ಕಾಸರಗೋಡು (ಅ. 8):
ರಾಜ್ಯ ಯುವ ಜನ ಕ್ರೀಡಾ ಸಚಿವ ರ ವಿರುದ್ಧ ಪ್ರತಿಭಟನೆಯಂಗವಾಗಿ ಡಿವೖಎಫ್ಐ ನಡೆಸಿದ ಕಪ್ಪು ಬಾವುಟ ಪ್ರದರ್ಶಿಸುವ ಚಳುವಳಿಯಲ್ಲಿ ಪಾಲ್ಗೊಂಡ ಅಪರಾಧದಂತೆ ಎಸ್. ಟಿ ಪ್ರಮೋಟರ್ ಒಬ್ಬರ ಹುದ್ದೆಗೆ ಸಂಚಕಾರ ಬಂದಿದೆ.
ಕಾಸರಗೋಡು ಟ್ರೖಬಲ್ ಡೆವಲಪ್ಮೆಂಟ್ ಇಲಾಖೆಯ ಆಧೀನ ಕಾರ್ಯಾಚರಿಸುವ ಎಸ್ ಟಿ ಹುದ್ದೆಯಲ್ಲಿರುವ ಬೇಡಡ್ಕ ಗ್ರಾ. ಪಂ. ನ ಪರಿಶಿಷ್ಟ ಪ್ರಮೋಟರ್ ರೋಹಿಣಿ ಎಚ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

ಅ. 1ರಂದು ಕುತ್ತಿಕೋಲ್ ಪಂಚಾಯತ್ ಕಚೇರಿ ಮುಂಭಾಗ ಸಚಿವರನ್ನು ತಡೆದು ಕಪ್ಪು ಬಾವುಟ ಪ್ರದರ್ಶಿಸುವ ಡಿವೖಎಫ್ಐ ಚಳುವಳಿ ನಡೆದಿತ್ತು. ಇದರಲ್ಲಿ ರೋಹಿಣಿ ಪಾಲ್ಗೊಂಡಿದ್ದರೆಂದು ನೀಡಲಾದ ದೂರಿನಂತೆ ಬೇಡಗಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಈ ಸಂಬಂಧ ರೋಹಿಣಿ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಇಲಾಖೆಗೆ ದೂರು ನೀಡಲಾಗಿತ್ತು
. ದೂರಿನ ಹಿನ್ನೆಲೆಯಲ್ಲಿ ಕಾಸರಗೋಡು ಟ್ರೖಬಲ್ ಅಧಿಕಾರಿ ಪ್ರಾಥಮಿಕ ತನಿಖೆ ನಡೆಸಿದಾಗ ರೋಹಿಣಿ ಅವರು ಚಳುವಳಿಯಲ್ಲಿ ಪಾಲ್ಗೊಂಡದ್ದನ್ನು ಒಪ್ಪಿದ್ದರು. ಇದು ಅವರು ನಿರ್ವಹಿಸುವ ಸರಕಾರಿ ಹುದ್ದೆಯ ನೀತಿ ಸಂಹಿತೆ ಉಲ್ಲಂಘನೆಯೆಂದು ಅಧಿಕಾರಿ ನೀಡಿದ ವರದಿಯಂತೆ ಅವರನ್ನು ಹುದ್ದೆಯಿಂದ ಅಮಾನತು ಮಾಡಿ ಆದೇಶ ಪ್ರಕಟಿಸಲಾಗಿದೆ.
ಸರಕಾರಿ ಖಜಾನೆಯಿಂದ ವೇತನ, ಗೌರವಧನ ಪಡೆಯುವ ನೌಕರರು ಸರಕಾರದ ವಿರುದ್ಧವಾಗಲೀ, ಸಚಿವರ ವಿರುದ್ಧವಾಗಲೀ ಬಹಿರಂಗ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ನೀತಿ ಸಂಹಿತೆಯ ಉಲ್ಲಂಘನೆಯಾದ ಕಾರಣ ಶಿಸ್ತು ಕ್ರಮ ಕೖಗೊಳ್ಳಲಾಗಿದೆ ಎಂದು ಪರಿಶಿಷ್ಟ ಜಾತಿ, ವರ್ಗದ ಇಲಾಖಾಧಿಕಾರಿ ತಿಳಿಸಿದ್ದಾರೆ.





