ಮಂಜೇಶ್ವರದ ಜಲ ದೌರ್ಲಬ್ಯದ ಪರಿಹಾರಕ್ಕೆ “ಜೀವ ಜಲ ಯೋಜನೆ”

by Narayan Chambaltimar
  • ಬ್ಲಾಕ್ ಪಂ. ಅಭಿವೃದ್ಧಿ ಸೆಮಿನಾರಿನಲ್ಲಿ ಯೋಜನೆ ಮಂಡನೆ: 27ಲಕ್ಷದ ಯೋಜನೆಯಂತೆ ಕೆರೆ, ಬಾವಿಗಳ ಪುನರುಜ್ಜೀವನಕ್ಕೆ ನಿರ್ಧಾರ

ಮಂಜೇಶ್ವರ:(ಆ11):
ಕೇರಳದ ಅತ್ಯಂತ ನೀರಿನ ಕೊರತೆ ಅನುಭವಿಸುವ ಪ್ರದೇಶಗಳಲ್ಲಿ ಒಂದಾದ ಮಂಜೇಶ್ವರದ ಜಲದೌರ್ಬಲ್ಯಕ್ಕೆ ಪರಿಹಾರವಾಗಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಮುಂದಾಗಿದೆ. ಬ್ಲಾಕ್ ಪಂಚಾಯತ್ ವಾರ್ಷಿಕ ಯೋಜನೆ ರೂಪಿಕರಣದ ಅಂಗವಾಗಿ ನಡೆದ ಅಭಿವೃದ್ಧಿ ಸೆಮಿನಾರಿನಲ್ಲಿ, ಅಭಿವೃದ್ಧಿ ಸ್ಟ್ಯಾಂಡಿಂಗ್ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಅವರು ಮಂಜೇಶ್ವರ ಜನರ ದೀರ್ಘಕಾಲದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು “ಜೀವಜಲ” ಎಂಬ ಯೋಜನೆಯನ್ನು ಪರಿಚಯಿಸಿದರು.

 

ಕೇಂದ್ರ ಹಣಕಾಸು ಆಯೋಗದ ನಿಧಿಯನ್ನು ಬಳಸಿಕೊಂಡು ಯೋಜನೆಯ ಮೊದಲ ಹಂತವಾಗಿ ಈ ವರ್ಷ ಸಾರ್ವಜನಿಕ ಬಾವಿಗಳು, ಕೆರೆಗಳು ಮತ್ತು ಇತರ ಜಲಾಶಯಗಳನ್ನು ಪುನರುಜ್ಜೀವನಗೊಳಿಸಲು 27 ಲಕ್ಷ ರೂ.ಗಳ ಯೋಜನೆ ರೂಪಿಸಲಾಗಿದೆ. ಭೂಗರ್ಭ ಜಲಮಟ್ಟವನ್ನು ಹೆಚ್ಚಿಸುವುದನ್ನು ಒಳಗೊಂಡಂತೆ ಈ ಯೋಜನೆಯನ್ನು ಜನಪಾಲ್ಗೊಳ್ಳುವಿಕೆಯಿಂದ ಜಾರಿಗೊಳಿಸುವುದು ಉದ್ದೇಶವಾಗಿದೆ ಎಂದು ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಯು. ಕೆ. ಸೈಫುಲ್ಲ ತಂಗಳ್ ಅವರು ಸೆಮಿನಾರ್ ಉದ್ಘಾಟಿಸಿ ಹೇಳಿದರು.

ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕಮಲಾಕ್ಷಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಬ್ಲಾಕ್ ಪಂಚಾಯತ್ ಸ್ಟ್ಯಾಂಡಿಂಗ್ ಸಮಿತಿ ಸದಸ್ಯರು, ಬ್ಲಾಕ್ ಪಂಚಾಯತ್ ಸದಸ್ಯರು, ಯೋಜನಾ ಸಮಿತಿ ಸದಸ್ಯರು ಮತ್ತು ವಿವಿಧ ಕಾರ್ಯನಿರ್ವಹಣಾ ಅಧಿಕಾರಿಗಳು ಭಾಗವಹಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00