ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಿರತ ಸೋನಮ್ ವಾಂಗ್ಚೂಕ್ ರನ್ನು ಆಸ್ಪತ್ರೆಗೆ ಕೊಂಡೊಯ್ದ ಪೋಲೀಸ್: ಬೆನ್ನಲ್ಲೇ ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಸತ್ಯಾಗ್ರಹ ಆರಂಭ

by Narayan Chambaltimar

ದೆಹಲಿ (ಜು 18):
ದೆಹಲಿಯ ಜಂತರ್ ಮಂತರ್ ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚೂಕ್ ಅವರನ್ನು ಸತ್ಯಾಗ್ರಹದ 19ನೇ ದಿನ ಆರೋಗ್ಯ ಸಂಪೂರ್ಣ ಕ್ಷೀಣಿಸಿದ ಹಿನ್ನೆಲೆಯಲ್ಲಿ, ಅಗತ್ಯ ವೖದಕೀಯ ನೆರವು ನೀಡುವುದಕ್ಕೆ ಪೊಲೀಸರು ಅವರನ್ನು ಸಪ್ದರ್ ಸಿಂಗ್ ಆಸ್ಪತ್ರೆಗೆ ಕೊಂಡೊಯ್ಯದರು.
ದೆಹಲಿ ಹೖಕೋರ್ಟ್ ನಿರ್ದೇಶನದಂತೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ದೀರ್ಘಾವಧಿಯ ಉಪವಾಸ ಮತ್ತು ನಿರ್ಜಲೀಕರಣದಿಂದ ಅವರು ಬಳಲಿದ್ದಾರೆ. ಅವರ ಅಂಗಾಂಗಳನ್ನು ಮತ್ತೆ ಪೂರ್ವ ಸ್ಥಿತಿಗೆ ತರಲು ನಿರಂತರ ಚಿಕಿತ್ಸೆ ಅಗತ್ಯವಿದೆ.
ಇದೇ ವೇಳೆ ಸತ್ಯಾಗ್ರಹಿಗಳ. ಮೇಲೆ ಪೊಲೀಸ್ ದೌರ್ಜನ್ಯ ನಡೆಯಿತು ಎಂದು ಆರೋಪ ಎದ್ದಿದೆ. ಕಾಂಕ್ರೂಚ್ ಜನತಾ ಪಾರ್ಟಿ (ಸಿಜೆಪಿ ) ಸಂಸ್ಥಾಪಕ ಪೊಲೀಸ್ ನಡೆಯನ್ನು ಖಂಡಿಸಿದ್ದಾರಲ್ಲದೇ ಬಲವಂತದಿಂದ ವಾಂಗ್ಚೂಕ್ ಅವರನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಕೊಂಡೊಯ್ದಿದ್ದಾರೆಂದು ಆರೋಪಿಸಿದ್ದಾರೆ. ಜತೆಗೆ ಏನೇ ಘಟಿಸಿದರೂ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಘೋಷಿಸಿ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00