ಕನ್ಯಪ್ಪಾಡಿ ಆಶ್ರಯ ಆಶ್ರಮಕ್ಕೆ ಪೆರ್ಣೆ ಭಗವತಿ ಫ್ರೆಂಡ್ಸ್ ಕಾರ್ಯಕರ್ತರಿಂದ ದೇಣಿಗೆ ಕೊಡುಗೆ

by Narayan Chambaltimar

ಕನ್ಯಪ್ಪಾಡಿ (ಸೆ. 11):
ಪುತ್ತಿಗೆ ಗ್ರಾ. ಪಂ. ನ ಪೆರ್ಣೆ ಪರಿಸರದಲ್ಲಿ ಸಮಾಜಮುಖಿ ಕಾಳಜಿಯಿಂದ ಸೇವಾನಿರತವಾಗಿರುವ ಭಗವತಿ ಫ್ರೆಂಡ್ಸ್ ಪೆರ್ಣೆ ಸದಸ್ಯರು ಈ ಬಾರಿಯ ಗಣೇಶೋತ್ಸವಕ್ಕೆ ತಮ್ಮ ಟ್ಯಾಬ್ಲೋ ಪ್ರದರ್ಶಿಸದೇ, ಸರಳ ರೀತಿಯ ಆಚರಣೆಗೆ ಮುಂದಾಗಿದ್ದಾರೆ. ತದಂಗವಾಗಿ ಕನ್ಯಪಾಡಿಯಲ್ಲಿರುವ ಆಶ್ರಯ ಆಶ್ರಮಕ್ಕೆ ರೂ 10,ಸಾವಿರದ ದೇಣಿಗೆಯನ್ನು ಸಮರ್ಪಿಸಲಾಯಿತು.

ಈ ಸಂದರ್ಭ ಭಗವತಿ ಫ್ರೆಂಡ್ಸ್ ಪ್ರಮುಖರಾದ ರವಿ ನಾರಾಯಣ ಗುಣಾಜೆ, ಸುನಿಲ್ ಪೆರ್ಣೆ, ಅಕ್ಷಯ್ ಪೆರ್ಣೆ, ಆಶ್ರಮದ ಮುಖ್ಯಸ್ಥರಾದ ರಮೇಶ್ ಕಳೇರಿ, ರಾಮಕೃಷ್ಣ ಹೆಬ್ಬಾರ್, ಹರೀಶ ಮುಂತಾದವರು ಉಪಸ್ಥಿತರಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00