ನೀಟ್ ಪರೀಕ್ಷಾ ಅವ್ಯವಸ್ಥೆ ಪ್ರತಿಭಟಿಸಿ ನಡೆಯುವ ಸಿಜೆಪಿ ಚಳುವಳಿಗೆ ಸುಪ್ರೀಂ ಕೋರ್ಟ್ ವಕೀಲರಿಂದಲೂ ಬೆಂಬಲ

by Narayan Chambaltimar
  • ‘ಪ್ರಜಾಪ್ರಭುತ್ವ ಉಳಿಸಿ- ಸಂವಿಧಾನ ರಕ್ಷಿಸಿ’ ಧ್ಯೇಯವಾಕ್ಯದೊಂದಿಗೆ ಸಂವಿಧಾನದ ಪ್ರಸ್ತಾವನೆ ಓದಿದ ವಕೀಲರು

ದೆಹಲಿ ( ಜು 23): ಪಿಟಿಐ ವರದಿ

ನೀಟ್ ಪರೀಕ್ಷಾ ಅವ್ಯವಸ್ಥೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಮರು ಪರೀಕ್ಷೆಯ ಅಂಕ ಕಡಿತಗಳನ್ನು ಪ್ರಶ್ನಿಸಿ, ಶಿಕ್ಷಣ ಸಚಿವರ ರಾಜೀನಾಮೆ ಬಯಸಿ ಕಾಕ್ರೋಚ್ ಜನತಾ ಪಕ್ಷ ಸಹಿತ ಪ್ರತಿಪಕ್ಷಗಳು ಎಬ್ಬಿಸಿರುವ ಆಂದೋಲನಕ್ಕೆಸುಪ್ರೀಂ ಕೋರ್ಟಿನ ಒಂದು ವಿಭಾಗ ವಕೀಲರು ಕೂಡಾ ಬೆಂಬಲಿಸಿದ್ದಾರೆ.
ಸಿಜೆಪಿ ನಡೆಸುತ್ತಿರುವ ಪ್ರತಿಭಟಧೆಗೆ ಬೆಂಬಲಿಸಿದ ಸುಪ್ರೀಂ ವಕೀಲರು ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ನೖತಿಕ ಬೆಂಬಲ ಪ್ರಕಟಿಸಿದರು. “ಪ್ರಜಾಪ್ರಭುತ್ವ ಉಳಿಸಿ- ಸಂವಿಧಾನ ರಕ್ಷಿಸಿ” ಘೋಷ ವಾಕ್ಯಗಳೊಂದಿಗೆ ಸುಪ್ರೀಂಕೋರ್ಟಿನ ಉದ್ಯಾನದ ಬಳಿ ಜಮಾಯಿಸಿದ ವಕೀಲರು ಸಂವಿಧಾನದ ಪ್ರಸ್ತಾವನೆ ಓದಿ, ರಾಷ್ಟ್ರಗೀತೆ ಹಾಡಿದರು.

ಈ ಕುರಿತು ರಾಷ್ಟ್ರೀಯ ಮಾಧ್ಯಮಗಳ ಜತೆ ಮಾತನಾಡಿದ ಹಿರಿಯ ವಕೀಲೆ ಇಂದಿರಾ ಸಿಂಗ್ ” ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪರವಾಗಿ ನೖತಿಕ ಬೆಂಬಲ ನೀಡಲು ನಾವು ಜಮಾಯಿಸಿದ್ದೇವೆ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು. ನಾವು ನಮಗಾಗಿ ಪ್ರತಿಭಟಿಸುತ್ತಿಲ್ಲ. ಈ ವಿವಾದ ವಿದ್ಯಾರ್ಥಿಗಳ ಹಕ್ಕು ಮತ್ತು ಭವಿಷ್ಯಕ್ಕೆ ಸಂಬಂದಿಸಿದ್ದು, ಅವರಿಗೆ ನ್ಯಾಯಾಲಯದಲ್ಲಿ ನ್ಯಾಯ ಒದಗಬೇಕು. ದೇಶದ ಸುಪ್ರೀಂ ಕೋರ್ಟಿನ ಕರ್ತವ್ಯವೇ ನ್ಯಾಯ ಕಾಪಾಡಿ, ನ್ಯಾಯ ದಾನ ಮಾಡುವುದು. ಅದಕ್ಕಾಗಿ ನಮ್ಮ ಬೆಂಬಲ” ಎಂದರು.

ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದದ್ದು ದೇಶದಾದ್ಯಂತ ಭಾರೀ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮರು ಪರೀಕ್ಷೆ ನಡೆಸುವುದೆಂದು ಘೋಷಿಸಿತ್ತು. ಅದರಂತೆ ಜೂನ್ 21ರಂದು ಮರು ಪರೀಕ್ಷೆ ನಡೆದಿದೆ. ಆದರೆ ಮರು ಪರೀಕ್ಷೆಯ ಬಳಿಕ ಪ್ರಕಟಿಸಿದ್ದ ಕೀ ಉತ್ತರಗಳಿಗೂ, ಫಲಿತಾಂಶದ ಅಂಕಗಳಿಗೂ ತಾಳೆ ಇಲ್ಲವೆಂದು ಆರೋಪವೆದ್ದಿದೆ. ಪರೀಕ್ಷಾ ವ್ಯವಸ್ಥೆಯೇ ಹದಗೆಟ್ಟಿದ್ದು, ಶಿಕ್ಷಣ ಸಚಿವರ ರಾಜೀನಾಮೆ ಬಯಸಿ ವಿದ್ಯಾರ್ಥಿ ಆಂದೋಲನ ರೂಪುಗೊಂಡಿದೆ. ಸಿಜೆಪಿ ನೇತೃತ್ವದಲ್ಲಿ ನಡೆಯುವ ಜನಾಂದೋಲನಕ್ಕೆ ದೇಶ ವಿದೇಶಗಳಿಂದ ಬೆಂಬಲ ಪ್ರಕಟವಾಗುತ್ತಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00