ಐಲದಲ್ಲ ಗಾನಕೋಗಿಲೆ ಎಸ್. ಜಾನಕಿಯಮ್ಮನ ಸ್ಮರಣೆ :ನುಡಿ ನಮನಗಳೊಂದಿಗೆ ಗಾನ ನಮನದ ಶ್ರದ್ಧಾಂಜಲಿ

by Narayan Chambaltimar

ಉಪ್ಪಳ, ಜು. 26:
ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಸಂಘ ಐಲ ಇವರ ವತಿಯಿಂದ ಇತ್ತೀಚೆಗೆ ಅಗಲಿದ ಬಹುಭಾಷೆಗಳ
ಖ್ಯಾತ ಹಿನ್ನಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅಮ್ಮ ನ ವರಿಗೆ ನುಡಿನಮನದೊಂದಿಗೆ ಗಾನ ನಮನ ಕಾರ್ಯಕ್ರಮ ಐಲ ಶ್ರೀ ದುರ್ಗಾ ಪರಮೇಶ್ವರೀ ಕಲಾ ಭವನದಲ್ಲಿ
ಭಾನುವಾರ ನಡೆಯಿತು.

ಕಾರ್ಯಕ್ರಮವನ್ನು ಸಂಘದ ಹಿರಿಯ ಸದಸ್ಯೆಯರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೊಡಿಬೈಲು ನಾರಾಯಣ ಹೆಗಡೆ ಹಾಗೂ ಕಲಾರತ್ನ ಶಂನಾಡಿಗ ಕುಂಬಳೆ ಹಾಗೂ ದುರ್ಗಾ ಪರಮೇಶ್ವರಿ ಮಹಿಳಾ ಸಂಘದ ಶಾರದಾ ಟೀಚರ್ ಅವರು ಎಸ್. ಜಾನಕಿ ಅವರ ಅಪೂರ್ವ ಗಾಯನ, ಸರಳ ವ್ಯಕ್ತಿತ್ವ, ಸಂಗೀತ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿ ಶ್ರದ್ಧಾಂಜಲಿ ನುಡಿ ನಮನಗಳನ್ನು ಅರ್ಪಿಸಿದರು.

ಬಳಿಕ ನಡೆದ ಸಂಗೀತ ನಮನ ಕಾರ್ಯಕ್ರಮದಲ್ಲಿ ಚೈತ್ರ ಮಹೇಶ್ ಕುಂಬಳೆ ಪ್ರವೀಣ್ ಕುಮಾರ್ ಪ್ರತಾಪ ನಗರ ಸೇರಿದಂತೆ ಸಂಘದ ಸದಸ್ಯೆಯರು ಹಾಗೂ ಊರ ಹವ್ಯಾಸಿ ಪ್ರತಿಭೆಗಳಾದ ಜಯ ಶರ್ಮಿಳಾ, ಭುವನೇಶ್ವರಿ, ಅರ್ಪಿತಾ ಅಭಿಷೇಕ್, ಕವಿತ ಅಜಿತ್, ಗೀತಾಂಜಲಿ ಪಿ.ರೈ,ರಾಜೀವಿ ಟೀಚರ್ ಅಮಿತಾ ಪ್ರಶಾಂತ್, ಪ್ರೇಮ ಸತ್ಯನ್, ಜಲಜ ರವಿ ಹಾಗೂ ಕುಮಾರಿಯರಾದ ಪೂಜಾ ವಾಸುದೇವ್ ಮತ್ತು ನಿಧಿ ಭಾಸ್ಕರ್ ರವರು ಎಸ್ ಜಾನಕಿ ಅವರು ಹಾಡಿದ ಜನಪ್ರಿಯ ಗೀತೆಗಳನ್ನು ಸುಮಧುರವಾಗಿ ಹಾಡಿ ಸಂಗೀತ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಗೀತಾಭಿಮಾನಿಗಳು ಹಾಡುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪದ್ಮಾ ಮೋಹನ್ ದಾಸ್ ಸ್ವಾಗತಿಸಿ ಕೊನೆಯಲ್ಲಿ ರೋಹಿಣಿ ಸುಂದರ್ ವಂದನಾರ್ಪಣೆ ಸಲ್ಲಿಸಿದರು. ತರುಣ ಕಲಾ ವೃಂದದ ಕಮಲಾಕ್ಷ ಐಲ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯೆಯರು ಹಾಗೂ ಗಣ್ಯರು ಅಪಾರ ಸಂಗೀತ ಪ್ರೇಮಿಗಳು ಉಪಸ್ಥಿತರಿದ್ದು, ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ನಮನ ಅರ್ಪಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00