- ರದ್ದು ಗೊಂಡ ಟೋಲ್ ಗೇಟ್ ತೆರವುಗೊಳಿಸಲು ಜಿಲ್ಲಾಡಳಿತ ಸಭೆಯಲ್ಲಿ ಶಾಸಕರ ಒತ್ತಾಯ
ಕುಂಬಳೆ (ಜೂನ್ 8):
ರಾ. ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯ ಟೋಲ್ ಪ್ಲಾಝ ನಾಗರಿಕ ಪ್ರತಿಭಟನೆಗೆ ಮಣಿದು ರದ್ದುಗೊಂಡರೂ, ಸ್ಥಾಪಿಸಿದ ಟೋಲ್ ಪ್ಲಾಝಾ ತೆರವುಗೊಳಿಸದೇ ಇರುವುದು ನಿರಂತರ ವಾಹನ ಅಪಘಾತ ಮತ್ತು ವಾಹನ ಹಾನಿಗೆ ಕಾರಣವಾಗುತ್ತಿದೆ.
ಟೋಲ್ ಗೇಟಿನಲ್ಲಿ ಲಾರಿಯೊಂದಕ್ಕೆ ಗೇಟಿನ ಕಾಂಕ್ರೀಟ್ ಗಟ್ಟಿ ಬಡಿದು ವಾಹನಕ್ಕೆ ಹಾನಿಯಾಗಿದೆ. ಇತ್ತೀಚಿಗೆ ಕೆಲವು ವಾಹನಗಳಿಗೆ ಟೋಲ್ ಗೇಟಿನಲ್ಲಿ ಸಿಮೆಂಟ್ ಗಟ್ಟಿಗಳು ಬಡಿದ ಘಟನೆಗಳು ನಡೆದಿವೆ.
ಮುಂಬಯಿಯಿಂದ ಸರಕು ಹೇರಿ ಕೇರಳದ ಕೊಚ್ಚಿಗೆ ತೆರಳುತ್ತಿದ್ದ ಲಾರಿಗೆ ಟೋಲ್ ಗೇಟಿನಲ್ಲಿ ಸಿಮೆಂಟ್ ಗಟ್ಟಿಗಳು ಬಡಿದು ಅಪಘಾತ ಸಂಭವಿಸಿತು. ಲಾರಿಯ ಮುಂಭಾಗದ ಒಂದು ಪಾರ್ಶ್ವ ಸಂಪೂರ್ಣ ಹಾನಿಗೀಡಾಗಿದೆ.
ನಿನ್ನೆ ಮಧ್ಯಾಹ್ನ ಘಟನೆ ನಡೆದಿದ್ದು, ಟೋಲ್ ಪ್ಲಾಝದ. ಮಧ್ಯಭಾಗದಲ್ಲಿ ಬಳಿಕ ಸಂಚಾರ ನಿಷೇಧಿಸಲಾಗಿತ್ತು.
ಔದ್ಯೋಗಿಕವಾಗಿ ಟೋಲ್ ಗೇಟ್ ರದ್ದುಗೊಂಡರೂ ಕುಂಬಳೆ ಟೋಲ್ ಪ್ಲಾಝ ತೆರವುಗೊಳಿಸದೇ ಇರುವುದು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಕೂಡಲೇ ಟೋಲ್ ಗೇಟ್ ತೆರವುಗೊಳಿಸಬೇಕೆಂದು ಶಾಸಕ ಎಕೆಎಂ ಅಶ್ರಫ್ ಅವರು ಜಿಲ್ಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳನ್ನು ವಿನಂತಿಸಿದ್ದರು. ಈ ಕುರಿತು ರಾ. ಹೆದ್ದಾರಿ ಪ್ರಾಧಿಕಾರಕ್ಕೆ ತಿಳಿಸಲಾಗುವುದೆಂದು ಜಿಲ್ಲಾಧಿಕಾರಿ ಭರವಸೆ ಇತ್ತಿದ್ದರು.




