ಮಾನ್ಯ: ಅಯ್ಯಪ್ಪ ಮಂದಿರದ ಪಾಕಶಾಲಾ ಸಹಾಯಾರ್ಥದ ಅದೃಷ್ಟ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ

by Narayan Chambaltimar

ಮಾನ್ಯ (ಆ 2):
ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪಾಕಶಾಲಾ ನಿರ್ಮಾಣದ ಸಹಾಯಾರ್ಥ ಆಯೋಜಿಸಲಾದ ಅದೃಷ್ಟ ಕೂಪನ್ ಡ್ರಾ ನಡೆಸಿ ಬಹುಮಾನ ವಿತರಿಸಲಾಯಿತು. 25ಸಾವಿರ ರೂ. ಗಳ ಪ್ರಥಮ ಬಹುಮಾನ ವಿಜೇತರಾದ ಕೊಲ್ಲಂಗಾನ ರವಿ ಲೋಬೋ ಅವರಿಗೆ ಭಜನಾ ಮಂದಿರದ ಗುರುಸ್ವಾಮಿ ಕುಂಞಪ್ಪು ಅವರು ಬಹುಮಾನ ವಿತರಿಸಿದರು.

ಅಲ್ಲದೇ 10 ಮಂದಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭ ಗುರುಸ್ವಾಮಿಗಳಾದ ರಾಮ, ಮಂದಿರ ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ, ಕಾರ್ಯದರ್ಶಿ ಶ್ಯಾಮ ಪ್ರಸಾದ್ ಮಾನ್ಯ, ಕೋಶಾಧಿಕಾರಿ ಸೋಮಪ್ಪ ನಾಯ್ಕ್ ದೇವರಕೆರೆ, ದಯಾನಂದ ಯಾದವ್, ರಮೇಶ ಮೇಗಿನಡ್ಕ, ದೇವಪ್ಪ ದೇವರಕೆರೆ, ಗೋವಿಂದ, ಸುರೇಶ ಮೇಗಿನಡ್ಕ, ರಾಮಪ್ಪ ಮಾನ್ಯ, ಬಟ್ಯ ನಾಯ್ಕ್ ಮಾನ್ಯ, ಸುರೇಶ ಉಳ್ಳೋಡಿ, ಅನಿತಾ ಮೇಗಿನಡ್ಕ, ನವೀನ್ ಮಾನ್ಯ, ಬಾಲಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00