ಖೈದಿಗಳ ಹೆಚ್ಚಳ, ಸೌಕರ್ಯದ ಇತಿಮಿತಿ: ಕೇರಳದಲ್ಲಿ ಇನ್ನೊಂದು ನೂತನ ಸೆಂಟ್ರಲ್ ಜೈಲು ಸ್ಥಾಪಿಸಲು ಪರಿಗಣನೆ

by Narayan Chambaltimar
  • ಜೈಲುಗಳನ್ನು ನವೀಕರಿಸಿ ಖೈದಿಗಳ ಸನ್ನಡತೆಯ ಮನಪರಿವರ್ತನೆಗೆ ಯೋಜನೆ: ಗೃಹ ಸಚಿವ ಚೆನ್ನಿತ್ತಲ

ತಿರುವನಂತಪುರ ( ಜೂನ್ 09):
ಕೇರಳ ರಾಜ್ಯದಲ್ಲಿ ಬದಲಾದ ಕಾಲಕ್ಕನುಸಾರ ಅಪರಾಧ ಪ್ರವೃತ್ತಿಗಳು ಉಲ್ಬಣಗೊಂಡು, ಅಪರಾಧ ಸಾಬೀತಾಗಿ ಜೈಲು ಸೇರುವ ಖೖದಿಗಳ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನೂತನವಾಗಿ ಒಂದು ಸೆಂಟ್ರಲ್ ಜೖಲು ಹೆಚ್ಚುವರಿ ಸ್ಥಾಪಿಸಬೇಕಾದ ಅನಿವಾರ್ಯತೆ ಇದೆ ಎಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ಘೋಷಿಸಿದರು.
ಉಳ್ಳ ಸೆಂಟ್ರಲ್ ಜೖಲುಗಳಲ್ಲಿ ಖೖದಿಗಳ ಸಂಖ್ಯೆ ಹೆಚ್ಚಾಗಿ, ಸೀಮಿತ ಸೌಲಭ್ಯಗಳಷ್ಟೇ ಇವೆ. ಜತೆಗೆ ಸಿಬಂದಿ ಕೊರತೆಯೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಂಟ್ರಲ್ ಜೖಲೊಂದನ್ನು ತೆರೆಯುವುದಲ್ಲದೇ ಸಿಬ್ಬಂದಿಗಳ ಹೆಚ್ಚಳಕ್ಕೆ ಪರಿಗಣಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು.

ರಾಜ್ಯದ ಉನ್ನತ ಪೊಲೀಸಧಿಕಾರಿಗಳು ಮತ್ತು ಜೖಲು ಅಧಿಕಾರಿಗಳೊಂದಿಗೆ ಈ ವಿಷಯದಲ್ಲಿ ಚರ್ಚಿಸಿದ ಗೃಹ ಸಚಿವರು ರಾಜ್ಯದ ಜೖಲುಗಳ ನೀತಿ, ನಿರ್ವಹಣೆಯಲ್ಲಿ ಸಮಗ್ರ ಪರಿಷ್ಕರಣೆ ಮಾಡಲಾಗುವುದೆಂದು ತಿಳಿಸಿದರು.
ಜೈಲು ಎಂದರೆ ಖೖದಿಗಳ ಪಾಲಿಗೆ ಶಿಕ್ಷಾವಧಿ ವಾಸ ತಾಣವಾದರೂ ಅದು ಅವರ ಅಪರಾಧ ಪ್ರವೃತ್ತಿಯ ಚಿಂತನೆಗಳನ್ನು ನೀಗಿಸಿ, ತಪ್ಪು ತಿದ್ದುಕೊಂಡು ಸನ್ನಡತೆಯ ಬದುಕಿಗೆ ಪ್ರಚೋದನೆಯಾಗುವ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಜೈಲುಗಳನ್ನು ಪರಿಷ್ಕರಿಸಿ ನವೀಕರಿಸಬೇಕಾಗಿದೆ. ಜತೆಗೆ ಎಲ್ಲಾ ಜೈಲುಗಳನ್ನು ಆಧುನಿಕ ಸೌಲಭ್ಯಗಳಿಂದ ಉನ್ನತೀಕರಿಸಿ, ವೀಡಿಯೋ ಕಾನ್ಫೆರೆನ್ಸ್ ಸೌಲಭ್ಯ ಒದಗಿಸಲು ಪರಿಗಣಿಸಿರುವುದಾಗಿ ತಿಳಿಸಿದರು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00