150
ಮೀಂಜ(ಆ. 11):
ಮೀಂಜ ಗ್ರಾ. ಪಂ. ವತಿಯಿಂದ ಮೀಂಜ ಗ್ರಾ. ಪಂ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಕೆಸರುಗದ್ದೆಯಲ್ಲಿ ಮಳೆಹಬ್ಬ ಆಚರಿಸಲಾಯಿತು.
ಮೀಂಜ ಗ್ರಾ. ಪಂ. ಅಧ್ಯಕ್ಷ ಸಿ. ಎ. ತಾಜುದ್ದೀನ್ ಅಧ್ಯಕ್ಷತೆ ವಹಿಸಿದರು.

ಶಾಸಕ ಎಕೆಎಂ ಅಶ್ರಫ್ ಮಳೆ ಹಬ್ಬ ಉದ್ಘಾಟಿಸಿದರು.
ಜಿ. ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್, ಬ್ಲಾಕ್ ಉಪಾಧ್ಯಕ್ಷೆ ಕಮಲಾಕ್ಷಿ, ಪಂ. ಉಪಾಧ್ಯಕ್ಷೆ ಉಷಾ ಪೂಂಜ, ಸ್ಥಾಯೀ ಸಮಿತಿ ಸದಸ್ಯರು, ಪಂ. ಸದಸ್ಯರು, ಕುಟುಂಬಶ್ರೀ ಜಿಲ್ಲಾ ಮಿಷನ್ ಅಧಿಕಾರಿಗಳು, ಪಂಚಾಯತ್ ನೌಕರರು, ಸಿಡಿಎಸ್ ಸದಸ್ಯರು, ಸಿಬಂದಿಗಳು ಮೊಜಲಾದವರು ಪಾಲ್ಗೊಂಡರು.
ಪದ್ಮಜಾ ಕುಳೂರು ಸ್ವಾಗತಿಸಿದರು. ರುಕ್ಯಾ ಸಿದ್ದೀಖ್ ವಂದಿಸಿದರು.




