ಚೆನ್ನೖ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ಜನಪ್ರಿಯ ನಟ ಜೋಸೆಫ್ ವಿಜಯ್ ಚಂದ್ರಶೇಖರ್
ಅವರು ತಮಿಳು ನಾಡಿನ
ನೂತನ ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಿದರು. ಚೆನ್ನೖ ನೆಹರೂ ಸ್ಟೇಡಿಯಂನಲ್ಲಿ ಇಂದು ಬೆಳಿಗ್ಗೆ ಐತಿಹಾಸಿಕ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು. ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಮುಖ್ಯಮಂತ್ರಿ ಪದವಿಯ ಜತೆ ಗೃಹಖಾತೆಯನ್ನು ಕೂಡಾ ವಿಜಯ್ ನಿಭಾಯಿಸಲಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಉಪಸ್ಥಿತರಿದ್ದರು.
ಎಂ. ಜಿ. ಆರ್ ಬಳಿಕ ತಮಿಳುನಾಡಿನ ಮುಖ್ಯಮಂತ್ರಿ ಪದವಿಗೇರುವ ನಟ ವಿಜಯ್ ಪ್ರಮಾಣವಚನಕ್ಕೆ ಗೆಳತಿ, ನಟಿ ತೃಷಾ ಉಪಸ್ಥಿತರಿದ್ದರು. 1967ರ ಬಳಿಕ ತಮಿಳುನಾಡಲ್ಲಿ ದ್ರಾವಿಡ ಪಕ್ಷಗಳಾದ ಡಿಎಂಕೆ, ಎಐಡಿಎಂಕೆ ಅಲ್ಲದೇ ಮತ್ತೊಂದು ಪಕ್ಷ ಅಧಿಕಾರಕ್ಕೇರುವುದು ಇದೇ ಮೊದಲು. ಅಲ್ಲದೇ ಪ್ರಪ್ರಥಮ ಶಾಸಕನಾಗಿ ನೇರ ಮುಖ್ಯಮಂತ್ರಿ ಹುದ್ದೆಗೇರುವ ಮೊದಲಿಗನೆಂಬ ವಿಶೇಷತೆಯೂ ವಿಜಯ್ ಪಾಲಿನದ್ದಾಗಿದೆ.








