151
ದುಬಾಯಿ(ಜು 6):
ಕೇರಳಾ ಲೋಕಲ್ ಗವರ್ನಮೆಂಟ್ ಮೆಂಬರ್ಸ್ ಲೀಗ್(ಎಲ್. ಜಿ. ಎಂ. ಎಲ್) ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಕಾಸರಗೋಡು ಬ್ಲಾಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಅವರನ್ನು ದುಬಾಯಿ ಕೆಎಂಸಿಸಿಯ ಮಂಜೇಶ್ವರ ಮಂಡಲ ಘಟಕದ ವತಿಯಿಂದ ದುಬಾಯಿಯಲ್ಲಿ ಆತ್ಮೀಯ ಸ್ವಾಗತ ನೀಡಿ ಗೌರವಿಸಲಾಯಿತು.
ದೇರಾದ ಅಲ್ ಬರಾಹ ಕೆಎಂಸಿಸಿ ಆಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಕೆಎಂಸಿಸಿ ಮಂಜೇಶ್ವರ ಮಂಡಲ ಘಟಕದ ಅಧ್ಯಕ್ಷ ಇಬ್ರಾಹಿಂ ಬೇರಿಕೆ ಅಧ್ಯಕ್ಷತೆ ವಹಿಸಿದರು. ಪ್ರ. ಕಾರ್ಯದರ್ಶಿ ಸೖಫುದ್ದೀನ್ ಮೊಗ್ರಾಲ್ ಪುತ್ತೂರು ಸ್ವಾಗತಿಸಿದರು. ಕಾಸರಗೋಡು ಜಿಲ್ಲಾ ಕೆಎಂಸಿಸಿ ಖಜಾಂಜಿ ಡಾ. ಇಸ್ಮಾಯಿಲ್ ಮೊಗ್ರಾಲ್ ಉದ್ಘಾಟಿಸಿದರು.






