- ಜಿಲ್ಲೆಯಲ್ಲಿ ಸರಾಸರಿ 1 ಸಾವಿರದಂತೆ ರಾಜ್ಯದ 14 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಈಜು ಕಲಿಸುವ ಯೋಜನೆ
ರಾಜ್ಯ ಸರಕಾರದ ನೂರು ದಿನಗಳ ಕ್ರಿಯಾ ಯೋಜನೆಯಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಈಜು ಕಲಿಸುವ “ಅಕ್ವಾಫಿಟ್ ಈಜು ತರಬೇತಿ” ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆ ಇಂದು ಜಿ. ಪಂ. ಅಧ್ಯಕ್ಷ ಸಾಬು ಅಬ್ರಹಾಂ ನೆರವೇರಿಸಿದರು.
ರಾಜ್ಯ ವ್ಯಾಪಕ ಜ್ಯಾರಿಗೊಳಿಸುವ ಯೋಜನೆಯಂತೆ ಕೇರಳದ 14 ಜಿಲ್ಲೆಗಳ 14ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಈಜು ತರಬೇತಿ ನೀಡುವುದು ಯೋಜನೆಯಾಗಿದೆ. ಪ್ರತಿ ಜಿಲ್ಲೆಯಿಂದ ಆಯ್ದ ಸಾವಿರ ಮಂದಿಗಳು ಇದರ ಫಲಾನುಭವಿಗಳಾಗಿದ್ದಾರೆ.

ವಿದ್ಯಾರ್ಥಿಗಳು ಕಲಿಯುವ ಶಿಕ್ಷಣ ಸಂಸ್ಥೆಯ ಸಮೀಪದ ಐದು ಕಿ. ಮೀ ವ್ಯಾಪ್ತಿಯೊಳಗಿನ ಯೋಗ್ಯ ಕೆರೆಗಳನ್ನು ಗುರುತಿಸಿ ಪರಿಣಿತ ಈಜು ಪಟುಗಳು ಉಚಿತ ತರಬೇತಿ ನೀಡುವರು.ಸ್ಥಳೀಯಾಡಳಿತ ಸಂಸ್ಥೆಯ ಸಹಕಾರದೊಂದಿಗೆ ಯೋಜನೆ ಜ್ಯಾರಿಯಾಗಲಿದೆ.ಅತ್ಯಧಿಕ ಕೆರೆ, ನದಿ, ಹೊಳೆಗಳಿಂದ ಸಂಪುಷ್ಟವಾದ ಕೇರಳದಲ್ಲಿ ಎಳೆಯ ವಿದ್ಯಾರ್ಥಿಗಳು ಈಜು ಅರಿತಿರಬೇಕಾದುದು ಕೇವಲ ಜೀವರಕ್ಷಾ ಮಾರ್ಗವಷ್ಟೇ ಅಲ್ಲ ಅದು ಕ್ರೀಡೆಯೂ ಹೌದು. ಈ ದೃಷ್ಟಿಯಲ್ಲಿ ಮಕ್ಕಳಿಗೆ ಉಚಿತ ಈಜು ಕಲಿಸಲಾಗುತ್ತಿದೆ.
ಉದ್ಘಾಟನಾ ಸಮಾರಂಭದಲ್ಲಿ ಕಾಸರಗೋಡು ನಗರಸಭಾ ಉಪಾಧ್ಯಕ್ಷ ಕೆ. ಎಂ. ಹನೀಫ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ತರಬೇತುದಾರ ಜೋಯ್ ಸಿರಿಯಕ್, ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಫೀಖ್, ಕೌನ್ಸಿಲರ್ ವಿದ್ಯಾಶ್ರೀ, ವಾರ್ಡು ಸದಸ್ಯ ಹನೀಫ, ನಾಯನ್ಮಾರಮೂಲೆ ತನ್ಬೀಹುಲ್ ಹೖಸ್ಕೂಲ್ ಪ್ರತಿನಿಧಿಗಳು ಉಪಸ್ಥಿತರಿದ್ದರು.





