ಮಹಿಳೆಯರ ಮೇಲಣ ಕೌಟುಂಬಿಕ ಹಿಂಸಾಚಾರ, ದೌರ್ಜನ್ಯ ತಡೆಗೆ ‘ ಸ್ಪೀಕ್ ಅಪ್’ ವಿಶೇಷ ಕಾರ್ಯಪಡೆ ರಚನೆ: ಗೃಹ ಸಚಿವರ ಆದೇಶ

by Narayan Chambaltimar

ತಿರುವನಂತಪುರಂ(ಅ. 8):
ರಾಜ್ಯದಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಹಿಂಸಾಚಾರ ಪ್ರಕರಣಗಳನ್ನು ನಿಗ್ರಹಿಸಲು ಕೇರಳಾ ಪೋಲಿಸರು ‘ಸ್ಪೀಕ್ ಅಪ್’ ಎಂಬ ವಿಶೇಷ ಕಾರ್ಯಪಡೆ ರಚಿಸಿದ್ದಾರೆ.
ಐಜಿ ಅಜಿತಾ ಬೀಗಂ ಅವರಿಗೆ ಸ್ಪೀಕ್ ಅಪ್ ಹೊಣೆಗಾರಿಕೆ ವಹಿಸಲಾಗಿದೆ. ಈ ಸಂಬಂಧ ಗೃಹ ಸಚಿವರು ಗುರುವಾರ ಆದೇಶ ಹೊರಡಿಸಿದ್ದು, ಮಹಿಳೆಯರ ಕೌಟುಂಬಿಕ ದೌರ್ಜನ್ಯ ತಡೆಗೆ ಅಂಕುಶ ಹೇರುವುದಾಗಿ ಘೋಷಿಸಿದ್ದಾರೆ.

ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ತಡೆ, ಸಂತ್ರಸ್ಥರಿಗೆ ಕಾನೂನು ನೆರವು, ಕೌನ್ಸಿಲಿಂಗ್ ಖಚಿತ ಪಡಿಸುವುದು, ಸುರಕ್ಷಿತವಾದ ವಾಸ ಸೌಕರ್ಯ ಮತ್ತು ಸುಭದ್ರತೆಯ ಜೀವನೋಪಾಯದ ಹಾದಿ ಒದಗಿಸುವುದು ಪ್ರಸ್ತುತ ಯೋಜನೆಯ ಉದ್ದೇಶವಾಗಿದೆ. ದೌರ್ಜನ್ಯಕ್ಕೆ ಒಳಗಾಗಿ ದೂರು ನೀಡಲು ಸಾಧ್ಯವಾಗದೇ ಅಸಹಾಯಕರಾದವರಿಗೆ ಸಹಾಯ ಒದಗಿಸಲು ಯೋಜನೆಯಲ್ಲಿ ಸೌಲಭ್ಯವಿದೆ. ಉನ್ನತ ಪೊಲೀಸಧಿಕಾರಿಗಳ ಮೇಲ್ನೋಟದಲ್ಲಿ ಕಾರ್ಯಪಡೆ ಕಾರ್ಯಾಚರಿಸಲಿದೆ.

ದೌರ್ಜನ್ಯಕ್ಕೆ ಸಂಬಂಧಿಸಿ ದೂರು ನೀಡಲು ಬಂದವರಿಗೆ ಪೊಲೀಸ್ ಠಾಣೆಯಲ್ಲಿ ಸುರಕ್ಷಿತ ಸೌಕರ್ಯ ಒದಗಿಸಿ ಭಯಾತಂಕ, ಅಳಕು ಇಲ್ಲದೇ ದೂರು ಸಲ್ಲಿಸಲು ವ್ಯವಸ್ಥೆ ಒದಗಿಸಲಾಗುವುದೆಂದು ಘೋಷಿಸಲಾಗಿದೆ. ಸಂತ್ರಸ್ಥೆಯರ ಖಾಸಗಿತನ ಸಂರಕ್ಷಿಸಿ ಪ್ರಕರಣಗಳು ದಾಖಲಿಸುವಂತೆ ಆದೇಶಿಸಲಾಗಿದೆ.
“ತಾಳಿದ್ದು ಸಾಕು, ಇನ್ನು ಸ್ವರ ಎತ್ತಲು ಸಮಯವಾಯಿತು” ಎಂಬ ಸಂದೇಶದೊಂದಿಗೆ ಯೋಜನೆ ಜ್ಯಾರಿಯಾಗಲಿದೆ ಎಂದು ಗೃಹ ಸಚಿವ ರಮೇಶ್ ಚೆನ್ನಿತಲ ಘೋಷಿಸಿದ್ದಾರೆ.
ಕೌಟುಂಬಿಕ ದೌರ್ಜನ್ಯವು ಮಹಿಳೆಯರನ್ನು ಶಾರೀರಿಕ, ಮಾನಸಿಕವಾಗಿ ಕುಗ್ಗಿಸುತ್ತದೆ. ಆದ್ದರಿಂದ ಕೌಟುಂಬಿಕ ದೌರ್ಜನ್ಯ ಗಳ ಮೂಲಕ ಮಹಿಳೆಯರ ಹಕ್ಕು ನಿಷೇಧಿಸಲ್ಪಟ್ಟರೆ ಕಠಿಣ ಕಾನೂನು ಕ್ರಮ ಕೖಗೊಳ್ಳಲು ಆದೇಶಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು.

ಕೌಟುಂಬಿಕ ದೌರ್ಜನ್ಯವು ಕೇವಲ ದೈಹಿಕ ಹಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಕಾನೂನಿನ ಪ್ರಕಾರ ಇದು ವಿವಿಧ ರೂಪಗಳಲ್ಲಿ ಇರಬಹುದು:

  • * ದೈಹಿಕ ದೌರ್ಜನ್ಯ: ಹೊಡೆಯುವುದು, ತಳ್ಳುವುದು, ದೈಹಿಕವಾಗಿ ಗಾಯಗೊಳಿಸುವುದು.
    * ಮಾನಸಿಕ ಮತ್ತು ಭಾವನಾತ್ಮಕ ದೌರ್ಜನ್ಯ: ನಿಂದಿಸುವುದು, ಅವಮಾನ ಮಾಡುವುದು, ಹೆದರಿಸುವುದು, ಚಾರಿತ್ರ್ಯ ವಧೆ ಮಾಡುವುದು.
    * ಆರ್ಥಿಕ ದೌರ್ಜನ್ಯ: ಮನೆ ಖರ್ಚಿಗೆ ಹಣ ನೀಡದಿರುವುದು, ಆಕೆಯ ಸಂಪಾದನೆ ಅಥವಾ ಸ್ತ್ರೀಧನವನ್ನು ಕಸಿದುಕೊಳ್ಳುವುದು, ಕೆಲಸಕ್ಕೆ ಹೋಗದಂತೆ ತಡೆಯುವುದು.
    * ಲೈಂಗಿಕ ದೌರ್ಜನ್ಯ: ಮಹಿಳೆಯ ಒಪ್ಪಿಗೆಯಿಲ್ಲದೆ ಆಕೆಯ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಅಥವಾ ಬಲವಂತ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00