ನಟ ನಿವಿನ್ ಪೋಳಿ ಹೊಸ ಚಿತ್ರಕ್ಕೆ ಆರಂಭದಲ್ಲೇ ವಿಘ್ನ: ಚಿತ್ರೀಕರಣ ಆರಂಭಕ್ಕೂ ಮುನ್ನ ಸೆಟ್ ನಲ್ಲಿ ವಿದ್ಯುತ್ ಶಾಕ್ ಬಡಿದು ತಂತ್ರಜ್ಞ ನ ಸಾವು

by Narayan Chambaltimar

ಕಾಸರಗೋಡು( ಸೆ. 9):
ಮಲಯಾಳದ ಜನಪ್ರಿಯ ಯುವ ನಟ ನಿವಿನ್ ಪೋಳಿ ಅಭಿನಯದ ಇನ್ನೂ ಹೆಸರಿಡದ ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಕಾಡಿದೆ.
ಚಿತ್ರೀಕರಣ ಆರಂಭಿಸಲು ಸಿದ್ಧತೆ ಮಾಡುತ್ತಿರುವಾಗಲೇ ಚಿತ್ರದ ತಂತ್ರಜ್ಞ ವಿದ್ಯುತ್ ಶಾಕ್ ಬಡಿದು ಮೃತಪಟ್ಟ ದಾರುಣ ಘಟನೆ ನಡೆದಿದೆ.
ತ್ರಿಶೂರು ಕಾಂಞಾಣಿ ನಿವಾಸಿ ವಿಷ್ಣು(32) ಮೃತ ವ್ಯಕ್ತಿಯಾಗಿದ್ದಾರೆ.

ಇನ್ನೂ ಹೆಸರಿಡದ ನೂತನ ಚಿತ್ರದ ಪೂಜೆ ಮುಗಿಸಿ ಇಂದು ಆಲುವಾ ಬಳಿಯ ಇಡಯಾರ್ ನಲ್ಲಿ ಚಿತ್ರೀಕರಣ ಆರಂಭಿಸಲು ವಿದ್ಯುತ್ ಸಂಪರ್ಕದ ಸಿದ್ಧತೆ ನಡೆಯುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಚಿತ್ರೀಕರಣ ಆರಂಭಕ್ಕೂ ಮುನ್ನ ತಂತ್ರಜ್ಞನ ಸಾವು ಇಡೀ ಚಿತ್ರ ತಂಡವನ್ನು ಕಂಗೆಡಿಸಿದೆ. ಅಪಘಾತ ಸಂಭವಿಸಿದ ಕೂಡಲೇ ಎರ್ನಾಕುಳಂ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವಾಪಾಯದಿಂದ ರಕ್ಷಿಸಲಾಗಲಿಲ್ಲ. ನಟ ನಿವಿನ್ ಪೋಳಿ ಕಣ್ಣೆದುರೇ ಈ ಘಟನೆ ನಡೆಯಿತೆಂದು ವರದಿಯಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00