ಅಂತರಾಷ್ಟ್ರೀಯ ಕ್ರಿಕೆಟಿಗೆ ಕಲಾತ್ಮಕ ಕ್ರಿಕೆಟರ್ ಅಜಿಂಕ್ಯ ರೆಹಾನೆ ವಿದಾಯ

by Narayan Chambaltimar
  • ಭಾರತದ ಹಲವು ಗೆಲುವುಗಳಲ್ಲಿ ನಿರ್ಣಾಯಕರಾಗಿದ್ದ ಕ್ರಿಕೆಟ್ ಕಲಾವಿದ ನಿವೃತ್ತಿ

ದೆಹಲಿ(ಜು 30):
ಭಾರತದ ಹಿರಿಯ ಕಲಾತ್ಮಕ ಬ್ಯಾಟಿಂಗ್ ನ ಕ್ರಿಕೆಟಿಗ ಅಜಿಂಕ್ಯ ರೆಹಾನೆ ಗುರುವಾರ ಅಂತರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. 38ರ ಹರೆಯದ ರೆಹಾನೆ ಈ ಸಂಬಂಧ ಮಾಧ್ಯಮಗಳಿಗೆ ನೀಡಿದ ಮಾಹಿತಿಯಲ್ಲಿ ” ಸಾಕಷ್ಟು ಯೋಚಿಸಿ, ಆತ್ಮಾವಲೋಕನ ಮಾಡಿ ಈ ನಿರ್ಧಾರ ಕೖಗೊಂಡಿದ್ದೇನೆ. ಮುಂದಿನ ಹಾದಿಯತ್ತ ಸಾಗಲು ಇದು ಸಕಾಲ” ಎಂದಿದ್ದಾರೆ.

ಟೆಸ್ಟ್ ಹಾಗೂ ಏಕದಿನ ಮತ್ತು ಟಿ ಟ್ವೆಂಟಿ ಎಂಬ ಮೂರೂ ಫಾರ್ಮೆಟಿನಲ್ಲಿ ಭಾರತದ ಪರ ಅತ್ಯಂತ ವಿಶ್ವಸನೀಯ ಕಲಾತ್ಮಕ ಬ್ಯಾಟರ್ ಗಳಲ್ಲಿ ರೆಹಾನೆ ಒಬ್ಬರಾಗಿದ್ದರು.
ಹಲವು ಸ್ಮರಣೀಯ ಟೆಸ್ಟ್ ಪಂದ್ಯಗಳನ್ನು ಹಾಗೂ ಸರಣಿ ಗೆಲುವು ಪಡೆಯುವುದರಲ್ಲಿ ಅವರು ನಿರ್ಣಾಯಕರಾಗಿದ್ದರು. 2020-21ರ ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ ಅವರ ನಾಯಕತ್ವವು ಅವರ ವೃತ್ತಿ ಜೀವನದ ಅತ್ಯಂತ ಶ್ರೇಷ್ಟ, ಮಧುರ ನೆನಪಿನ ಸಾಧನೆಯಾಗಿದೆ. ಸೊಗಸಾದ ಸ್ಟ್ರೋಕ್ ಪ್ಲೇ, ಪರಿಪಕ್ವತೆಯ ಬ್ಯಾಟಿಂಗ್ ಕೌಶಲ್ಯ, ಸ್ಥಿರತೆ, ತಂಡದ ಅಗತ್ಯಕ್ಕೆ ತಕ್ಕ ಜವಾಬ್ದಾರಿಯುತ ಪ್ರದರ್ಶನ ಅವರ ವಿಶೇಷತೆ. ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರೂ ದೇಸೀ ಕ್ರಿಕೆಟ್ ಮತ್ತು ಫ್ರಾಂಚೖಸಿ ಲೀಗ್ ನಲ್ಲಿ ಅವರು ಆಟ ಮುಂದುವರಿಸುವರೆಂದು ವರದಿಯಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00