- ಸೌತ್ ಇಂಡಿಯನ್ ಬೇಂಕ್ ಸೀತಾಂಗೋಳಿ ಶಾಖೆ ನಷ್ಟ ಪರಿಹಾರ ನೀಡಬೇಕೆಂದು ಬಳಕೆದಾರರ ನ್ಯಾಯಾಲಯ ಆದೇಶ
ಕುಂಬಳೆ(ಜು19):
ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಹಣ ಇಲ್ಲ ಎಂಬ ಕಾರಣ ಮುಂದಿರಿಸಿ ಗ್ರಾಹಕರೊಬ್ಬರಿಗೆ ದಂಡ ವಿಧಿಸಿದ ಬೇಂಕ್ ಗ್ರಾಹಕನಿಗೆ ನಷ್ಟ ಪರಿಹಾರ ನೀಡಬೇಕೆಂದು ಬಳಕೆದಾರರ ನ್ಯಾಯಾಲಯ ಆದೇಶಿಸಿದೆ. ಗ್ರಾಹಕನಿಗೆ ಉಂಟಾದ ಮಾನಸಿಕ ಕಿರಿಕಿರಿ ಮತ್ತು ಅಸೌಕರ್ಯಗಳನ್ನು ಪರಿಗಣಿಸಿ ಯಥೋಚಿತ ನಷ್ಟಪರಿಹಾರ ಸೌಲಭ್ಯ ನೀಡಬೇಕೆಂದು ಸೌತ್ ಇಂಡಿಯನ್ ಬೇಂಕಿನ ಸೀತಾಂಗೋಳಿ ಶಾಖೆಗೆ ಕಾಸರಗೋಡು ಜಿಲ್ಲಾ ಬಳಕೆದಾರರ ನ್ಯಾಯಾಲಯ ಆದೇಶಿಸಿದೆ.
ಸೀತಾಂಗೋಳಿ ಸೌತ್ ಇಂಡಿಯನ್ ಬೇಂಕ್ ವಿರುದ್ಧ ಅಲ್ಲಿ ಖಾತೆ ಹೊಂದಿದ್ದ ರಾಜು ಸ್ಟೀಫನ್ ಡಿಸೋಜ ಎಃಬವರು ಬಳಕೆ ದಾರರ ನ್ಯಾಯಾಲಯಕ್ಕೆ ನೀಡಿದ್ದ ದೂರು ವಿಚಾರಿಸಿ ಈ ಆದೇಶ ನೀಡಲಿಗಿದೆ.
ರಾಜು ಸ್ಟೀಫನ್ ಅವರು 2022 ರಲ್ಲಿ ಪ್ರಸ್ತುತ ಬೇಂಕಿನ ಸೀತಾಂಗೋಳಿ ಶಾಖೆಯಲ್ಲಿ ಕರೆಂಟ್ ಅಕೌಂಟ್ ಹೊಂದಿದ್ದರು. ಅಗತ್ಯದ ಹಣವನ್ನಷ್ಟೇ ಇರಿಸಿ ಖಾತೆ ಹೊಂದಲಾಗಿತ್ತು. ಆದರೆ ಎಸ್. ಎಂ. ಎಸ್. ಶುಲ್ಕ ಎಂಬ ನೆಪದಲ್ಲಿ ಇವರ ಖಾತೆಯಿಂದ ಬೇಂಕು 295 ರೂ ವಸೂಲಿ ಮಾಡಿತು. ಈ ಮೂಲಕ ಖಾತೆಯಲ್ಲಿ ಮಿನಿಮಂ ಬೇಲೆನ್ಸಿಗಿಂತಲೂ ಹಣ ಕಡಿಮೆಯಾಯಿತು. ಈ ಕ್ರಮವನ್ನು ಪ್ರಶ್ನಿಸಿ ಬಳಕೆದಾರರ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು.





