ಎಂಟು ತಿಂಗಳ ಮಗುವಿನ ಡೖಪರಿನಲ್ಲೂ ಚಿನ್ನ ಕಳ್ಳ ಸಾಗಾಟ : ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ 1 ಕೋಟಿ ರೂ.ಮೌಲ್ಯದ ಚಿನ್ನ ವಶಕ್ಕೆ

by Narayan Chambaltimar

ಕಾಸರಗೋಡು(ಸೆ. 2):
ಕೋಝಿಕ್ಕೋಡ್ ಕರಿಪ್ಪುರ ವಿಮಾನ ನಿಲ್ದಾಣದಲ್ಲಿ ಕೇವಲ ಎಂಟು ತಿಂಗಳ ಮಗುವನ್ನು ಚಿನ್ನ ಕಳ್ಳ ಸಾಗಾಟಕ್ಕೆ ಬಳಸಿದ ಘಟನೆ ನಡೆದಿದೆ. ಮಗುವಿನ ಡೖಪರ್ ನೊಳಗೆ ಹಾಗೂ ಮಗುವಿನ ತಂದೆಯ ಶರೀರದೊಳಗೆ ಅಡಗಿಸಿ ಸಾಗಿಸಿದ ಸುಮಾರು 1 ಕೋಟಿ ರೂಗಳ ಚಿನ್ನವನ್ನು ವಶಪಡಿಸಲಾಗಿದೆ.


ಮಲಪ್ಪುರಂ ಪೊನ್ನಾನಿ ನಿವಾಸಿ ವ್ಯಕ್ತಿಯೊಬ್ಬ ತನ್ನ 8 ತಿಂಗಳ ಮಗುವಿನ ಡೖಪರ್ ನ ಒಳಗೆ ಚಿನ್ನ ಮಿಶ್ರಿತವನ್ನಿರಿಸಿ ಸಾಗಿಸಲು ಯತ್ನಿಸಿದ್ದನು. ರಹಸ್ಯ ಸುಳಿವಿನ ಮೇರೆಗೆ ಡಿಆರ್ ಐ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಕಳ್ಳ ಸಾಗಾಟ ಬೆಳಕಿಗೆ ಬಂದಿದ್ದು, ವ್ಯಕ್ತಿಯನ್ನು ವಶಕ್ಕೆ ತೆಗೆಯಲಾಗಿದೆ.
ಮೂವರು ಮಕ್ಕಳ ಜತೆ ರಾಸಲ್ ಖೖಮಾದಿಂದ ಕೋಝಿಕ್ಕೋಡ್ ವಿಮಾನನಿಲ್ದಾಣಕ್ಕೆ ಬಂದಿಳಿದಾಗ ಕಾರ್ಯಾಚರಣೆ ನಡೆಯಿತು. ಪ್ರಕರಣದಲ್ಲಿ ಹೆಚ್ಚುವರಿ ತನಿಖೆ ನಡೆಯುತ್ತಿದೆ.
ಕೊಚ್ಚಿಯಲ್ಲಿ ಮಹಿಳೆಯೊಬ್ಬಳನ್ನು ನ್ಯಾಪ್ಕೀನ್ ನಲ್ಲಿ ಅಡಗಿಸಿ ಚಿನ್ನ ಸಾಗಿಸಿದ್ದನ್ನು ಮೊನ್ನೆ ಪತ್ತೆ ಹಚ್ಚಲಾಗಿತ್ತು. ಈಕೆಯನ್ನು ವಿಚಾರಣೆ ನಡೆಸಿದಾಗ ದೊರೆತ ಮಾಹಿತಿಯಂತೆ ಈ ಕಾರ್ಯಾಚರಣೆ ನಡೆಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00