ಕುಂಬಳೆ ಕುಟುಂಬ ಆರೋಗ್ಯ ಕೇಂದ್ರದ ದಬ್ಬಾಳಿಕೆ ನೀತಿ: ಆಸ್ಪತ್ರೆಗೆ ಡಿವೖಎಫ್ಐ ಪ್ರತಿಭಟನಾ ಮಾರ್ಚ್

by Narayan Chambaltimar

ಕುಂಬಳೆ(ಆ. 11):
ಅವ್ಯವಸ್ಥೆ, ಅಸೌಕರ್ಯ, ವೖದ್ಯ-ಸಿಬಂದಿಗಳ ಕೊರತೆಯನ್ನು ಪರಿಹರಿಸಿ ಕುಂಬಳೆ ಕುಟುಂಬ ಆರೋಗ್ಯ ಕೇಂದ್ರವನ್ನು ಸಂರಕ್ಷಿಸಿ ನಾಗರಿಕರಿಗೆ ಉನ್ನತ ಚಿಕಿತ್ಸೆ ಕೊಡಿಸಬೇಕಾಗಿದ್ದ ಆಸ್ಪತ್ರೆ ಅಧಿಕೃತರು ಅಸೌಕರ್ಯಗಳ ಅವ್ಯವಸ್ಥೆ ಪ್ರಶ್ನಿಸಿದವರನ್ನೇ ಸುಳ್ಳು ಕೇಸಿನಲ್ಲಿ ಸಿಲುಕಿಸುತ್ತಾರೆ ಎಂದಾರೋಪಿಸಿ ಡಿವೖಎಫ್ಐ ನೇತೃತ್ವದಲ್ಲಿ ಇಂದು ಕುಟುಂಬ ಆರೋಗ್ಯ ಕೇಂದ್ರಕ್ಕೆ ಮಾರ್ಚ್ ನಡೆಯಿತು.

ಸಿಪಿಐಎಂ ಕುಂಬಳೆ ಏರಿಯಾ ಸೆಕ್ರಟರಿ ಸಿಎ ಸುಬೖರ್ ಮಾರ್ಚ್ ಉದ್ಘಾಟಿಸಿದರು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶಕ್ಕೆ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ವಲಯ ಎಂಬ ಕೇರಳದ ಆರೋಗ್ಯ ರಂಗವನ್ನು ಕೇವಲ ಎರಡು ತಿಂಗಳಲ್ಲಿ ಯುಡಿಎಫ್ ಸರಕಾರ ಕೆಡಿಸಿದೆ. ಅವ್ಯವಸ್ಥೆ ಪ್ರಶ್ನಿಸಿದ ಸಿಐಟಿಯು ಕಾರ್ಯಕರ್ತರನ್ನೇ ಜಾಮೀನು ರಹಿತ ಸುಳ್ಳು ಕೇಸಲ್ಲಿ ಸಿಲುಕಿಸಲಾಗಿದೆ. ಇದು ಸಾಮಾಜಿಕ ಹಿತಾಸಕ್ತಿ ಚಟುವಟಿಕೆಗಳಲ್ಲಿ ತೊಡಗಿಸುವ ಸಮಾಜಸೇವಕರ ಬಾಯ್ಮುಚ್ಚಿಸುವ ಕೆಲಸ. ಹೇರಿದ ಕೇಸನ್ನು ಕೂಡಲೇ ಹಿಂತೆಗೆಯಬೇಕು ಎಂದವರು ಆಗ್ರಹಿಸಿದರು.

ಡಿವೖಎಫ್ಐ ಕುಂಬಳೆ ವಲಯ ಸೆಕ್ರೆಟರಿ ಸತ್ಯನ್ ಸ್ವಾಗತಿಸಿದರು. ಬ್ಲಾಕ್ ಕಾರ್ಯನಿರ್ವಾಹಕ ಸದಸ್ಯ ಸೖನುಲ್ ಹೖರಾಸ್ ಅಧ್ಯಕ್ಷತೆ ವಹಿಸಿದರು. ಕುಂಬಳೆ ಬ್ಲಾಕ್ ಅಧ್ಯಕ್ಷ ಮಜೀದ್ ಎಂ. ಎಚ್, ಸಿಪಿಎಂ ಕುಂಬಳೆ ಲೋಕಲ್ ಸೆಕ್ರಟರಿ ಪ್ರಸಾದ್ ಕುಮಾರ್, ಆಟೋರಿಕ್ಷಾ ಕಾರ್ಮಿಕರ ಸಿಐಟಿಯು ಯೂನಿಯನ್ ನಾಯಕರಾದ ಅಬ್ಬಾಸ್ ಪೇರಾಲ್ ಮೊದಲಾದವರು ಮಾತನಾಡಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00