ಕಾಸರಗೋಡು ಜಿಲ್ಲೆಯಲ್ಲಿಂದು ಬೇಂಕುಗಳು ಸ್ತಬ್ಧ: ನಾಳೆಯಿಂದ ಸೋಮವಾರ ತನಕ ಬೇಂಕುಗಳಿಗೆ ರಜೆ

by Narayan Chambaltimar
  • ಬೇಂಕಿಂಗ್ ವಲಯದ ಸುಧಾರಣೆಗೆ ಆಗ್ರಹ: ಕಾಸರಗೋಡಿನಲ್ಲಿ ನೌಕರರ ಸಾಂಕೇತಿಕ ಮುಷ್ಕರ

ಕಾಸರಗೋಡು(ಸೆ. 11):
ರಾಷ್ಟ್ರೀಕೃತ ಬೇಂಕುಗಳಲ್ಲಿ ವಾರಕ್ಕೆ ಐದು ದಿನಗಳನ್ನಷ್ಟೇ ಪ್ರವೃತ್ತಿ ದಿನಗಳನ್ನಾಗಿಸಬೇಕು ಮತ್ತು ಕೇಂದ್ರ ಸರಕಾರ ಏಕಪಕ್ಷೀಯವಾಗಿ ಜಾರಿಗೊಳಿಸಲು ಮುಂದಾದ ಪಿಎಲ್ಎ ಯೋಜನೆ ಹಿಂತೆಗೆಯಬೇಕು ಸೇರಿದಂತೆ ಪ್ರಮುಖ ಬೇಡಿಕೆಗಳೊಂದಿಗೆ ಬೇಂಕಿಂಗ್ ನೌಕರರ ಸಂಘಟನೆಗಳ ಸಂಯುಕ್ತ ಹೋರಾಟ ಸಮಿತಿ UFBU ನೇತೃತ್ವದಲ್ಲಿ ಕಾಸರಗೋಡಿನಲ್ಲಿ ಸೂಚನಾ ಮುಷ್ಕರ ನಡೆಯಿತು.

ಇದರಂಗವಾಗಿ ಕಾಸರಗೋಡು ನಗರದ ಲೀಡ್ ಬೇಂಕ್ ಮುಂಭಾಗದಲ್ಲಿ ಬೇಂಕಿಂಗ್ ನೌಕರರ ಧರಣಿ ಸತ್ಯಾಗ್ರಹ ಮತ್ತು ಪ್ರತಿಭಟನಾ ಮೆರವಣಿಗೆ ನಡೆಯಿತು.
‘ಬೆಫಿ’ ಜಿಲ್ಲಾ ಸೆಕ್ರೆಟರಿ ಕೆ. ರಾಘವನ್ ಅಧ್ಯಕ್ಷತೆಯಲ್ಲಿ ನಡೆದ ಧರಣಿ ಸತ್ಯಾಗ್ರಹವನ್ನು ಎಐಟಿಯುಸಿ ನಾಯಕ ಟಿ. ಕೃಷ್ಣನ್ ಉದ್ಘಾಟಿಸಿದರು.
ಸಿಐಟಿಯು ಜಿಲ್ಲಾ ಸೆಕ್ರೆಟರಿ ಕೆ. ರವೀಂದ್ರನ್, ಎಲ್ ಬಿ ಸಿ ನಾಯಕಿ ಕೆ. ಜಿಷಾ, ಸಂಘಟನಾ ನಾಯಕರಾದ ನಿತಿನ್, ಟಿ. ರಾಜನ್ ಮೊದಲಾದವರು ಮಾತನಾಡಿದರು. ಎಂ. ಕೆ. ಆನಂದ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ದೇಶದಾದ್ಯಂತ ಇರುವ ಬ್ಯಾಂಕ್ ಯೂನಿಯನ್‌ಗಳು ಸೆಪ್ಟೆಂಬರ್ 11ರಂದು ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿಂದು ಬೇಂಕುಗಳು ಸ್ತಬ್ಧವಾಯಿತು.
ಇದರ ಜೊತೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆ ಇರುವುದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಶುಕ್ರವಾರ ಬ್ಯಾಂಕ್ ಬಂದ್ ನಡೆಯಿತು. ಅದರ ಜೊತೆಯಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಬ್ಯಾಂಕ್ ಸೇವೆ ಇರುವುದಿಲ್ಲ
ಶನಿವಾರ (ಸೆ. 12) ಎರಡನೇ ಶನಿವಾರ ಆಗಿರುವುದರಿಂದ ಬ್ಯಾಂಕುಗಳಿಗೆ ಸಾಮಾನ್ಯ ರಜೆ ಇರಲಿದೆ. ಇನ್ನೂ ಭಾನುವಾರ (ಸೆ. 13) ಸಾಮಾನ್ಯ ರಜಾ ದಿನ. ಸೋಮವಾರ (ಸೆ. 14) ಗಣೇಶ ಚತುರ್ಥಿ ನಿಮಿತ್ತ ಸಾರ್ವಜನಿಕ ರಜಾ ದಿನ ಇರಲಿದೆ. ಹಾಗಾಗಿ, ಸೋಮವಾರ ಕೂಡ ಬ್ಯಾಂಕ್ ರಜೆ ಇರಲಿದೆ. ಆ ಮೂಲಕ ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್ ಸೌಲಭ್ಯ ಇರುವುದಿಲ್ಲ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00