿಲ್ಲ ತಾನೇ..? ಹೊರತಾದರೆ ನಾವೀ ಕಾಲಕ್ಕೆ ಅಪ್ರಸ್ತುತರಾಗುತ್ತೇವೆ. ಆಧುನಿಕರಾಗದೇ ನಿಂತಲ್ಲೇ ಇದ್ದು, ಹಿಂದುಳಿದು ಬಿಡುತ್ತೇವೆ. ಹೀಗೆ ಆಧುನಿಕ ಪರಿಷ್ಕಾರಗಳ ಬೆನ್ನೇರಿ ಓಡುವುದೇ ಇಂದಿನ ಬದುಕಾಗಿದೆ. ಇದು ವಾಸ್ತವ..
ಈ ಪಲ್ಲಟ, ಪರಿಷ್ಕಾರಗಳಿಂದ ನಮ್ಮ ಮಾಧ್ಯಮಗಳೂ ಮುಕ್ತವಾಗಿಲ್ಲ. ಇದು ಈ ಕ್ಷಣದ ಸುದ್ದಿಯನ್ನು ಈಗಲೇ ಅರಿಯುವ ಆತುರದ ಕಾಲ.
ಎಲ್ಲೆಲ್ಲಿ ಏನಾಗಿದೆ ಏಂದರಿಯುವ ಕಾತುರದ ಕಾಲವೂ ಹೌದು. ಇದಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನಗಳು ಬೆಳೆದಿವೆ. ಜನತೆಗೆ ಇದನ್ನು ಸ್ವೀಕರಿಸಿಯೂ ಆಗಿದೆ. ಆದ್ದರಿಂದ ಕಳೆದ 13 ವರ್ಷಗಳಿಂದ ಯಕ್ಷಗಾನ ಕಲಾ ಸಂಸ್ಕೃತಿಗೆ ಸೀಮಿತ ಮಾಸಿಕವಾಗಿದ್ದ ನಿಮ್ಮ ನೆಚ್ಚಿನ ‘ಕಣಿಪುರ’ ಈಗ ಕಾಲಘಟ್ಟದ ಅನಿವಾರ್ಯತೆಯಿಂದ ದಿನವೂ ಸುದ್ದಿವೈವಿಧ್ಯತೆ ಒದಗಿಸುವ ಆನ್ಲೈನ್ ಮಾಧ್ಯಮರಂಗಕ್ಕೆ ಕಾಲೂರುತ್ತದೆ ಎಂದು ತಿಳಿಸಲು ಹರ್ಷವಾಗುತ್ತಿದೆ. ಇದು ಈ ಕಾಲಘಟ್ಟದ ಅನಿವಾರ್ಯತೆ…
ಇದು ದೇಶದೆಲ್ಲೆಡೆ ಆನ್ಲೈನ್ ಮಾಧ್ಯಮಗಳು ದೃಶ್ಯ,ಮುದ್ರಣ ಮಾಧ್ಯಮಕ್ಕೆ ಸವಾಲೊಡ್ಡುವ ಕಾಲ. ಜಗತ್ತಿನಲ್ಲಿ ಇಂದಿಗೂ ಮುದ್ರಣ ಮಾಧ್ಯಮಗಳೇ ಅತ್ಯಂತ ವಿಶ್ವಾಸಾರ್ಹ ಮಾಧ್ಯಮಗಳೆಂದು ಸ್ವೀಕೃತವಾಗಿ ಗೌರವಕ್ಕೊಳಗಾದರೂ, ಮುದ್ರಣ ಮಾಧ್ಯಮವನ್ನು ಮುನ್ನಡೆಸುವುದೇನೂ ಸುಲಭ ಕಾಯಕವಲ್ಲ. ಅದು ದುಬಾರಿ ವೆಚ್ಚ ಬಯಸುತ್ತದೆ. ಅಷ್ಟೇ ಪರಿಶ್ರಮ ಬೇಕಾಗುತ್ತದೆ. ಜತೆಗೆ ಜನತೆಗೆ ತಡವಾಗಿ ಸುದ್ದಿಯೊದಗಿಸುತ್ತದೆ. ಇದು ಎಲ್ಲರಿಗೂ, ಎಲ್ಲದಕ್ಕೂ ತುರ್ತಿನ ಕಾಲ ತಾನೇ? ಕಡಿಮೆ ಸಮಯದಲ್ಲಿ ಹೆಚ್ಚು ತಿಳಿಯಬೇಕೆಂಬ ಹಂಬಲದ ಕಾಲ. ಸಮಯಗಳನ್ನು ವ್ಯರ್ಥಗೊಳಿಸಲು ಪುರುಸೊತ್ತಿಲ್ಲದ ಕಾಲ. ಆದ್ದರಿಂದಲೇ ‘ಕಣಿಪುರ’ವೂ ಕಾಲದ ಅಗತ್ಯ ಅರಿತು ಜಾಲತಾಣ ಮಾಧ್ಯಮವಾಗಿ ಅನಾವರಣಗೊಂಡಿದೆ. ಈಗ ನಿಮ್ಮ ಅಂಗೈಯಲ್ಲಿದೆ.
ಇದು ದೇಶದೆಲ್ಲೆಡೆ ಆನ್ಲೈನ್ ಮಾಧ್ಯಮಗಳು ದೃಶ್ಯ,ಮುದ್ರಣ ಮಾಧ್ಯಮಕ್ಕೆ ಸವಾಲೊಡ್ಡುವ ಕಾಲ. ಜಗತ್ತಿನಲ್ಲಿ ಇಂದಿಗೂ ಮುದ್ರಣ ಮಾಧ್ಯಮಗಳೇ ಅತ್ಯಂತ ವಿಶ್ವಾಸಾರ್ಹ ಮಾಧ್ಯಮಗಳೆಂದು ಸ್ವೀಕೃತವಾಗಿ ಗೌರವಕ್ಕೊಳಗಾದರೂ, ಮುದ್ರಣ ಮಾಧ್ಯಮವನ್ನು ಮುನ್ನಡೆಸುವುದೇನೂ ಸುಲಭ ಕಾಯಕವಲ್ಲ. ಅದು ದುಬಾರಿ ವೆಚ್ಚ ಬಯಸುತ್ತದೆ. ಅಷ್ಟೇ ಪರಿಶ್ರಮ ಬೇಕಾಗುತ್ತದೆ. ಜತೆಗೆ ಜನತೆಗೆ ತಡವಾಗಿ ಸುದ್ದಿಯೊದಗಿಸುತ್ತದೆ. ಇದು ಎಲ್ಲರಿಗೂ, ಎಲ್ಲದಕ್ಕೂ ತುರ್ತಿನ ಕಾಲ ತಾನೇ? ಕಡಿಮೆ ಸಮಯದಲ್ಲಿ ಹೆಚ್ಚು ತಿಳಿಯಬೇಕೆಂಬ ಹಂಬಲದ ಕಾಲ. ಸಮಯಗಳನ್ನು ವ್ಯರ್ಥಗೊಳಿಸಲು ಪುರುಸೊತ್ತಿಲ್ಲದ ಕಾಲ. ಆದ್ದರಿಂದಲೇ ‘ಕಣಿಪುರ’ವೂ ಕಾಲದ ಅಗತ್ಯ ಅರಿತು ಜಾಲತಾಣ ಮಾಧ್ಯಮವಾಗಿ ಅನಾವರಣಗೊಂಡಿದೆ. ಈಗ ನಿಮ್ಮ ಅಂಗೈಯಲ್ಲಿದೆ.