84
ಬೇಳ (ಜು 18):
ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ಮಾಸಾಚರಣೆ ಸಮಾರೋಪ ಹಾಗೂ ಬಾಲಸಭೆ ಜರಗಿತು . ಕಾರ್ಯಕ್ರಮದದ
ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ ನಾರಾಯಣ ಪೆರಡಾಲ ಇವರು ಮಕ್ಕಳ ಹಸ್ತಪತ್ರಿಕೆ ಕಾನನ ವನ್ನು ಬಿಡುಗಡೆಗೊಳಿಸಿ ಮಾತನಾಡಿದರು .
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ವಿಷ್ಣು ಪ್ರಕಾಶ್ ಪೆರ್ವ ಅಧ್ಯಕ್ಷತೆ ವಹಿಸಿದರು.
ಮಾತೃಸಂಘದ ಅಧ್ಯಕ್ಷೆ ಪ್ರೀತಾ ಕಿಳಿಂಗಾರು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಹಾಗೂ ಅಧ್ಯಾಪಕ ಅಧ್ಯಾಪಿಕೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು . ವಾಚನಾ ಮಾಸಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು . ಶಾಲಾ
ವಿದ್ಯಾರ್ಥಿನಿ ಸಾನ್ವಿ ಸ್ವಾಗತಿಸಿ ಪ್ರತೀಕ್ಷಾ ವಂದಿಸಿದರು . ಕಾರ್ಯಕ್ರಮವನ್ನು ವೈಷ್ಣವ್ ಭಟ್ ಹಾಗೂ ವೈಶಾಲಿ ಕೆ ಯಂ ನಿರೂಪಿಸಿದರು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.




