70
ಕಾಸರಗೋಡು(ಅ. 8):
ನರೇಂದ್ರ ಮೋದಿ ಆಡಳಿತ ಸಾರಥ್ಯದ 25ನೇ ವರ್ಷಾಚರಣೆಯ ಅಂಗವಾಗಿ ಬಿಜೆಪಿ ಉದುಮ ಮಂಡಲ ಘಟಕದ ನೇತೃತ್ವದಲ್ಲಿ ರಕ್ತ ದಾನ ಶಿಬಿರ ನಡೆಯಿತು.
ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಮೀಳಾ ಮಜಲ್ ಉದ್ಘಾಟಿಸಿದರು.
ಸಾಮಾಜಿಕ ಕಳಕಳಿಯಂಗವಾಗಿ ರಕ್ತದಾನದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡರು.
ಬಿಜೆಪಿ ಮಂಡಲ ಪ್ರ. ಕಾರ್ಯದರ್ಶಿ ಸೌಮ್ಯ ಪದ್ಮನಾಭನ್, ವಿನಿಲ್ ಕುಮಾರ್, ಗೀತಾ ಕುಮಾರನ್, ಮಂಡಲ ಕಾರ್ಯದರ್ಶಿಗಳಾದ ಶೋಭಾ, ಶ್ರೀಜಾ ವಿನೋದ್, ಶ್ಯಾಮ್ ಪ್ರಸಾದ್, ಮಧುಸೂದನನ್, ರತೀಶ್, ಪ್ರಸಾದ ತೖರೆ ಮೊದಲಾದವರು ನೇತೃತ್ವ ನೀಡಿದರು. ಬಿಜೆಪಿ ವತಿಯಿಂದ ದೇಶ ವ್ಯಾಪಕ ನಡೆಯುವ ಸೇವಾ ಸಂಕಲ್ಪ ಅಭಿಯಾನದ ಸಲುವಾಗಿ ರಕ್ತದಾನ ಶಿಬಿರ ಆಯೋಜಿಸಲಾಯಿತು.





