ದುಬೈ ಯಕ್ಷಗಾನ ಅಭ್ಯಾಸ ಕೇಂದ್ರಕ್ಕೆ ಏಕಾ ದಶ ವರ್ಷೋತ್ಸವ ಸಂಭ್ರಮ : ಯಕ್ಷಗಾನ ತವರೂರಲ್ಲಿ ಗೆಜ್ಜೆಸೇವೆ ಸಡಗರ

by Narayan Chambaltimar
  • ಕಟೀಲು, ಮೂಡಬಿದಿರೆ, ಮಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನ, ಗೌರವ ಸಮಾರಂಭ

ದುಬೈ, ಜುಲೈ 30:
ಮಧ್ಯಪ್ರಾಚ್ಯದ ಏಕೈಕ ಹಾಗೂ ಸರ್ವಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಸಂಸ್ಥೆಯಾಗಿ ಹೆಸರಾದ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ತನ್ನ ಏಕಾದಶ ವರ್ಷೋತ್ಸವವನ್ನು ಆಚರಿಸುತ್ತಿದ್ದು, ಈ ವಿಶೇಷ ಸಂದರ್ಭದಲ್ಲಿ ಯಕ್ಷಗಾನದ ತವರೂರು ಕರಾವಳಿಯಲ್ಲಿ ಮೂರು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಇದರಂಗವಾಗಿ ದುಬೈಯ ಕಲಾವಿದರು ಮೊದಲಿಗೆ ಆಗಸ್ಟ್ 2ರಂದು (ಭಾನುವಾರ) ಮಧ್ಯಾಹ್ನ 1.20 ಗಂಟೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತೀ ಸದನದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ಗೆಜ್ಜೆಸೇವೆ ಸಲ್ಲಿಸಲಿದ್ದಾರೆ. ತನ್ಮೂಲಕ ಸರಣಿಆರಂಭವಾಗಲಿದೆ.

ಆಗಸ್ಟ್ 4 ರಂದು (ಮಂಗಳವಾರ) ಸಂಜೆ 5.45 ಗಂಟೆಗೆ ಮೂಡಬಿದ್ರೆಯ ಆಳ್ವಾಸ್ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ
ಎರಡನೇ ಕಾರ್ಯಕ್ರಮ ನಡೆಯಲಿದೆ. ಆಳ್ವಾಸ್
ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ 75ನೇ ಜನ್ಮಸಂವತ್ಸರ ಸರಣಿ ಕಾರ್ಯಕ್ರಮದ ಅಂಗವಾಗಿ, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಯಕ್ಷಗಾನ ಪ್ರದರ್ಶನ ಹಾಗೂ ಡಾ. ಮೋಹನ ಆಳ್ವ ಗೌರವಾಭಿನಂದನೆ ಕಾರ್ಯಕ್ರಮ ನಡೆಯಲಿದೆ.

ಅಂತಿಮವಾಗಿ ಆಗಸ್ಟ್ 8, (ಶನಿವಾರ) ಮಧ್ಯಾಹ್ನ 1.20 ಗಂಟೆಗೆ ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ, ಶ್ರೀ ಮಂಗಳಾದೇವಿಯ ಸನ್ನಿಧಿಯಲ್ಲಿ ಗೆಜ್ಜೆಸೇವೆ ಹಾಗೂ ‘ಯಕ್ಷ ಶ್ರೀ ರಕ್ಷಾ’ ಗೌರವ ಪ್ರದಾನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು.

ಯಕ್ಷಗಾನದ ಪರಂಪರೆಯನ್ನು ಯುಎಇಯಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಯಶಸ್ವಿಯಾಗಿ ಬೆಳೆಸುತ್ತಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ, ಇದೀಗ ತವರೂರಿನ ಪವಿತ್ರ ನೆಲದಲ್ಲಿಯೇ ತನ್ನ ವಿದ್ಯಾರ್ಥಿಗಳೊಂದಿಗೆ ಕಲಾಸೇವೆಯನ್ನು ಅರ್ಪಿಸುತ್ತಿರುವುದು ಕರಾವಳಿ ಯಕ್ಷಾಭಿಮಾನಿಗಳಲ್ಲಿ ವಿಶೇಷ ಸಂಭ್ರಮ ಮೂಡಿಸಿದೆ.

ಈ ಮೂರು ಕಾರ್ಯಕ್ರಮಗಳಿಗೆ ಯಕ್ಷಾಭಿಮಾನಿಗಳು, ಕಲಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಯ ಸಂಚಾಲಕರಾದ ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00