ಇದು ದೇಶದೆಲ್ಲೆಡೆ ಆನ್ಲೈನ್ ಮಾಧ್ಯಮಗಳು ದೃಶ್ಯ,ಮುದ್ರಣ ಮಾಧ್ಯಮಕ್ಕೆ ಸವಾಲೊಡ್ಡುವ ಕಾಲ. ಜಗತ್ತಿನಲ್ಲಿ ಇಂದಿಗೂ ಮುದ್ರಣ ಮಾಧ್ಯಮಗಳೇ ಅತ್ಯಂತ ವಿಶ್ವಾಸಾರ್ಹ ಮಾಧ್ಯಮಗಳೆಂದು ಸ್ವೀಕೃತವಾಗಿ ಗೌರವಕ್ಕೊಳಗಾದರೂ, ಮುದ್ರಣ ಮಾಧ್ಯಮವನ್ನು ಮುನ್ನಡೆಸುವುದೇನೂ ಸುಲಭ ಕಾಯಕವಲ್ಲ. ಅದು ದುಬಾರಿ ವೆಚ್ಚ ಬಯಸುತ್ತದೆ. ಅಷ್ಟೇ ಪರಿಶ್ರಮ ಬೇಕಾಗುತ್ತದೆ. ಜತೆಗೆ ಜನತೆಗೆ ತಡವಾಗಿ ಸುದ್ದಿಯೊದಗಿಸುತ್ತದೆ. ಇದು ಎಲ್ಲರಿಗೂ, ಎಲ್ಲದಕ್ಕೂ ತುರ್ತಿನ ಕಾಲ ತಾನೇ? ಕಡಿಮೆ ಸಮಯದಲ್ಲಿ ಹೆಚ್ಚು ತಿಳಿಯಬೇಕೆಂಬ ಹಂಬಲದ ಕಾಲ. ಸಮಯಗಳನ್ನು ವ್ಯರ್ಥಗೊಳಿಸಲು ಪುರುಸೊತ್ತಿಲ್ಲದ ಕಾಲ. ಆದ್ದರಿಂದಲೇ ‘ಕಣಿಪುರ’ವೂ ಕಾಲದ ಅಗತ್ಯ ಅರಿತು ಜಾಲತಾಣ ಮಾಧ್ಯಮವಾಗಿ ಅನಾವರಣಗೊಂಡಿದೆ. ಈಗ ನಿಮ್ಮ ಅಂಗೈಯಲ್ಲಿದೆ.
ಯಾವುದೇ ಮಾಧ್ಯಮ ಸಂಸ್ಥೆಯನ್ನು ಸಮಾಜಮುಖಿಯಾಗಿ ಜನಪರ ಕಳಕಳಿಯಿಂದ ನಡೆಸಬೇಕಾದರೆ ಸಾಮಾಜಿಕರ ಬೆಂಬಲಗಳೂ ಅಗತ್ಯ. ಒಂದೊಳ್ಳೆಯ ಸುದ್ದಿಕತೆ ಕ್ಷಣದಲ್ಲಿ ಓದಿ ತಿಳಿಯಲು ಸುಲಭ. ಆದರೆ ಅದೇ ಸುದ್ದಿಯನ್ನು ಓದುಗರಿಗೆ ಒದಗಿಸುವುದರ ಹಿಂದಿನ ಪರಿಶ್ರಮದಲ್ಲಿ ಎಷ್ಟು ಜನ ದುಡಿಯುತ್ತಾರೆ ಗೊತ್ತಾ? ಆದ್ದರಿಂದ ‘ಕಣಿಪುರ’ ದ ಮುನ್ನಡೆಯ ಪಯಣಕ್ಕೆ ನಿಮ್ಮೆಲ್ಲರ ಒಲವಿನ ಪ್ರೋತ್ಸಾಹ, ಬೆಂಬಲಗಳನ್ನು ವಿನೀತವಾಗಿ ವಿನಮ್ರತೆಯಿಂದ ಬಯಸುತ್ತೇನೆ..
ನಮ್ಮ ನಡುವೆ ನೂರಾರು ಜಾಲತಾಣ ಮಾಧ್ಯಮಗಳಿವೆ. ಅದೆಲ್ಲವೂ ಕ್ಷಣ, ಕ್ಷಣದಲ್ಲಿ ನಿಮ್ಮ ಅಂಗೈಗೆ ಸುದ್ದಿಗಳ ರಾಶಿಯನ್ನೇ ತಂದು ಸುರಿಯುತ್ತದೆ. ಅದರಲ್ಲಿ ಸಭ್ಯ ಯಾವುದು, ಅಸಭ್ಯ ಯಾವುದು..? ಸತ್ಯ ಯಾವುದು..? ಮಿಥ್ಯೆ ಯಾವುದು..? ತಿಳಿಯದೇ ಗೊಂದಲವೂ ಉಂಟಾಗುತ್ತದೆ. ಇಂದೀಗ ಸತ್ಯ ಸುದ್ದಿ ತಿಳಿಯುವುದಕ್ಕೆ ಮುನ್ನವೇ, ಸುಳ್ಳು ಸುದ್ದಿ ಜಾಗತಿಕ ಪರ್ಯಟನೆ ನಡೆಸಿ ಮರಳಿರುತ್ತದೆ! ಆದ್ದರಿಂದ ಸಭ್ಯ, ಸುಸಂಸ್ಕೃತ ಸಮಾಜದ ಕಳಕಳಿಯಿಂದ, ಸಾಮಾಜಿಕ ಮಾಧ್ಯಮದ ಹೊಣೆಗಾರಿಕೆಯ, ನಾಗರಿಕ ಬದ್ಧತೆಯೊಂದಿಗೆ ‘ಕಣಿಪುರ’ ಕರಾವಳಿಯ ಕಲಾವಿಹಾರವಾಗುತ್ತದೆ. ಜತೆಗೆ ನಾಡು-ನುಡಿಗಳಿಗೂ ನಿತ್ಯ, ನಿರಂತರ ಧ್ವನಿಯಾಗುತ್ತಿದೆ. ಈ ಮೂಲಕ ವಿಸ್ತಾರವಾದ ವಿಶಾಲ ಜಗತ್ತಿನ ಓದುಗರ ಅಂಗೈಯಲ್ಲಿನ್ನು ‘ಕಣಿಪುರ’ವೂ ಇರಲಿದೆ.
ಈ ವರೆಗೆ ಮುದ್ರಣವನ್ನೇ ನೆಚ್ಚಿದ್ದ ನಮಗೆ ‘ಆನ್ಲೈನ್’ ಎಂಬುದು ಹೊಸ ಮಾರ್ಗ. ಇಲ್ಲಿ ಸಂಚರಿಸಿದ, ವ್ಯವಹರಿಸಿದ ಯಾವುದೇ ಅನುಭವಗಳಿಲ್ಲ.
