ಕೇಂದ್ರ ಸರಕಾರಿ ಯೋಜನೆ ಜನತೆಗೆ ತಲುಪಲು ಬದಿಯಡ್ಕದಲ್ಲಿ ಬಿಜೆಪಿ ಹೆಲ್ಪ್ ಡೆಸ್ಕ್ ಆಯೋಜನೆ

by Narayan Chambaltimar

ಬದಿಯಡ್ಕ(ಅ. 8):
ಬಿಜೆಪಿ ಬದಿಯಡ್ಕ ಪಂಚಾಯತ್ ಘಟಕದ ನೇತೃತ್ವದಲ್ಲಿ ಸೇವಾ ಸೇತು ಅಭಿಯಾನದ ಅಂಗವಾಗಿ ಹೆಲ್ಪ್ ಡೆಸ್ಕ್ ಶಿಬಿರ ಆಯೋಜಿಸಲಾಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಆರ್. ಸುನಿಲ್ ಶಿಬಿರ ಉದ್ಘಾಟಿಸಿದರು.

ನರೇಂದ್ರ ಮೋದಿ ಸರಕಾರ ಅನುಷ್ಟಾನ ಮಾಡಿದ ಕಲ್ಯಾಣ ಯೋಜನೆಗಳ ಸೌಲಭ್ಯ ಎಲ್ಲಾ ಜನರಿಗೂ ತಲುಪುವಂತಾಗಲು ಪ್ರತಿ ಪಂಚಾಯತ್ ಮಟ್ಟದಲ್ಲೂ ಹೆಲ್ಪ್ ಡೆಸ್ಕ್ ಶಿಬಿರ ಆಯೋಜಿಸಲಾಗುವುದೆಂದು ಅವರು ತಿಳಿಸಿದರು.
ಬಿಜೆಪಿಯೇತರ ಪಕ್ಷಗಳು ಆಳುವ ರಾಜ್ಯದಲ್ಲಿ ಕೇಂದ್ರ ಸರಕಾರಿ ಯೋಜನೆಗಳನ್ನು ಜನತೆಗೆ ತಲುಪಿಸದೇ ವಂಚಿಸಲಾಗುತ್ತದೆಯೆಂದೂ ಅವರು ಆಕ್ಷೇಪಿಸಿದರು.

ಬದಿಯಡ್ಕ ಗ್ರಾ. ಪಂ. ಅಧ್ಯಕ್ಷ ಶಂಕರ ಡಿ. ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಅಶ್ವಿನಿಶಕೆ. ಎಂ, ಜಿ. ಪಂ ಸದಸ್ಯ ರಾಮಪ್ಪ ಮಂಜೇಶ್ವರ, ಅವಿನಾಶ್ ರೖ, ಮಹೇಶ ವಳಕುಂಜ, ಉದನೇಶ್ವರ, ಗಂಗಾಧರ ಪಳ್ಳತ್ತಡ್ಕ, ಬಾಲಕೃಷ್ಣ ಶೆಟ್ಟಿ, ಶರತ್ ಶೆಟ್ಟಿ, ರಾಜೇಶ್, ರಜನಿ ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00