ಚೆರ್ಕಳ-ಕಲ್ಲಡ್ಕ ರಸ್ತೆಯ ಚೆರ್ಕಳ ಪೇಟೆಯಲ್ಲಿ ರಸ್ತೆ ಕಾಮಗಾರಿ: ಇಂದಿನಿಂದ ಮೂರು ದಿನ ವಾಹನ ಸಂಚಾರ ನಿಯಂತ್ರಣ

by Narayan Chambaltimar

ಕಾಸರಗೋಡು( ಜೂನ್ 9)
ಕಿಫ್ ಬಿ ಯೋಜನೆಯಲ್ಲಿ ಅಳವಡಿಸಿ ನವೀಕರಣ ಕಾಮಗಾರಿ ಪುನರಾರಂಭಗೊಂಡಿರುವ ಚೆರ್ಕಳ-ಕಲ್ಲಡ್ಕ ರಸ್ತೆಯ ಚೆರ್ಕಳದಲ್ಲಿ ಇಂದಿನಿಂದ ರಸ್ತೆ ಸಂಚಾರ ನಿಯಂತ್ರಣ ಇರುವುದಾಗಿ ಪ್ರಕಟಿಸಲಾಗಿದೆ. ಚೆರ್ಕಳ ಪೇಟೆ ಪರಿಸರದಲ್ಲಿ ರಸ್ತೆಗೆ ತೇಪೆ ಹಾಕುವ ಕಾಮಗಾರಿ(Patching work) ನಡೆಯಲಿರುವುದರಿಂದ ಜೂನ್ 11ರ ತನಕ ಸಂಚಾರ ನಿಯಂತ್ರಣ ಹೇರಲಾಗಿದೆ.

ನಿಯಂತ್ರಣದ ಹಿನ್ನೆಲೆಯಲ್ಲಿ ಕಾಸರಗೋಡು ಕಡೆಯಿಂದ ಬರುವ ವಾಹನಗಳು ಚೆರ್ಕಳ ಹೊಸ ಬಸ್ ನಿಲ್ದಾಣ ದಾರಿಯಾಗಿ ಜಾಲ್ಸೂರು ರಸ್ತೆಗೋ, ಬದಿಯಡ್ಕ, ವಿಟ್ಲ ರಸ್ತೆಗೋ ಸಾಗಬೇಕು. ಬದಿಯಡ್ಕ, ಮುಳ್ಳೇರಿಯ ಭಾಗದಿಂದ ಬರುವ ಬಸ್ ಸಹಿತ ವಾಹನಗಳು ಚೆರ್ಕಳ ಹೊಸ ನಿಲ್ದಾಣ ದಾರಿಯಾಗಿ ಚೆರ್ಕಳ ಪೇಟೆ ಪ್ರವೇಶಿಸಿ ಸಾಗಬೇಕೆಂದು ಕೇರಳ ರೋಡ್ ಫಂಡ್ ಬೋರ್ಡ್ (KRFB -PMU) ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00