ಆದರೂ ಆನ್ಲೈ ನಲ್ಲೂ ಸಭ್ಯ, ಸುಸಂಸ್ಕೃತ ಮಾಧ್ಯಮವೊಂದನ್ನು ಒದಗಿಸಿ, ಸಜ್ಜನರ ಸಂಘದ ಓದಿನ ಓಲುಮೆಯಿಂದ ನಲ್ಮೆಯ ನಾಡೊಂದನ್ನು ಕಟ್ಟಬಹುದೆನ್ನುವ ಆತ್ಮವಿಶ್ವಾಸ ನಮ್ಮದು. ಸಮಾಜದ ನಾಗರಿಕ ಮನೋವಿಕಾಸಕ್ಕೆ ಪೂರಕ, ಪ್ರೇರಕವಾದ ಋಣಾತ್ಮಕ ಸುದ್ದಿಗಳನ್ನಷ್ಟೇ ನೀಡುತ್ತಾ, ಧಾವಂತದ ಬ್ರೇಕಿಂಗ್ ಸುದ್ದಿಗಳ ಬೆನ್ನೇರದೇ, ಸ್ವಸ್ಥ ಸಮಾಜಕ್ಕೆ ನಾವು ಕನ್ನಡಿಯಾಗೋಣ. ನಮ್ಮದು ಆತುರಗಳಿಲ್ಲದ ಸಂಯಮದ ಪಯಣ. ನಲ್ಮೆಯ ಕಡೆಗೆ ನಿಲುಮೆಗಳ ಪಯಣ.
ನೀವು ಒಲವಿನಾರತಿಯೆತ್ತಿ ಸ್ವೀಕರಿಸುವಿರಿ ಮತ್ತು ಕೈ ಹಿಡಿದು ಮುನ್ನಡೆಸುವಿರೆಂದೇ ಭರವಸೆ. ಭರವಸೆಯೇ ಬದುಕು..ಅಲ್ಲವೇ??
– ಕಣಿಪುರ ಸುದ್ದಿಜಾಲ
ಮುಳ್ಳೇರಿಯ: ಆನೆ, ಹುಲಿ ಇನ್ನಿತರ ವನ್ಯಮೃಗಗಳ ಹಾವಳಿಯಿಂದ ಭೀತಿಯಲ್ಲಿರುವ ಅಡೂರು ಪಾಂಡಿ, ಇರಿಯಣ್ಣಿ ಮೊದಲಾದ ಪ್ರದೇಶದ ಜನವಸತಿ ಹೂಡಿರುವ ಪ್ರದೇಶದಲ್ಲೀಗ ಅತ್ಯಪರ್ವ ತಳಿಯ ಸಿಂಗಳೀಕವೊಂದು ಪತ್ತೆಯಾಗಿದೆ. ಪಶ್ವಿಮಘಟ್ಟದ ತಪ್ಪಲುಗಳಲ್ಲಿ ಮಾತ್ರವೇ ಕಂಡುಬರುವ ಈ ತಳಿಯ ವಾನರವು ವಂಶನಾಶ ಎದುರಿಸುತ್ತಿರುವ ಅತ್ಯಪರ್ವ ರ್ಗಕ್ಕೆ ಸೇರಿದ್ದು, ನೋಟಕರಿಗೆ ಇದು ಕೌತುಕ ಮೂಡಿಸಿದೆ.
ಇರಿಯಣ್ಣಿ, ಕಾನತ್ತೂರು ಪ್ರದೇಶದಲ್ಲಿ ಕಳೆದ ಕೆಲವು ಸಮಯಗಳಿಂದ ಇದು ಪತ್ತೆಯಾಗಿದ್ದರೂ ಕೃಷಿಕರಲ್ಲಿ ಇದು ಕುತೂಹಲಕ್ಕಿಂತ ಆತಂಕವನ್ನೇ ಮೂಡಿಸಿದೆ. ವನ್ಯಮೃಗಗಳ ಹಾವಳಿಯ ಆತಂಕ ಒಂದೆಡೆಯಾದರೆ ಮತ್ತೊಂದೆಡೆ ಮಂಗಗಳ ಹಾವಳಿ ವ್ಯಾಪಕ ಕೃಷಿನಾಶವನ್ನುಂಟುಮಾಡುತ್ತಿದೆ. ಈ ಸಾಲಿನಲ್ಲೀಗ ಸಿಂಗಳೀಕವೂ ಕಂಡುಬಂದಾಗ ಅಚ್ಚರಿಗಿಂತ ಆತಂಕ ಕೃಷಿಕರಲ್ಲಿದೆ. ಗುಂಪಿನಿಂದ ಹೊರತಾಗಿ ಏಕೈಕ ಸಿಂಗಳೀಕವೊಂದು ಕಂಡುಬಂದಿದ್ದು, ಈ ರ್ಗದ ವಾನರಗಳು ಏಕಾಂಗಿಯಾಗಿ ಬದುಕುತ್ತವೆಯೇ ಎಂದು ಕೂಡಾ ಸಂದೇಃವಾಗಿದೆ.
ಪ್ರಸ್ತುತ ಸಮಯದ ಅನುಕೂಲಕರ ಹವಾಮಾನದ ಹಿನ್ನೆಲೆಯಲ್ಲಿ ಸಿಂಗಳೀಕವು ಘಾಟಿ ಪ್ರದೇಶಗಳಿಂದ ನಾಡಿಗೆ ಬಂದಿರಬೇಕೆಂದು ಅಂದಾಜಿಸಲಾಗಿದೆ. ಈ ಹಿಂದೆಯೂ ಅಪರೂಪಕ್ಕೊಮ್ಮೆ ಈ ಪ್ರದೇಶದಲ್ಲಿ ಸಿಂಗಳೀಕ ಕಂಡುಬಂದಿದ್ದರೂ ಬಳಿಕ ನಾಪತ್ತೆಯಾಗಿತ್ತು. ಕೇರಳೀಯರು ಇದನ್ನು ‘ಹನುಮಾನ್ ಮಂಗ’ ಎಂದು ಕರೆಯುತ್ತಾರೆ. ಹಿರಿಯ ನಾಗರಿಕರಿಗೆ ಇದರ ಪರಿಚಯವಿದ್ದರೂ ಎಳೆಯರ ಪಾಲಿಗೆ ಇದನ್ನು ನೋಡುವುದೇ ಕೌತುಕವಾಗಿದೆ.
–ಕಣಿಪುರ ವೆಬ್ ಡೆಸ್ಕ್
ಯಕ್ಷಗಾನದಲ್ಲಿ ಬದಲಾವಣೆ ಬೇಕೋ ಬೇಡವೋ..? ಇದು ಕಾಲಾನುಕಾಲದ ಚರ್ಚೆ. ನಮ್ಮ ನಿತ್ಯ ಬದುಕಿನ ಜನಜೀಚನದಲ್ಲೇ ಸಾಕಷ್ಟು ಬದಲಾವಣೆ ಸಂಭವಿಸುತ್ತಲೇ ಇದೆ ಮತ್ತು ಆ ಬದಲಾವಣೆಗಳಿಗೆ ನಾವು ಒಗ್ಗಿಕೊಂಡಿದ್ದೇವೆ. ಆದರೆ ಯಕ್ಷಗಾನ ರಂಗಭೂಮಿಯ ವಿಚಾರ ಬಂದಾಗ ಏಕಾಏಕಿ ಕಲೆಯ ಔಚಿತ್ಯ ಅರಿಯದೇ, ಕಲಾ ಪ್ರೌಢಿಮೆಗಳಿಲ್ಲದೇ ಟೀಕಿಸುವುದು ಖಂಡಿತಾ ಸರಿಯಲ್ಲ. ಬದಲು ವಿಮರ್ಶೆಗಳು ಸ್ವಾಗತಾರ್ಹ. ವಿಮರ್ಶೆ ಎಂದರೆ ಬೈಯ್ಯುವುದೋ, ಅತಿರೇಕದಿಂದ ಹೊಗಳುವುದೋ ಎರಡೂ ಅಲ್ಲ. ವಿಮರ್ಶೆಗೂ ಕಲಾ ಮೀಮಾಂಸೆಯ ಅರಿವಿನ ಮಾನದಂಡಗಳಿವೆ. ಅದೇನೂ ಅರಿಯದೇ ಯಕ್ಷಗಾನದ ವಿಚಾರದಲ್ಲಿ ಎಲ್ಲರೂ ಪಂಡಿತರAತೆ ಮಾತಾಡುವುದೇ ಸಮಸ್ಯೆ ಎಂದಿದ್ದರು ಅಗಲಿದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ.
