- ನಾಗರಿಕ ಬವಣೆಯ
ನ್ಯಾಯೋಚಿತ ಜನಪರ ಹೋರಾಟದಲ್ಲಿ ತಾನೂ ಮುಂಚೂಣಿಯಲ್ಲಿರುವೆ -ಶಾಸಕರ ಭರವಸೆ
ಕುಂಬಳೆ(ಜೂನ್ 9):.
ಅನಂತಪುರ ಕೖಗಾರಿಕಾ ಪ್ರಾಂಗಣದಲ್ಲಿ ಕಾರ್ಯಾಚರಿಸುವ
ಖಾಸಗಿ ತೖಲ ಕಂಪನಿಯಿಂದ ಗಂಭೀರವಾದ ಪರಿಸರ ಮಲಿನೀಕರಣ ಮತ್ತು ತೀವ್ರ ದುರ್ಗಂಧಗಳಿಂದಾಗಿ ಇಡೀ ಪರಿಸರದ ಸ್ವಸ್ಥ ಜನಜೀವನಕ್ಕೆ ಆತಂಕಕಾರಿ ಸಮಸ್ಯೆಗಳುಂಟಾಗಿರುವುದು ಗಂಭೀರ ವಿಷಯವಾಗಿದ್ದು, ಕೖಗಾರಿಕಾ ಸಂಸ್ಥೆಗಳನ್ನು ಅಧಿಕಾರಿಗಳು ಪರಿಶೋಧಿಸಿ ಕಠಿಣ ಕಾನೂನು ಕ್ರಮ ಕೖಗೊಳ್ಳಲು ಮುಂದಾಗಬೇಕೆಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಒತ್ತಾಯಿಸಿದರು
ಸೇವ್ ಅನಂತಪುರ ಎಂಬ ಶೀರ್ಷಿಕೆಯಲ್ಲಿ ಅನಂತಪುರವನ್ನು ಪರಿಸರ ಮಲಿನೀಕರಣಗಳಿಂದ ಕಾಪಾಡಿ ಎಂಬ ಬೇಡಿಕೆಯೊಂದಿಗೆ ನಾಗರಿಕ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಿನ್ನೆ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಶಾಸಕರು ಜನತಾ ಸತ್ಯಾಗ್ರಹಕ್ಕೆ ಪೂರ್ಣ ಬೆಂಬಲ ಘೋಷಿಸಿದರಲ್ಲದೇ, ನ್ಯಾಯಯುತವಾದ ಜನಪರ ಕಾಳಜಿಯ, ಪಾರಿಸರಿಕ ದೃಷ್ಟಿಯ ಈ ಜನಾಂದೋಲನದಲ್ಲಿ ನಿಮ್ಮೆಲ್ಲರ ಜತೆ ನಾನೂ ಮುಂಚೂಣಿಯಲ್ಲಿರುವೆ ಎಂದು ಘೋಷಿಸಿದರು.

ಕೖಗಾರಿಕೆಗಳು ನಾಡಿನ ಅಭಿವೃದ್ಧಿಗೆ ಅಗತ್ಯ. ಆದರದು ಊರ ನೆಮ್ಮದಿ ಕೆಡಿಸಿ, ಜನತೆಯ ಆರೋಗ್ಯ ಮತ್ತು ಬದುಕಿಗೆ ಆತಂಕ ಮೂಡಿಸಬಾರದು. ಈ ಕಾರ್ಖಾನೆ ಉಗುಳುವ ಮಾರಕ ಹೊಗೆ, ದುರ್ಗಂಧ ಸೇವಿಸಿ ಪರಿಸರ ವಾಸಿಗಳಾದ ಮಕ್ಕಳ, ವಯೋವೃದ್ಧರ ಆರೋಗ್ಯ ಸುರಕ್ಷತೆಗೆ ಖಾಯಿಲೆಗಳ ಭೀತಿ ಉಂಟಾಗಿದೆ. ನಾಗರಿಕ ಬದುಕಿನ ಸ್ವಸ್ಥತೆಯನ್ನು ಹಾನಿಕಾರಕವಾಗಿ ಕಾಡುವ ಸಂಸ್ಥೆಗಳನ್ನು ಪರಿಶೋಧಿಸಿ ಕಾನೂನು ಕ್ರಮ ಕೖಗೊಳ್ಳಬೇಕು. ಜಿಲ್ಲಾ ಕೖಗಾರಿಕಾ ಇಲಾಖೆ ತಕ್ಷಣ ಕಾರ್ಯದಕ್ಷತೆಯಿಂದ ವಿಷಯದಲ್ಲಿ ಹಸ್ತಕ್ಷೇಪ ನಡೆಸಬೇಕೆಂದು ಶಾಸಕರು ಒತ್ತಾಯಿಸಿದರು.
ನಾಗರಿಕರ ಆರೋಗ್ಯದ ಮತ್ತು ಪರಿಸರದ ಸುರಕ್ಷೆಯನ್ನು ಖಚಿತ ಪಡಿಸುವ ತನಕ ಈ ಹೋರಾಟದಲ್ಲಿ ತಾನು ಮುಂಚೂಣಿಯಲ್ಲಿ ನಿಲ್ಲುವೆ ಎಂದು ಶಾಸಕರು ಘೋಷಿಸಿದರು. ಕಳೆದ ವಾರ ಜರುಗಿದ ಕಾಸರಗೋಡು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅನಂತಪುರ ಕೖಗಾರಿಕಾ ಮಾಲಿನ್ಯ ಸಮಸ್ಯೆಯನ್ನು ತಾನು ಉಲ್ಲೇಖಿಸಿದ್ದೇನೆಂದು ತಿಳಿಸಿದ ಅವರು ಈ ಸಮಸ್ಯೆಯ ಕುರಿತು ಅಧಿಕೃತರಿಂದ ಔದ್ಯೋಗಿಕ ಹಸ್ತಕ್ಷೇಪ ಉಂಟಾಗುವುದು ಖಚಿತ ಎಂಬ ಭರವಸೆ ಇತ್ತರು.
ಸೇವ್ ಅನಂತಪುರ ಪ್ರತಿಭಟನೆಯಲ್ಲಿ ಪಕ್ಷ ಬೇಧವಿಲ್ಲದೇ ನಾಡಿನ ನಾನಾ ಕಡೆಯ ಮಂದಿ ನೆರೆದಿದ್ದರು.





