- ಕರ್ತವ್ಯ ಲೋಪಕ್ಕೆ ಅಮಾನತಿನಲ್ಲಿರುವ ಪೊಲೀಸನಿಗೆ ಕದಿಯುವುದೇ ಖಯಾಲಿ!
ಕುಂಬಳೆ( ಸೆ. 11):
ಕರ್ತವ್ಯ ಲೋಪ ಎಸಗಿದ ಅಪರಾಧದಂತೆ ಅಮಾನತು ಶಿಕ್ಷೆಯಲ್ಲಿರುವ ಕುಂಬಳೆ ಪೊಲೀಸ್ ಠಾಣೆಯ ಪೊಲೀಸ್ ಸಿಬಂದಿಯನ್ನು ದೇವಸ್ಥಾನದಿಂದ ಮೊಬೖಲ್ ಫೋನ್ ಅಪಹರಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ತಳಿಪರಂಬ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಮೊಬೖಲ್ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಯ್ಯನ್ನೂರು ಬಳಿಯ ಅನ್ನೂರು ಪುದಿಯಂಗಾವಿಲ್ ನಿವಾಸಿ ವಿ. ಎಂ. ವಿಪಿನ್ ಕುಮಾರ್ ನನ್ನು ಬಂಧಿಸಲಾಯಿತು.

ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ದೊರೆತರೂ ಕರ್ತವ್ಯ ನಿಷ್ಠೆಯಿಂದ ಸೇವೆಗೆ ಹಾಜರಾಗದೇ ಬೇಜವಾಬ್ದಾರಿಯುತವಾಗಿ ಅಲೆದಾಡುತ್ತಾ ಇದ್ದ ಹಿನ್ನೆಲೆಯಲ್ಲಿ ಕುಂಬಳೆ ಠಾಣೆಯಿಂದ ಈತನನ್ನು ಅಮಾನತು ಮಾಡಲಾಗಿತ್ತು. ಅಲ್ಲದೇ ಅಪರಾಧ ಪ್ರಕರಣಗಳಲ್ಲಿ ತೊಗಡಗಿದ ಆರೋಪಗಳಿದ್ದ ಹಿನ್ನೆಲೆಯಲ್ಲಿ ಸೇವೆಯಿಂದಲೇ ಪದಚ್ಯುತಿ ಗೊಳಿಸುವ ಪ್ರಕ್ರಿಯೆಗೆ ಸಿದ್ಧತೆ ನಡೆಯುತಿತ್ತು.
ಪ್ರಸ್ತುತ ಅಮಾನತಿನಲ್ಲಿರುವ ವಿಪಿನ್ ಕುಮಾರ್ ಗುರುವಾರ ಬೆಳಿಗ್ಗೆ ತಳಿಪರಂಬ ರಾಜರಾಜೇಶ್ವರ ಕ್ಷೇತ್ರಕ್ಕೆ ಆಗಮಿಸಿದ್ದ ಜ್ಯೋತಿಷಿ ಯೊಬ್ಬರ ಮೊಬೖಲ್ ಫೋನ್ ಅಪಹರಿಸಿದ್ದನು. ಬಳಿಕ ತಾಸುಗಳ ಅಂತರದಲ್ಲಿ ಈತನನ್ನು ಬಂಧಿಸಲಾಯಿತು.
ಈ ಹಿಂದೆ ಅನ್ನೂರು ಎಂಬಲ್ಲಿ ಮೊಬೖಲ್ ಫೋನು ಅಪಹರಿಸಿದಕ್ಕೆ ಪಯ್ಯನ್ನೂರು ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಇತ್ತೀಚಿಗೆ ತನ್ನೂರಿನ ಶಾಲೆಯ ಪೂರ್ವ ವಿದ್ಯಾರ್ಥಿ ಸಂಗಮದಲ್ಲಿ ಪಾಲ್ಗೊಂಡು, ಮಹಿಳೆಯೊಬ್ಬರ ಗೆಳೆತನ ಬೆಳೆಸಿ ಅವರ ಚಿನ್ನಾಭರಣ ಅಪಹರಿಸಿದ ಪ್ರಕರಣದಲ್ಲೂ ಈತ ಆರೋಪಿ ಎನಿಸಿದ್ದಾನೆ. ಕಳೆದ 31 ರಂದು ತೃಚ್ಛಂಬರ ಶ್ರೀಕೃಷ್ಣ ದೇವಾಲಯದಿಂದ ಕಾಣಿಕೆ ಡಬ್ಬಿ ಅಪಹರಿಸಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ. ತಳಿಪರಂಬ ಡಿವೖಎಸ್ಪಿ ಟಿ. ಪಿ. ಸುಮೇಶ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿ, ಮೂರು ಮೊಬೖಲ್ ಸಹಿತ ಆರು ಸಾವಿರ ರೂ ಈತನಿಂದ ವಶಪಡಿಶಲಾಗಿದೆ.