ವರ್ಷದ ಹಿಂದೆ ಉಡುಪಿ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ನಡೆದ ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶದಲ್ಲಿ ಆಯೋಜನೆಗೊಂಡ ಯಕ್ಷಗಾನ ಗೋಷ್ಟಿಯಲ್ಲಿ ಮಾತಾಡಿದ ಅವರು ಯಕ್ಷಗಾನದ ಪ್ರೇಕ್ಷಕರು ಕೂಡಾ ಕಲೆಯನ್ನು ಅರಿತು ಮಾತಾಡುವವರಾಗಬೇಕು ಎಂದರು. ವರ್ತಮಾನದ ಭಾಗವತಿಕೆಯ ವಿಚಾರವನ್ನೇ ಹೇಳುವುದಾದರೆ ಪೌರಾಣಿಕ ಪ್ರಸಂಗಗಳಲ್ಲಿ ನಾವು ಅನೇಕ ರಾಗಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಕೆಲವು ರಾಗಗಳೇ ನಷ್ಟವಾಗುತ್ತಿದೆ. ಉದಾಹರಣೆಗೆ ಭೀಷ್ಮ ವಿಜಯದ “ಕರುಣ ನಿಧಿ ಅವತರಿಸು ಸರ್ವಜ್ಞ ನೀನು” ಪದ್ಯವನ್ನು ಕಾಂಬೋಧಿ ಜಂಪೆಯಲ್ಲಿ ಗುರು ಉಪ್ಪೂರರಿಂದ ಕಲಿತಿದ್ದೆ. ಅದನ್ನೇ ಅನುಸರಿಸಿ ಹಾಡುತ್ತಿದ್ದೆ. ಉಪ್ಪೂರರಲ್ಲಿ ನನಗೆ ಜತೆಯಾಗಿದ್ದ ಕಾಳಿಂಗ ನಾವಡರು, ಕಡತೋಕರು ಹಾಗೆಯೇ ಹಾಡುತ್ತಿದ್ದರು. ಈಗ ಅದನ್ನು ಹಾಡುವುದೇ ಇಲ್ಲ. ಈಗಿನವರು ಹಾಡುವ ವಿಧಾನವೇ ಬದಲಾಗಿದೆ. ಈ ಗಾಯನ ಕ್ರಮ ಸೂಕ್ತವೋ, ಅಗತ್ಯವೋ, ಬೇಡವೋ..?
ಪ್ರಾಜ್ಞರೇ ಹೇಳಬೇಕು. ಹೀಗೆ ಅನೇಕ ಪದ್ಯಗಳನ್ನು ಹಾಡುವ ಕ್ರಮಗಳೇ ಬದಲಾಗಿವೆ. ಇದು ಸರಿಯೋ, ತಪ್ಪೋ? ಇದಕ್ಕುತ್ತರಿಸಲು ನನ್ನಿಂದಾಗದು. ಇದಕ್ಕೆ ವಿಮರ್ಶಕರೇ ಉತ್ತರಿಸಬೇಕು ಎಂದು ಆಹ್ವಾನಿಸಿದ್ದರು ಧಾರೇಶ್ವರ ಭಾಗವತರು.
ತಾನು ಹಾಡುವ ರಾಗ ಯಾವುದು? ಅದರ ಸ್ಥಾಯೀಭಾವದ ರಸ ಏನು ಎಂಬುದು ಭಾಗವತನಿಗೆ ನಿಖರವಾಗಿ ಗೊತ್ತಿರಬೇಕು. ಯಾವ ರಾಗವನ್ನು ಎಲ್ಲಿ, ಯಾವ ಸಂದರ್ಭದಲ್ಲಿ ಬಳಸಬೇಕೆಂಬ ಔಚಿತ್ಯ ಪ್ರಜ್ಞೆ ಭಾಗವತ ಅರಿತಿರಲೇಬೇಕು. ಔಚಿತ್ಯ ಅರಿಯದೇ ತನಗೆ ಗೊತ್ತುಂಟು ಎಂಬ ಮಾತ್ರಕ್ಕೆ ಅನಪೇಕ್ಷಣೀಯ ಜಾಗದಲ್ಲಿ ಸಿಕ್ಕ ಸಿಕ್ಕ ರಾಗಗಳನ್ನೆಲ್ಲಾ ಬಳಸಕೂಡದು ಎಂದಿದ್ದರು ಧಾರೇಶ್ವರ ಭಾಗವತರು. ಭಾಗವತ ಎಂದರೆ ಕೇವಲ ಹಾಡುಗಾರನಲ್ಲ. ಪ್ರಸಂಗದ ಸಮಗ್ರ ಚಿತ್ರಕಲ್ಪನೆಯುಳ್ಳ ರಂಗತಂತ್ರಜ್ಞ. ಪಾತ್ರದ ಪರಿಕಲ್ಪನೆ, ಪ್ರಸ್ತುತಿಯ ವಿನ್ಯಾಸ, ಪದ್ಯದ ಸಾಹಿತ್ಯ ಜ್ಞಾನ, ಅಕ್ಷರ ಸ್ಪುಟತೆ, ಪದ್ಯಗಳ ಪರಿಧಿ ಮತ್ತು ಅರ್ಥದ ಪರಿಕಲ್ಪನೆಗಳು ಗೊತ್ತಿರಲೇಬೇಕು. ಆದ್ದರಿಂದಲೇ ಭಾಗವತರನ್ನು ರಂಗದ ನಿರ್ದೇಶಕ ಎನ್ನುವುದು. ಇಂದು ಏನಾಗುತ್ತಿದೆ ಎಂಬುದು ನನಗಿಂತ ಹೆಚ್ಚು ನಿಮಗೆ ಗೊತ್ತಿದೆ ಎಂದು ನಿಟ್ಟುಸಿರಿಟ್ಟಿದ್ದರು ಸುಬ್ರಹ್ಮಣ್ಯ ಧಾರೇಶ್ವರ ಭಾಗವತರು.
