ಕುಂಬಳೆ: ಹೊಯಿಗೆ ಸಾಗಾಟ ಯತ್ನದ ವೇಳೆ ಪೊಲೀಸರನ್ನು ಕಂಡು ಹೊಳೆಗ ಹಾರಿ ನಾಪತ್ತೆಯಾಗಿದ್ದ ಆರಿಕ್ಕಾಡಿ ಕಡವತ್ ನಿವಾಸಿ ಯುವಕನ ಮೃತದೇಹ ಪತ್ತೆ

by Narayan Chambaltimar
  • ಬೆಸ್ತರ ಬಲೆಯಲ್ಲಿ ಸಿಲುಕಿದ್ದ ಮೃತದೇಹ ಪತ್ತೆ ಮಾಡಿದ್ದು ಮುಳುಗುತಜ್ಞ ಈಶ್ವರ್ ಮಲ್ಪೆ ಶೋಧಕಾರ್ಯ

ಕುಂಬಳೆ ( ಸೆ. 10):
ಶಿರಿಯ ಅಳಿವೆ ಬಾಗಿಲಿನಿಂದ ಅನಧಿಕೃತ ಹೊಯಿಗೆ ಸಾಗಿಸುವ ವೇಳೆ ಪೊಲೀಸರನ್ನು ಕಂಡು ಹೊಳೆಗೆ ಹಾರಿ ನಾಪತ್ತೆಯಾಗಿದ್ದ ಆರಿಕ್ಕಾಡಿ ಕಡವತ್ತಿನ ನಿವಾಸಿ ಇಬ್ರಾಹಿಂ(35) ನ ಮೃತ ದೇಹ ಇಂದು ಮುಂಜಾನೆ ಪತ್ತೆಯಾಗಿದೆ. ಶಿರಿಯ ಅಳಿವೆ ಬಾಗಿಲಿನಲ್ಲಿ ಮೀನುಗಾರರ ಬಲೆಯಲ್ಲಿ ಸಿಲುಕಿದ್ದ ಸ್ಥತಿಯಲ್ಲಿ ಮೃತದೇಹ ಪತ್ತೆಯಾಯಿತು. ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ಶೋಧಕಾರ್ಯದಲ್ಲಿ ಮೃತ ದೇಹ ಪತ್ತೆ ಹಚ್ಚಲಾಯಿತು.

ಮೃತಪಟ್ಟು ನಾಲ್ಕು ದಿನಗಳಾದ ಮೃತದೇಹವನ್ನು ದಡಕ್ಕೆ ತಂದು ಕುಂಬಳೆ ಸಹಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದೇ ಸೋಮವಾರ ರಾತ್ರಿ ಕರಾವಳಿ ತೀರ ಪಡೆಯ ಪೊಲೀಸರು ಗಸ್ತು ತಿರುಗಾಟ ನಡೆಸಿ ಶಿರಿಯ ಅಳಿವೆ ಬಾಗಿಲಿಗೆ ತಲುಪಿದಾಗ ಅನಧಿಕೃತ ಹೊಯಿಗೆ ಸಾಗಾಟದಲ್ಲಿ ಏರ್ಪಟ್ಟಿದ್ದ ಮೂವರು ದೋಣಿ ಉಪೇಕ್ಷಿಸಿ ಪರಾರಿಯಾಗಿದ್ದರು.

ಈ ಪೖಕಿ ಇಬ್ಬರು ಪರಾರಿಯಾದರೆ ಈತ ಹೊಳೆಯಲ್ಲಿ ನಾಪತ್ತೆಯಾಗಿದ್ದನು. ಬಳಿಕ ಪೊಲೀಸ್ ಹಾಗೂ ನಾಗರಿಕ ಸಹಾಯದಿಂದ ನಿರಂತರ ಹುಡುಕಾಟ ನಡೆದಿತ್ತು. ಮೃತ ವ್ಯಕ್ತಿ ಆರಿಕ್ಕಾಡಿ ಕಡವತ್ ನಿವಾಸಿ ಅಬ್ದುಲ್ ಖಾದರ್, ಸೖನಬಾ ದಂಪತಿ ಪುತ್ರನಾಗಿದ್ದು, ಐವರು ಸೋದರರನ್ನು ಅಗಲಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00