ಬದಿಯಡ್ಕ ಮಂಡಲ ಕಾಂಗ್ರೆಸ್ ಘಟಕದ ವತಿಯಿಂದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸಂಸ್ಮರಣೆ

by Narayan Chambaltimar
  • ವರ್ತಮಾನ ರಾಜಕೀಯಕ್ಕೆ ಜನನಾಯಕ ಉಮ್ಮನ್ ಚಾಂಡಿ ಆದರ್ಶ ಪುರುಷ- ಶ್ಯಾಮ ಪ್ರಸಾದ್ ಮಾನ್ಯ

ಬದಿಯಡ್ಕ(ಜು 18):
ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ , ಜನ ನಾಯಕ ಉಮ್ಮನ್ ಚಾಂಡಿಯವರ ಮೂರನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆಸಲಾಯಿತು.

ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅವರ ಅಧ್ಯಕ್ಷತೆಯಲ್ಲಿ ಉಮ್ಮನ್ ಚಾಂಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ರಾಜಕೀಯ ನಾಯಕರ ಸಂಸ್ಕಾರ-ಸಂಸ್ಕೃತಿಯೇ ಬದಲಾಗಿರುವ ವರ್ತಮಾನ ರಾಜಕೀಯಕ್ಕೆ ಉಮ್ಮನ್ ಚಾಂಡಿ ಆದರ್ಶ ಪುರುಷರು. ಅವರ ಸರಳತೆಯ ನಯ, ವಿನಯ ಮತ್ತು ಜನ ಸೇವಾ ಕಾಳಜಿ ಇನ್ಯಾರಲ್ಲೂ ಇಲ್ಲ. ಅವರು ನಮ್ಮ ಮಾದರಿಯ ಆದರ್ಶ ನಾಯಕ ಎಂದು ನುಡಿದರು.

ನೇತಾರರಾದ ಜಗನ್ನಾಥ ರೈ , ತಿರುಪತಿ ಕುಮಾರ್ ಭಟ್ , ರಾಮ ಪಟ್ಟಾಜೆ , ಶಾಫಿ ಗೋಳಿಯಡ್ಕ , ಶ್ರೀನಾಥ್ ಬದಿಯಡ್ಕ , ನಿರಂಜನ ರೈ, ಲೋಹಿತಾಕ್ಷನ್ , ನಾರಾಯಣ ಭಂಡಾರಿ, ಕೇಶವ ಬದಿಯಡ್ಕ , ಚಂದ್ರಹಾಸನ್ ಮಾಸ್ಟರ್ , ಗೋಪಾಲ.ಡಿ, ಹಾಗೂ ಮಂಡಲ , ವಾರ್ಡು , ಬೂತು ಮಟ್ಟದ
ನೇತಾರರು ಭಾಗವಹಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00