ಸದಭಿರುಚಿಯ ಸಿನಿವi ಮತ್ತು ಪ್ರತಿಭಾನ್ವಿಕ ಕಲಾವಿದರ ಕೊಡುಗೆಯಿಂದ ರಾಷ್ಟಷ್ರಮಟ್ಟದಲ್ಲಿ ತಲೆ ಎತ್ತಿನಿಂತಿದ್ದ ಮಲಯಾಳಂ ಚಿತ್ರರಂಗವೇ ಈಗ ನಾಚಿ ತಲೆ ತಗ್ಗಿಸಿದೆ. ಮಲಯಾಳಂ ಸಿನಿಮ ಇಂಡಸ್ಟಿçಯಲ್ಲಿ ಯಾವೊಬ್ಬ ಸ್ತಿçÃಯೂ ಸುರಕ್ಷಿತಳಲ್ಲ ಎಂಭ ಆಘಾತಕಾರಿ ಅಂಶ ಬೆಳಕಿಗೆ ಬರುವುದರೊಂದಿಗೆ ಇಡೀ ಕೇರಳವೇ ಮುಜುಗರ ಪಡುವಂತಾಗಿದೆ. ಸಿನಿಮ ರಂಗದಲ್ಲಿದ್ದವರನ್ನೆಲ್ಲ ಅಭಿಮಾನದ ಬದಲಿಗೆ ಅನುಮಾನದ ಕಣ್ಣಲ್ಲಿ ನೋಡುವಂತಾಗಿದೆ.
ಕೇರಳ ಚಿತ್ರರಂಗದಿAದ ಕೇಳಿಬಂದಿರುವ ಆಪಾದನೆಗಳ ಕುರಿತು ಪ್ರಾಮಾಣಿಕ ತನಿಖೆ ನಡೆದು ಎಂಥಾ ಸ್ಟಾರ್ ನಟರೇ ಆದರೂ, ಅಪರಾಧ ನಡೆದಿರುವುದು ನಿಜವೇ ಆಗಿದ್ದಲ್ಲಿ
ಶಿಕ್ಷೆ ದೊರೆಯಬಹುದೇ..? ಕಳಂಕಿತ ಸಿನಿಮ ರಂಗವನ್ನು ಮತ್ತೆ ಸ್ವಚ್ಛಗೊಳಿಸಲು ಸಾಧ್ಯವೇ? ಸಿನಿಮಾ ರಂಗವನ್ನು ಕಂಬAಧಬಾಹುವಿನಲ್ಲಿರಿಸಿಕೊAಡ ಮಾದಕಜಾಲದ ಕೈಯ್ಯಿಂದ ರಕ್ಷಿಸಬಹುದೇ..? ಹೆಣ್ಣುಬಾಕ ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕರನ್ನು ಮುಟ್ಟುವ ಧೈರ್ಯ ಸರಕಾರಕ್ಕುಂಟೇ..? ಇತ್ಯಾದಿ ಜನತಾ ಪ್ರಶ್ನೆಗಳ ಮುಂದೆ ಕೇರಳ ಸರಕಾರ ಉತ್ತರಿಸಲೇಬೇಕಾಗಿದೆ. ದಿಟ್ಟ ನಿರ್ಧಾರಕ್ಕೆ ಮುಂದಾಗಲೇಬೇಕಾಗಿದೆ. ಇದು ಆಡಳಿತ ಪಕ್ಷದ ಮಾನಾಭಿಮಾನದ ವಿಷಯ.
ಮಲಯಾಳಂ ಸಿನಿಮಾ ರಂಗ ೧೫ಮಂದಿ ಸ್ಟಾರ್ ಕಲಾವಿದರ ಕಪಿಮುಷ್ಟಿಯಲ್ಲಿದ್ದು, ಇಂಡಸ್ಟಿçಗೆ ಬರುವ ಕಲಾವಿದೆಯರನ್ನು ವ್ಯಾಪಕ ಲೈಂಗಿಕ ಶೋಷಣೆಗೆ ಬಳಸುತ್ತಾರೆ ಮತ್ತು ನಿರಾಕರಿಸಿದರೆ ಅವಕಾಶ ವಂಚಿತರನ್ನಾಗಿಸಿ ದೌರ್ಜನ್ಯ, ಕಿರುಕುಳ ಮೀಡುತ್ತಾರೆ. ಅನೇಕರು ಸ್ವಾಭಿಮಾನ ಅಡವಿಟ್ಟು ಚಿತ್ರರಂಗದಲ್ಲಿ ದುಡಿಯುತ್ತಾರೆ ಎಂದು ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ಆಯೋಗ ಸರಕಾರಕ್ಕೆ ಸಲ್ಲಿಸಿದ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ. ಈ ತನಿಖಾ ವರದಿಯು ಸರಕಾರಕ್ಕೆ ದೊರಕಿ ನಾಲ್ಕು ವರ್ಷಗಳು ಸಂದರೂ ಇದನ್ನು ಬಚ್ಚಿಟ್ಟು, ಪ್ರಕಟಗೊಳಿಸಲು ಇಷ್ಟು ವಿಳಂಬಿಸಿದ್ದೇಕೆ ಎಂಬ ಪ್ರಶ್ನೆಯೊಂದಿಗೆ ಕೇರಳ ಡಂಗುರ ಸಾರುತ್ತಿದ್ದ ಸಾಂಸ್ಕೃತಿಕ ಕಲಾ ಮಹತ್ವಿಕೆಯೇ ಈಗ ಅಪಹಾಸ್ಯಕ್ಕೊಳಗಾಗಿದೆ.
ಒಟ್ಟು ೨೯೫ಪುಟಗಳ ತನಿಖಾ ವರದಿಯಲ್ಲಿ ಅತ್ಯಂತ ಸೂಕ್ಷö್ಮ ಸಂಗತಿಗಳಿವೆ. ಈ ಕಾರಣದಿಂದಲೇ ೬೩ಪುಟಗಳಿಗೆ ಕತ್ತರಿ ಹಾಕಲಾಗಿದೆ. ಬಳಿಕ ಉಳ್ಳ ಪುಟಗಳಲ್ಲೂ ಉಲ್ಲೇಖಿತವಾಗಿರುವ ವಿಚಾರಗಳು ಮಲಯಾಳಂ ಸಿನಿಮಾ ರಂಗದ ಪುರುಷ ಮೇಧಾವಿತ್ವದ ವಿಕೃತ ಮುಖವನ್ನು ಅನಾವರಣಗೊಳಿಸಿದೆ. ಸಿನಿಮಾದಲ್ಲಿ ನಟಿಸುವುದು ಮತ್ತು ಸಿನಿಮಾ ರಂಗದಲ್ಲಿ ಉದ್ಯೋಗ ಪಡೆಯಲು ಕಲಾವಿದೆಯರು, ಮಹಿಳೆಯರು ಬಯಸಿದವರಿಗೆ ತಮ್ಮ ದೇಹ ಸಮರ್ಪಿಸಬೇಕು ಮತ್ತು ಸ್ವಾಭಿಮಾನದಲ್ಲಿ ರಾಜಿ ಮಾಡಿಕೊಳ್ಳಬೇಕೆಂಬ ಪರಿಶ್ಥಿತಿ ಇದೆಯೆಂಬುದು ಅತ್ಯಂತ ಹೀನಾಯ ಅಲ್ಲವೇ..?
