- ಕೇಂದ್ರ ಸರಕಾರವನ್ನು ನಡುಗಿಸಿ, ಮಣಿಸುವಲ್ಲಿ ಸಫಲವಾದ ‘ಜಿರಲೆ’ಗಳು..!
ದೆಹಲಿ(25): ನೀಟ್ ಪರೀಕ್ಷಾ ಅವ್ಯವಹಾರ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರತಿಭಟಿಸಿ ಜಂಥರ್ ಮಂಥರ್ ನಲ್ಲಿ ಸತ್ಯಾಗ್ರಹ ನಿರತ ಸಿಜೆಪಿ ಪಕ್ಷದ “ಜಿರಲೆ”ಗಳ ಮುಂದೆ ಕೇಂದ್ರ ಸರಕಾರ ಮಂಡಿಯೂರಿದೆ. ಚಳುವಳಿಕಾರರ ಪ್ರಬಲ ಬೇಡಿಕೆಯಾಗಿದ್ದ ಶಿಕ್ಷಣ ಸಚಿವ ಧರ್ಮೇಂದ್ರ ಪಧಾನ್ ರಾಜೀನಾಮೆಗೆ ಕೇಂದ್ರ ಸರಕಾರ ಸಮ್ಮತಿಸಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಿದ್ದಾರೆ.
ಈ ವಿಷಯದಲ್ಲಿ ಇಂದು ಮಧ್ಯಾಹ್ನದ ವರೆಗೆ ಸಮಯ ಕೋರಿದ್ದ ಕೇಂದ್ರ ಸರಕಾರ ಶನಿವಾರ ಮಧ್ಯಾಹ್ನ ಸಿಜೆಪಿ ಪ್ರತಿನಿಧಿಗಳ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವರೆಂದು ಹೇಳಲಾಗಿತ್ತು. ಆದರೆ ಅದಕ್ಕೂ ಮೊದಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೖತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದರು.
ಚಳುವಳಿ ಹಿಂತೆಗೆಯವಂತೆ ಒತ್ತಾಯಿಸಿ ಕೇಂದ್ರ ಸರಕಾರಿ ಪ್ರತಿನಿಧಿಗಳು ಶುಕ್ರವಾರ ಸಿಜೆಪಿ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ಎರಡು ಬೇಡಿಕೆಗಳನ್ನು ಅಂಗೀಕರಿಸಿದ್ದರು. ಧರ್ಮೆಂದ್ರ ಪ್ರಧಾನ್ ರಾಜೀನಾಮೆಯ ಹೊರತು ಚಳುವಳಿ ಹಿಂತೆಗೆಯುವುದಿಲ್ಲ ಎಂದು ಸಿಜೆಪಿ ಪಟ್ಟು ಹಿಡಿದಿತ್ತು. ಇದೀಗ ಜೆನ್ಸೀ ಒಕ್ಕೂಟ ಐತಿಹಾಸಿಕ ಗೆಲುವು ಪಡೆದಂತಾಗಿದೆ. ಕಳೆದ 28ದಿನಗಳಿಂದ ನಡೆದ ಉಪವಾಸ ಸತ್ಯಾಗ್ರಹ ಸಹಿತ ಕಾಕ್ರೋಚ್ ಆಂದೋಲನ ದೇಶವ್ಯಾಪಕ ಸರಕಾರಿ ಧೋರಣೆಯ ವಿರುದ್ಧ ಆಂದೋಲನ ಸ್ವರೂಪ ಪಡೆಯುತ್ತಿರುವಂತೆಯೇ ಶಿಕ್ಷಣ ಸಚಿವರ ತಲೆದಂಡವಾಗಿದೆ.





