ಕುಂಬಳೆ(ಆ 24):
ಕುಂಬಳೆ ಸಮೀಪದ ಮೊಗ್ರಾಲ್ ನಿವಾಸಿಯಾದ ಬಾಲಕಿಯೊಬ್ಬಳು ಶಾರ್ಜಾದಲ್ಲಿ ಮೂರಂತಸ್ತಿನ ಕಟ್ಟಡದಿಂದ ಕೆಳಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೊಗ್ರಾಲ್ ನಿವಾಸಿ ಮುಬಾರಕ್ ಆಲಿ ಎಂಬವರ ಮಗಳು, ಏಳರ ಹರೆಯದ ಸಫಾ ಮೃತ ಬಾಲಕಿಯಾಗಿದ್ದಾಳೆ. ಸೋಮವಾರ ಬೆಳಿಗ್ಗೆ 9 ರ ವೇಳೆಗೆ ಶಾರ್ಜಾ ಆಲ್ – ನಬ್ಬಾದಲ್ಲಿ ದುರ್ಘಟನೆ ನಡೆಯಿತು. ಈ ಸಂದರ್ಭ ಬಾಲಕಿಯ ತಾಯಿ ಮುರ್ಷಿದಾ ಉದ್ಯೋಗಕ್ಕೆ ಹೋಗಿದ್ದು, ತಂದೆ ಮುಬಾರಕ್ ಮಾತ್ರವೇ ಫ್ಲ್ಯಾಟ್ ನಲ್ಲಿದ್ದರು. ಆಟವಾಡುತಿದ್ದ ಮಗು ಕಿಟಿಕಿ ಮೂಲಕ ಬಂದು ಕಟ್ಟಡದಿಂದ ಕೆಳಕ್ಕೆ ಬಿದ್ದು ಸಾವಪ್ಪಿತು ಎನ್ನಲಾಗಿದೆ.
ಗಂಭೀರ ಗಾಯಗೊಂಡ ಮಗುವನ್ನು ಕೂಡಲೇ ಆಸ್ಫತ್ರೆಗೆ ಸೇರಿಸಿದರೂ ಪ್ರಾಣಾಪಾಯದಿಂದ ರಕ್ಷಿಸಲಿಕ್ಕಾಗಲಿಲ್ಲ. ಮುಬಾರಕ್ ಆಲಿ ಅವರು ದುಬೖ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿದ್ದು, ತಾಯಿ ಮುರ್ಷಿದಾ ಶಾರ್ಜಾದ ರಿಯಲ್ ಎಸ್ಟೇಟ್ ಸಂಸ್ಥೆಯ ಸಿಬಂದಿಯಾಗಿದ್ದಾರೆ. ಬೇಸಿಗೆ ರಜೆಯಲ್ಲಿ ಊರಿಗೆ ಬಂದಿದ್ದ ಇವರು ಮೊನ್ನೆಯಷ್ಟೇ ಶಾರ್ಜಾಕ್ಕೆ ಮರಳಿದ್ದರು. ಕಳೆದ ಎಂಟು ವರ್ಷಗಳಿಂದ ಶಾರ್ಜಾದಲ್ಲಿ ನೆಲೆಸಿರುವ ಇವರಿಗೆ ಸಫಾ ಏಕೖಕ ಮಗಳಾಗಿದ್ದಳು.