ಮಹಿಳಾ ಕಲಾವಿದೆಯರ ಸುರಕ್ಷತೆಯನ್ನೇ ಇದು ಪ್ರಶ್ನಿಸುವಂತೆ ಮಾಡಿದೆ. ಸ್ತಿçà ಸಮಾನತೆ, ಮಹಿಳಾ ಸಂರಕ್ಷಣೆಯೆAದು ಪ್ರಬಲ ಚಳುವಳಿ, ರಾಜಕೀಯ ನಡೆಯುವ ಕೇರಳದಲ್ಲೇ ಪರಿಸ್ಥಿತಿ ಹೀಗಿದೆಯೆಂದರೆ, ಇದು ನಾಡಿನ ಸಾಂಸ್ಕೃತಿಕ ಶ್ರೀಮುಖವನ್ನೇ ವಿರೂಪಗೊಳಿಸಿದಂತಲ್ಲವೇ..? ಈ ಮೂಲಕ ಆಗಿರುವ ಕಳಂಕಕ್ಕೆ ಪರಿಹಾರ ಹೇಗೆಂಬುದೇ ಪ್ರಶ್ನೆಯಾಗಿದೆ.
೨೦೧೭ರಲ್ಲಿ ಕೊಚ್ಚಿಯಲ್ಲಿ ಪ್ರಸಿದ್ದ ನಟಿಯೊಬ್ಬರನ್ನು ಅಪಹರಿಸಿದ ಸ್ಟಾರ್ ನಟನೊಬ್ಬನ ಗೂಂಡಾ ಸಹಚರರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದಕ್ಕೆ ತೀವ್ರ ಪ್ರತಿರೋಧ ಒಡ್ಡಿದ ನಟಿಯ ಏಕಾಂಗಿ ಹೋರಾಟದಿಂದ ಕೇರಳದಲ್ಲಿ ಈ ವಿಷಯ ಭಾರೀ ಗುಲ್ಲೆಬ್ಬಿಸಿತ್ತು. ಬಳಿಕ ಸರಕಾರವೇ ಎಚ್ಚೆತ್ತು ಹೈಕೋರ್ಟಿನ ನಿವೃತ್ತ ನ್ಯಾಯಾಧೀಶೆ ಹೇಮಾ ನೇತೃತ್ವದ ಆಯೋಗವನ್ನು ತನಿಖೆಗೆ ನೇಮಿಸಿತ್ತು. ಆಯೋಗವು ಸಿನಿಮಾ ರಂಗದಲ್ಲಿ ಮಹಿಳೆರು ಎದುರಿಸುವ ಸಂಕಷ್ಟ, ಸಮಸ್ಯೆ, ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ, ಹೇಳಿಕೆಗಳನ್ನು ಪಡೆದು ೨೦೧೯ರಲ್ಲೇ ಸರಕಾರಕ್ಕೆ ತನಿಖಾ ವರದಿಯನ್ನು ನೀಡಿತ್ತು. ಆದರೆ ಈ ವರದಿ ಬಹಿರಂಗವಾಗಿರಲಿಲ್ಲ. ಗೌಪ್ಯವಾಗಿಯೇ ಇರಿಸಲಾಗಿತ್ತು. ಈ ವಿಳಂಬ ನೀತಿಯಿಂದಾಗಿ ಸರಕಾರವೂ ಪ್ರತಿಷ್ಠಿತ ನಟರ ಪರವಾಗಿದ್ದು, ಮಹಿಳಾ ಶೋಷಣೆಗೆ ಆಡಳಿತವೂ ಬೆಂಬಲ ನೀಡುತ್ತಿದೆಯೇ ಎಂಬ ಗುಮಾನಿ ಜನರಲ್ಲಿ ಮೂಡುವಂತಾಗಿದೆ.
ಸಿನಿಮಾ ರಂಗದ ಪ್ರಭಾವಿ ನಟರೂ ಒಳಗೊಂಡ ಪ್ರಕರಣ ಇದಾಗಿದೆ. ಇದರಿಂದಾಗಿ ಕೇರಳದ ಸಾಂಸ್ಕೃತಿಕ ಸಭ್ಯತೆಯ ಮುಖವಾಡ ಕಳಚಿ ಬಿದ್ದಿದೆ. ಇನ್ನೀಗ ಸರಕಾರ ದಿಟ್ಟತೆಯ ನಿರ್ಧಾರ ಕೈಗೊಳ್ಳದೇ ಇದ್ದರೆ ಜನತಾ ವಿರೋಧವನ್ನು ತಾನಾಗಿ ಮೈಮೇಲೆಳೆದುಕೊಳ್ಳಬೇಕಾಗುತ್ತದೆ.
ಕಣಿಪುರ ಸುದ್ದಿಜಾಲ
———————-
ಜಗತ್ತಿಗೆ ತುಳುನಾಡಿನ ಕೊಡುಗೆಯಾದ ಅತ್ಯಂತ ಪ್ರಾಚೀನ ಸಮರಕಲೆ ‘ಕಳರಿಪಯಟ್ಟ್’ ಕರಗತ ಮಾಡುವುದರಲ್ಲಿ ನಿರತರಾಗಿ ಅಚ್ಚರಿ ಮೂಡಿಸಿದ್ದಾರೆ. ರಾಷ್ಟಷ್ರಪ್ರಶಸ್ತಿ ವಿಜೇತ ‘ಕಾಂತಾರ’ದ ನಟ, ನಿರ್ದೇಶಕ ಋಷಭ್ ಶೆಟ್ಟಿ. ಇದೀಗ ಚಿತ್ರೀಕರಣವಾಗುತ್ತಿರುವ ಕಾಂತಾರ-೨’ ಚಿತ್ರದಲ್ಲಿ ಅವರು ಸಮರಕಲೆ ‘ಕಳರಿಪಯಟ್ಟ್’ ನೊಂದಿಗೆ ಕಾಣಿಸಿಕೊಳ್ಳುವರು. ತನ್ಮೂಲಕ ತುಳುನಾಡಿಂದಲೇ ಕಣ್ಮರೆಯಾಗಿರುವ ನೆಲಮೂಲದ ಸಮರಕಲೆಯನ್ನು ಮತ್ತೆ ಈ ನೆಲಕ್ಕೆ ತೋರಿಸಿಕೊಡುವ ಸಾಹಸದಲ್ಲವರು ನಿರತರಾಗಿದ್ದಾರೆ. ಇದು ಋಷಭ್ ಅಭಿಮಾನಿಗಳ ಸಹಿತ ಎಲ್ಲರಲ್ಲೂ ಕೌತುಕ ಸೃಷ್ಟಿಸಿದೆ.
