ಮಂಜೇಶ್ವರ(ಆ 2):
ಕಳೆದ ಅನೇಕ ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವಕ್ಕಾಗಿ ನಿರ್ಮಿಸುವ ತಾತ್ಕಾಲಿಕ ಚಪ್ಪರವನ್ನು ಪ್ರಶ್ನಿಸಿ, ಅದರ ಮರೆಯಲ್ಲಿ ಶಾಂತಿ ನೆಲೆಸಿರುವ ಊರಲ್ಲಿ ಘರ್ಷಣೆ ಸೃಷ್ಟಿಸಲು ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರು ಉದ್ದೇಶಪೂರ್ವಕ ಪ್ರಯತ್ನಿಸುತ್ತಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಆರೋಪಿಸಿದರು.
ಜೋಡುಕಲ್ಲಿನ ತಾತ್ಕಾಲಿಕ ಚಪ್ಪರವನ್ನುಲ್ಲೇಖಿಸಿ ಸರಕಾರಿ ಸ್ಥಳ ಅತಿಕ್ರಮಣ ಎಂದಾರೋಪಿಸಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ ರನ್ನು ಆಕ್ರಮಿಸಿ ಹಲ್ಲೆಗೊಳಿಸಲು ಯತ್ನಿಸಿರುವುದನ್ನು ಗೌರವದಿಂದ ಪರಿಗಣಿಸಬೇಕಾಗಿದೆ ಎಂದವರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಶಾಂತಿ ಸುವ್ಯವಸ್ಥೆ ನೆಲೆಸಿರುವ ನಾಡಿನಲ್ಲಿ ಅಶಾಂತಿ ಸೃಷ್ಟಿಸಲು ಪ್ರೇರೇಪಿಸುವ ಈ ರೀತಿಯ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಲಾಗದು ಎಂದವರು ತಿಳಿಸಿದ್ದಾರೆ.
ಲೋಕೇಶ್ ನೋಂಡರನ್ನು ಕೇಂದ್ರೀಕರಿಸಿ ನಡೆದ ಆಕ್ರಮಣಯತ್ನದ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಬೆದರಿಕೆಯೊಡ್ಡಿ ಗಲಭೆ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ಕೇಸು ದಾಖಲಿಸಿ ಕಾನೂನು ಕ್ರಮ ಕೖಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.





