ಓಣಂ ಆಚರಣೆ: ವರ್ಕಾಡಿ ಪಾವಳದಲ್ಲಿ ಕೃಷಿ ಕಾಯಕದಲ್ಲಿ ದುಡಿದ 25ಅಮ್ಮಂದಿರಿಗೆ ಸನ್ಮಾನ

by Narayan Chambaltimar

ವರ್ಕಾಡಿ(ಆ 1):

ಮಳೆ ಬಿಸಿಲೆನ್ನದೆ ಗದ್ದೆಯಲ್ಲಿ ನಾಟಿ ಹಾಗೂ ಕೊಯಿಲು ನಡೆಸಿ ಕೃಷಿ ಪರಂಪರೆ ಯಲ್ಲಿ ದುಡಿದ 25 ಅಮ್ಮಂದಿರ ಜೊತೆ ಭಾಗವಹಿಸಿ, ಅವರನ್ನು ಗೌರವಿಸುವ ಭಾವನಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಕ್ಷಿಯಾಗಿದ್ದು ತನಗೆ ಹೆಮ್ಮೆ ಯಾಗಿದೆ ಎಂದು ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಕೆ ಟೀಚರ್ ಹೇಳಿದರು. ವರ್ಕಾಡಿ ಪಾವಳದ
ಸಂತೋಷ್ ಫ್ರೆಂಡ್ಸ್ ಕ್ಲಬ್ ಲೈಬ್ರೆರಿ, ಸಂತೋಷ್ ಫ್ರೆಂಡ್ಸ್ ಕ್ಲಬ್,ಪ್ರೀತಿ ಮಹಿಳಾ ಸಮಾಜ ಆಶ್ರಯದಲ್ಲಿ ಜರಗಿದ ಓಣಂ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲಕೃಷ್ಣ ಶೆಟ್ಟಿ ಪಾವಳ ಅಧ್ಯಕ್ಷತೆ ವಹಿಸಿದ್ದರು. ನಾಗೇಶ್ ಕಲ್ಲೂರು (ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು), ವಿನಯ ಶೆಟ್ಟಿ (ಮೇಲ್ವಿಚಾರಕರು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸುಂಕದಕಟ್ಟೆ ವಲಯ),ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರೀತಿ ಮಹಿಳಾ ಸಮಾಜ ಪಾವಳ ಇದರ ಅಧ್ಯಕ್ಷೆ ಪ್ರಭಾವತಿ ಶೆಟ್ಟಿ ಉಪಸ್ಥಿತರಿದ್ದರು.
. ತಾಲೂಕು ಕೌನ್ಸಿಲ್ ಪ್ರತಿನಿಧಿ ಕಿಶೋರ್ ಕುಮಾರ್ ಪಾವಳ ಸ್ವಾಗತಿಸಿ ಪ್ರಾಸ್ತವಿಕ ಭಾಷಣ ಮಾಡಿದರು.ನಾಗೇಶ್ ಕಲ್ಲೂರು ಅವರು ಹಿಂದಿನ ಕಾಲದ ಕೃಷಿ ಕೆಲಸದ ಬಗ್ಗೆ ಮಾತನಾಡಿದರು.ಕಾರ್ಯಕ್ರಮ ದಲ್ಲಿ ಭತ್ತದ ಕೃಷಿ ನಾಟಿ ಹಾಗೂ ಕೊಯಿಲು ಕೆಲಸದಲ್ಲಿ ದುಡಿದ ಇಪ್ಪತ್ತಾರು ಮಂದಿ ಗ್ರಾಮೀಣ ಶ್ರಮಿಕರನ್ನು ಶಾಲು ಮುಟ್ಟಾಲೆ ಹಾಗೂ ಗೌರವ ಧನ ನೀಡಿ ಸನ್ಮಾನಿಸಲಾಯಿತು. ಓಣಂ ಪೂಕ್ಕಳಂ ರಚಿಸಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು ಲೈಬ್ರೆರಿ ಹಾಗೂ ಮಹಿಳಾ ಸಮಾಜದ ಸದಸ್ಯರು ಮನೆಯಲ್ಲೆ ತಯಾರಿಸಿ ತಂದ ವಿವಿಧ ರೀತಿಯ ಭಕ್ಷ್ಯ ಭೋಜನ ವಿತರಿಸಲಾಯಿತು ಚೇತನ್ ವರ್ಕಾಡಿ ನಿರೂಪಿಸಿದರು.ವಿಜಯ ಕುಮಾರ್ ಪಾವಳ ಧನ್ಯವಾದ ವಿತ್ತರು

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00