ತುಳುನಾಡಿನಲ್ಲಿ ಶತಮಾನಗಳ ಹಿಂದೆ ತೌಳವ ಅರಸೊತ್ತಿಗೆ ಮೆರೆಯುವ ಕಾಲಕ್ಕೆ ಅನೇಕ ಗರಡಿಗಳಿದ್ದುವು. ಇಲ್ಲಿ ವಿಶೇಷ ಶಾರೀರಿಕ ಪಳಗುವಿಕೆಯ ನೃತ್ಯ ಶೈಲಿಯ ಕತ್ತಿವರಸೆ ವಿದ್ಯೆಯನ್ನು ಗುರುಕುಲ ಮಾದರಿಯಲ್ಲಿ ಕಲಿಸಿಕೊಡುವ ಸಂಪ್ರದಾಯಗಳಿತ್ತು. ಆ ಕಾಲಕ್ಕೆ ಕೇರಳದ ಪ್ರಾದೇಶಿಕ ರಾಜ ಮನೆತನದವರು ತುಳುನಾಡಿನ ಗರಡಿಗೆ ಬಂದು ಈ ಸಮರಕಲೆಯಲ್ಲಿ ವಿಶೇಷ ಪರಿಣತಿ ಪಡೆಯುತ್ತಿದ್ದರು. ಈ ದಾಖಲಾತಿಗಳು ಅಂದಿನ ಕಾಲದ ಕೇರಳದ ‘ವಡಕ್ಕನ್ ಪಾಟ್ಟ್’ (ಜನಪದ ಹಾಡು) ಗಳಲ್ಲಿವೆ. ಆದರೆ ತುಳುನಾಡಿನಲ್ಲಿ ತೌಳವ ಅರಸೊತ್ತಿಗೆ ನಾಶವಾಗುವುದರೊಂದಿಗೆ ಈ ಸಮರಕಲೆಯೂ ನಾಶವಾಗಿದೆ. ಆದರೆ ಕೇರಳದಲ್ಲಿ ಇದು ಪ್ರಾಚೀನ ಯುದ್ಧಕಲೆಯೆಂಬ ಆರಾಧನೆಯೊಂದಿಗೆ ಈಗಲೂ ಕಳರಿಪಯಟ್ಟ್ ಪ್ರಸಿದ್ಧವಾಗಿಯೇ ಚಾಲ್ತಿಯಲ್ಲಿದೆ.
ಕಳರಿ’ ಎಂದರೆ ಗರಡಿ ಎಂದರ್ಥ. ‘ಪಯಟ್ಟ್’ ಎಂದರೆ ಹೋರಾಟ ಎಂಬರ್ಥ. ಪ್ರಪಂಚದಲ್ಲೇ ಯುದ್ಧ ವಿದ್ಯೆಗೆ ಕಲೆಯನ್ನು ಬಳಸಿದ ಮೊದಲಿಗರು ತುಳುನಾಡಿನವರು. ಈಗ ತುಳುನಾಡಲ್ಲಿ ಈ ಸಮರಕಲೆ ಅಳಿದಿದೆಯಾದರೂ ಜಗತ್ತಿಗೆ ಇದು ಪಸರಿಸಿದೆ. ಕೇರಳದ ಪಾರಂಪರಿಕ ಸಮರಕಲೆಯೆಂದೇ ಬಿಂಬಿತವಾಗಿದೆ. ಇಂಥ ಸಮರಕಲೆಯಲ್ಲಿ ಕತ್ತಿ, ಗುರಾಣಿ ಹಿಡಿದು ಕಾದಾಡುವ ಚಿತ್ರವೊಂದನ್ನು ಋಷಭ್ ಶೆಟ್ಟಿ ತಮ್ಮ ಇನ್ಸ್ಟಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ‘ಕಾಂತಾರ-೨’ ಚಿತ್ರದ ಕುರಿತಾಗಿ ಜನರಲ್ಲಿ ಕೌತುಕದ ನಿರೀಕ್ಷೆ ಮೂಡಿಸಿದೆ. ಕೇವಲ ಕರ್ನಾಟಕವಲ್ಲದೇ ಕೇರಳದಲ್ಲೂ ‘ಕಳರಿಪಯಟ್ಟ್’ ಕಲಿಯುವ ಋಷಭ್ ಕುರಿತು ಕೌತುಕದ ಸುದ್ದಿಯಾಗಿದೆ.
೯೦ರ ದಶಕದಲ್ಲಿ ಮಮ್ಮುಟ್ಟಿ ಅಭಿನಯದ ‘ವಡಕ್ಕನ್ ವೀರಗಾಥ’ ಎಂಬ ಸಿನಿಮಾದಲ್ಲಿ ಸ್ವತಃ ಮಮ್ಮುಟ್ಟಿ ‘ಕಳರಿಪಯಟ್ಟ್’ ಎಂಬ ಕತ್ತಿ ಕಾಳಗ ನಡೆಸುವುದನ್ನು ಕಲಾತ್ಮಕ ವಾಗಿ ತೋರಿಸಲಾಗಿತ್ತು. ಅದಾಗಿ ೩೦ವರ್ಷಗಳ ಬಳಿಕ ಕನ್ನಡದಲ್ಲಿ ಇದೇ ಮೊದಲಬಾರಿಗೆ ಕನ್ನಡ ನಾಡಿನ ನೆಲಮೂಲದ ಕಲೆಯೊಂದರತ್ತ ಸಿನಿಮಾ ದೃಷ್ಟಿ ಬಿದ್ದಿದೆ. ತನ್ನ ಚಿತ್ರಗಳಲ್ಲಿ ತಾನು ‘ಭಾರತೀಯ ಪರಂಪರೆಯ ಅಸ್ಮಿತೆಯನ್ನು ತೋರಿಸುವೆ’ ಎಂದು ಋಷಭ್ ಶೆಟ್ಟಿ ಸುಮ್ಮನೆ ಹೇಳಿದ್ದಲ್ಲ. ಮೊದಲ ‘ಕಾಂತಾರ’ ದಲ್ಲಿ ಕಂಬಳದ ಕೋಣ ಓಡಿಸಿ, ದೈವವೇ ದೇಹಕ್ಕೆ ಆವಾಹನೆಯಾದುದನ್ನು ಅದ್ಭುತವಾಗಿ ಪ್ರದರ್ಶಿಸಿ, ರಾಷ್ಟ್ರಪ್ರಶಸ್ತಿ ಮುಡಿದರೆ, ಇದೀಗ ಚಿತ್ರೀಕರಣ ಹಂತದಲ್ಲಿರುವ ಕಾಂತಾರ-೨ನಲ್ಲಿ ‘ಕಳರಿಪಯಟ್ಟ್’ ಮಾಡುವ ಕತ್ತಿವರಸೆಯ ಯೋಧನಾಗಿ ನಮ್ಮ ನೆಲದ ಪೂರ್ವ ಸಂಸ್ಕೃತಿಗೆ ಅವರು ಮುಖವಾಗುತ್ತಿದ್ದಾರೆ.
-ಕಣಿಪುರ ಸುದ್ದಿಜಾಲ
ಯಕ್ಷಗಾನಕ್ಕೆ ಸಿನಿಮ ಕಥೆಗಳೇನೂ ಹೊಸತಲ್ಲ. ಸಿನಿಮ ಕಥೆಗಳನ್ನಾಯ್ದು ಯಕ್ಷಗಾನೀಯವಾಗಿ ಹೆಣದು ಪ್ರದರ್ಶನ ಜಯಭೇರಿ ಕಂಡ ಹಲವು ಪ್ರಸಂಗ ಯಕ್ಷಗಾನದಲ್ಲಾಗಿದೆ. ಆದರೆ ‘ವೀರ ಚಂದ್ರಹಾಸ’ ಎಂಬ ಯಕ್ಷಗಾನ ಪ್ರಸಂಗ ಮಾದರಿಯ ಶೀರ್ಷಿಕೆಯೊಂದಿಗೆ ಯಕ್ಷಗಾನದ ವೇಷ ಕತ್ತಿ ಮಸೆಯುವ ದೃಶ್ಯ ಸಹಿತ ಸಿನಿಮ ಟೀಸರ್ ಬಿಡುಗಡೆಯಾಗಿದ್ದು, ಯಕ್ಷಗಾನ ವಲಯದಲ್ಲಿದು ಕೌತುಕ ಮೂಡಿಸಿದೆ. ಜತೆಯಲ್ಲೇ ಅಬ್ಬರದ ಪ್ರಚಾರವನ್ನೂ ಪಡೆದು ಕುತೂಹಲ ಕೆರಳಿಸಿದೆ.
