ಕಾಸರಗೋಡು(ಆ. 13):
ಸ್ವಾತಂತ್ರ್ಯೋತ್ಸವದ 79ನೇ ವಾರ್ಷಿಕದಂಗವಾಗಿ ಮಹಿಳಾ ಮೋರ್ಛಾ ಕಾಸರಗೋಡು ಮಂಡಲ ಘಟಕದ ನೇತೃತ್ವದಲ್ಲಿ ರಾಷ್ಟ್ರಧ್ವಜಗಳೊಂದಿಗೆ ಬೖಕ್ ರೇಲಿ ನಡೆಯಿತು.
ಉಳಿಯತ್ತಡ್ಕದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಉದ್ಘಾಟಿಸಿದರು.
ಜಮ್ಮು ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ಪ್ರತ್ಯೇಕ ಪದವಿ ಹಿಂತೆಗೆಯುವುದರೊಂದಿಗೆ ಭಾರತಕ್ಕೆ ನಿಜಾರ್ಥದ ಸ್ವಾತಂತ್ರ್ಯ ಲಭಿಸಿದೆಯೆಂದೂ, ಈ ನಿಟ್ಟಿನಲ್ಲಿ ಭಾರತ ಪ್ರಧಾನಿ ಮೋದಿ ಅವರಿಗೆ ಕೃತಜ್ಝ ವಾಗಿರಬೇಕೆಂದೂ ಅವರು ನುಡಿದರು.
ಮಹಿಳಾ ಮೋರ್ಛಾ ಮಂಡಲಾಧ್ಯಕ್ಷೆ ಶ್ರೀವಿದ್ಯಾ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಪುಷ್ಪಾಗೋಪಾಲನ್, ಪ್ರಮೀಳಾ ಮಜಲ್, ವೀಣಾ ಅರುಣ್ ಶೆಟ್ಟಿ, ಅನಿತಾ ಆರ್ ನಾಯ್ಕ್, ಶ್ರೀಲತ ಟೀಚರ್, ಮಮತಾ ಸಾಗರ್, ಚೇತನ, ಅಶ್ವಿತ ಮಧೂರು, ಮಧೂರು ಗ್ರಾ. ಪಂ. ಅಧ್ಯಕ್ಷೆ ಸುಜ್ಞಾನಿ ಶಾನುಬಾಗ್ ಮೊದಲಾದವರು ಮಾತನಾಡಿದರು.
ಕಾಸರಗೋಡು ನಗರದ ತಾಳಿಪಡ್ಪು ಮೖದಾನದಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕೆ. ಎಸ್. ರಮಣಿ ಅವರು ಮಂಡಲಾಧ್ಯಕ್ಷೆ ಶ್ರೀವಿದ್ಯಾರಿಗೆ ರಾಷ್ಟ್ರ ಧ್ವಜ ಹಸ್ತಾಂತರಿಸಿ ಬೖಕ್ ರಾಲಿಗೆ ಚಾಲನೆ ನೀಡಿದ್ದರು.



