297
ಕಾಸರಗೋಡು(ಸೆ. 11):
ಕೆಲಸ ಕೊಡಿಸುವ ಭರವಸೆ ಇತ್ತು ಕರ್ನಾಟಕ ಮೂಲದ ಯುವತಿಯನ್ನು ಕರೆತಂದು ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೇಕಲ ಪಳ್ಳಿಕೆರೆ ನಿವಾಸಿ ಸೖಫ್ ಆಸಿಫ್ (28) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ.
ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಈತ ಅಡಗುತಾಣದಿಂದ ನೆಲೆ ಬದಲಾಯಿಸುವ ಸಂದರ್ಭ ಪೊಲೀಸ್ ಬಲೆಗೆ ಬಿದ್ದನು.
ಪ್ರಕರಣದ ಇನ್ನೋರ್ವ ಆರೋಪಿ ಹೊಸದುರ್ಗ ತಾಲೂಕಿನ ಇರಿಯ ಪಾರಮ್ಮಲ್ ಬಶೀರ್ ನನ್ನು ಈ. ಹಿಂದೆಯೇ ಬಂಧಿಸಲಾಗಿತ್ತು. ಈತ ಕರ್ನಾಟಕ ಮೂಲದ ಯುವತಿಯನ್ನು ಉದ್ಯೋಗದ ಭರವಸೆ ನೀಡಿ ಕಾಞಂಗಾಡು ಬಳಿಯ ಅಂಬಲತ್ತರ ಎಂಬಲ್ಲಿಗೆ ಕರೆ ತಂದಿದ್ದನು. ಮೊದಲಿಗೆ ಈತ ಲೖಂಗಿಕ ಶೋಷಣೆ ನಡೆಸಿದ ಬಳಿಕ ಎರಡನೇ ಆರೋಪಿಗೆ ಹಸ್ತಾಂತರಿಸಿದ್ದನು. ಬಂಧಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.