ಚಂದನವನ ದ ಪ್ರತಿಭಾವಂತ ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಬಳಗ ಈ ಸಿನಿಮ ನಿರ್ದೇಶಿಸಿದ್ದು ‘ಭಾರತೀಯ ಸಿನಿಮ ರಂಗದಲ್ಲೇ ಇದೊಂದು ವಿನೂತನ ಮತ್ತು ಭಿನ್ನ ಪ್ರಯೋಗ” ಎಂಬ ಹೇಳಿಕೆಯೊಂದಿಗೆ ಸಿನಿಮ ಕುರಿತು ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂತಾರ, ಕೆಜಿಎಫ್ ಮೊದಲಾದ ಚಿತ್ರಗಳ ಬಳಿಕ ಕನ್ನಡ ಚಿತ್ರರಂಗವನ್ನು ಭಾರತೀಯ ಚಿತ್ರರಂಗವೇ ಗೌರವದ ಬೆರಗಿನಿಂದ ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ನೆಲಮೂಲದ ಸಂಸ್ಕೃತಿ ಯಕ್ಷಗಾನವನ್ನು ದೃಶ್ಯಮಾಧ್ಯಮದಲ್ಲಿ ಬಿಂಬಿಸುವ ಈ ಪ್ರಯತ್ನವೂ ಸಹಜವಾಗಿಯೇ ಕುತೂಹಲ ಮೂಡಿಸಿದೆ.
ಯಕ್ಷಗಾನ ವೇಷಗಳೆರಡು ಯುದ್ಧದಲ್ಲಿ ತೊಡಗಿ ಕತ್ತೆ ಮಸೆಯುವ ದೃಶ್ಯದೊಂದಿಗೆ ಸಿನಿಮ ಟೀಸರ್ ಬಿಡುಗಡೆಯಾಗಿದ್ದು, ಶೀಘ್ರವೇ ಬೆಳ್ಳಿತೆರೆಯಲ್ಲಿ ಯಕ್ಷಗಾನ ಎಂಬ ಅದ್ದೂರಿ ಪ್ರಚಾರ ಪಡೆದಿದೆ. ಕರಾವಳಿಯ ಜನರೆಲ್ಲರೂ ರಂಗಸ್ಥಳದಲ್ಲಷ್ಟೇ ಯಕ್ಷಗಾನ ದೃಶ್ಯವೈಭವ ಕಂಡವರು. ಈಗ ಸಿನಿಮಾದಲ್ಲೂ ಯಕ್ಷಗಾನ ನೋಡುವ ಅವಕಾಶ ಒದಗಿದೆ. ಇಡೀ ದೇಶಕ್ಕೆ ತುಳುನಾಡಿನ ದೈವಾರಾಧನೆಯನ್ನು ಪರಿಚಯಿಸಿದ ಕಾಂತಾರ ಅರಳಿಕೊಂಡ ಅದೇ ನೆಲದ ನಿರ್ದೆಶಕರಿಂದ ಯಕ್ಷಗಾನವೂ ರಾಷ್ಟ್ರಮಟ್ಟಕ್ಕೆ ಅರಳಿ, ಘಮಿಸಬಹುದೇ ಎಂಬುದೀಗ ನಿರೀಕ್ಷೆ.
ಸಿನಿಮ ಜನಪ್ರಿಯ ಮತ್ತು ಪ್ರಭಾವಿ ದೃಶ್ಯಮಾಧ್ಯಮ. ಇಲ್ಲಿ ಯಕ್ಷಗಾನದಂತಹ ಕಲೆಯೊಂದನ್ನು ಹೇಗೆ ಚಿತ್ರಿಸಿಕೊಂಡಿದ್ದಾರೆAಬುದೇ ಕೌತುಕ. ಭಾರತದಲ್ಲಿ ಅನ್ಯಾನ್ಯ ಭಾಷೆಗಳಲ್ಲಿ ಅನೇಕ ಕಲೆಗಳ ಕುರಿತು ಕಲಾತ್ಮಕ ಚಿತ್ರಗಳು ಬಂದಿವೆ. ಈ ಸಾಲಿನಲ್ಲಿ ಕನ್ನಡದಲ್ಲಿ ಕಲೆಯ ಕುರಿತು ಕಲಾತ್ಮಕ ಚಿತ್ರಗಳು ಕಡಿಮೆ ಸಂಖ್ಯೆಯಲ್ಲಿ ಬಂದಿವೆ. ಯಕ್ಷಗಾನವನ್ನರಿಯದ ವಿಶಾಲ ಕನ್ನಡ ಪ್ರದೇಶ ಮತ್ತು ಸಮಗ್ರ ಭಾರತಕ್ಕೆ ನೆಲಮೂಲದ ಕಲೆಯನ್ನು ಪ್ರಚಾರಪಡಿಸಿ, ಪ್ರಭಾವ ಬೀರುವಲ್ಲಿ “ವೀರ ಚಂದ್ರಹಾಸ’ ಯಶಸ್ವಿಯಾಗಲೆಂದೇ ಯಕ್ಷಗಾನ ಪ್ರೇಮಿಗಳ ಹಾರೈಕೆ.
ಈ ಸಿನಿಮದಲ್ಲಿ ಯಕ್ಷಗಾನ ಕಲಾವಿದರು ಯಕ್ಷಗಾನೀಯ ವೇಷದಲ್ಲೇ ಕಾಣಿಸಿಕೊಳ್ಳುವುದು ವಿಶೇಷ. ಈಗಾಗಲೇ ಅನೇಕ ಯಕ್ಷಗಾನ ಕಲಾವಿದರು ಬೇರೆ, ಬೇರೆ ಸಿನಿಮದಲ್ಲಿ ಕಾಣಿಸಿಕೊಂಡಿದ್ದಾರಾದರೂ ಯಕ್ಷಗಾನ ವೇಷಗಳೇ ಪಾತ್ರವಾಗುವ ರೀತಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಬಡಗುತಿಟ್ಟಿನ ಪ್ರಸಿದ್ಧ ಯುವ ಕಲಾವಿದರಾದ ಪ್ರಸನ್ನ ಶೆಟ್ಟಿಗಾರ್, ಉದಯ ಹೆಗಡೆ ಕಡಬಾಳ, ಹಾಸ್ಯಗಾರ ಶ್ರೀಧರ್ ಕಾಸರಕೋಡು, ರವೀಂದ್ರ ದೇವಾಡಿಗ, ಸಿನಿಮ-ಕಿರುತೆರೆ ಮತ್ತು ಯಕ್ಷಗಾನ ಕಲಾವಿದೆ ನಾಗಶ್ರೀ ಜಿ.ಎಸ್, ರಂಗಕಲಾವಿದೆ ಶ್ವೇತ ಅರೆಹೊಳೆ ಸಹಿತ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.