ಎಡನೀರು ಮಠಕ್ಕೆ ಶೃಂಗೇರಿ ಜಗದ್ಗುರುಗಳ ಆಗಮನ: ರಾಜೋಚಿತ ಗೌರವಗಳ ಪೂರ್ಣಕುಂಭ ಸ್ವಾಗತ

by Narayan Chambaltimar
  • ಮೇ 11ರಂದು ಕೇರಳದ ಪ್ರಥಮ ಶಂಕರ ಭಗವತ್ಪಾದರ ಪಂಚಲೋಹ ಪ್ರತಿಮೆ ಶೃಂಗೇರಿ ಜಗದ್ಗುರುಗಳಿಂದ ನಾಡಿಗೆ ಸಮರ್ಪಣೆ

[10:58 pm, 10/5/2026] M Narayana: ಎಡನೀರು: ಕೇರಳ ಪ್ರವಾಸದಲ್ಲಿರುವ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು ಆದಿತ್ಯವಾರ ಸಂಜೆ ಶ್ರೀಮದೆಡನೀರು ಮಠಕ್ಕೆ ಆಗಮಿಸಿದರು. ಅವರಿಗೆ ಶ್ರೀಮಠದ ವತಿಯಿಂದ ರಾಜೋಚಿತ ವೇದಮಂತ್ರಘೋಷಗಳ ಋತ್ವಿಜ ಗೌರವಗಳೊಂದಿಗೆ
ಶ್ರೀಮಠದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಶ್ರೀ ಮಠದ ವತಿಯಿಂದ ಜಗದ್ಗುರುಗಳ ಪಾದಪೂಜೆ ನಡೆಯಿತು. ಅನಂತರ ಶೃಂಗೇರಿ ಪೀಠಾಧೀಶ್ವರರು ಚಂದ್ರಮೌಳಿ ಪೂಜೆ ನಡೆಸಿ ಭಕ್ತರನ್ನು ಹರಸಿ ಪ್ರಸಾದವಿತ್ತರು.

ಇದೇವೇಳೆ ಕೇರಳದಲ್ಲೇ ಮೊದಲಬಾರಿ ಸ್ಥಾಪನೆಯಾಗಿ ಮೇ 11 ಸೋಮವಾರ ಅನಾವರಣಗೊಳ್ಳಲಿರುವ ಕಾಸರಗೋಡಿನ ಅತ್ಯಪರೂಪದ ಶಂಕರ ಭಗವದ್ಪಾತರ ಪಂಚಲೋಹ ಪ್ರತಿಮೆಗೆ ವಾಸ್ತು ಪೂಜೆ ನಡೆದು, ಶಿಲ್ಪಿ ಮತ್ತು ದಾನಿಗಳಿಂದ ಪ್ರತಿಮೆ ಮಠಕ್ಕೆ ಹಸ್ತಾಂತರವಾಯಿತು.


ಶ್ರೀಶಂಕರಾಚಾರ್ಯ ಶಿಷ್ಯ ತೋಟಕಾಚಾರ್ಯ ಸ್ಥಾಪಿತ ಶ್ರೀಮದೆಡನೀರು ಮಠದಲ್ಲಿ ಸ್ಥಾಪನೆಯಾಗಲಿರುವ ಆಚಾರ್ಯ ವರೇಣ್ಯ ಶ್ರೀಆದಿ ಶಂಕರಾಚಾರ್ಯರ ಪಂಚಲೋಹ ಶೋಭಿತ ಪ್ರತಿಮೆ ಕಂಚಿನ ಶಿಲ್ಪಗ್ರಾಮವಾದ ಪಯ್ಯನ್ನೂರಿನ ಕುಂಞಿಮಂಗಲದಲ್ಲಿ ಸಿದ್ಧವಾಗಿದ್ದು, ಮೂರೂವರೆ
ಅಡಿ ಎತ್ತರದ ಪ್ರತಿಮೆ ಸಹಿತ ಪ್ರತಿಮಾ ಮಂಟಪವನ್ನು ಶ್ರೀ ಎಡನೀರು ಮಠಕ್ಕೆ ರಾಜೀವನ್ ಅಗಸ್ತ್ಯಮಲ ಅವರ ಮೇಲುಸ್ತುವಾರಿಯಲ್ಲಿ ಮಲಪ್ಪುರಂ ಜಿಲ್ಲೆಯ ಸಾಂದೀಪನೀ ಸಾದನಾಲಯ ಚಾರಿಟೇಬಲ್ ಟ್ರಸ್ಟ್ ಆಶ್ರಯದ ನೂರಕ್ಕೂ ಅಧಿಕ ದೇವಸ್ಥಾನಗಳ ವತಿಯಿಂದ ಸಮರ್ಪಿಸಲಾಗಿದೆ. ಅದನ್ನು ವಾಸ್ತೂಹೋಮದೊಂದಿಗೆ ಮಠಕ್ಕೆ ಸಮರ್ಪಿಸುವ ಕಾರ್ಯಕ್ರಮ ಆದಿತ್ಯವಾರ ಸಂಜೆ ನಡೆಯಿತು.
ಮಠದಲ್ಲಿ ನೂತನವಾಗಿ ಸ್ಥಾಪಿಸಲಾದ
ಶಿಲಾಮಯ ಮಂಟಪದಲ್ಲಿ ಮೇ11ರಂದು ಬೆಳಿಗ್ಗೆ 9.30ಕ್ಕೆ
ಶೃಂಗೇರಿ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳವರು ಶಂಕರ ಭಗವತ್ಪಾದರ ಪ್ರತಿಮೆ ಅನಾವರಣಗೖದು ನಾಡಿಗೆ ಲೋಕಾರ್ಪಣೆ ಮಾಡುವರು.
ಇದರ ಪೂರ್ವಭಾವಿ ಕಾರ್ಯಕ್ರಮಗಳು ಆದಿತ್ಯವಾರ ನಡೆಯಿತು.

ಎಡನೀರು ಮಠ ಆದಿ ಶಂಕರಾಚಾರ್ಯರ ನೇರ ಶಿಷ್ಯ ಪರಂಪರೆಗೆ ಸೇರಿದ ಮಠ. ಇದು ದ್ವೆತಾದ್ವೖತ ಆಚಾರ ಪಾಲಿಸುವ ಶಂಕರ ತತ್ವದ ಮಠ. ಇಲ್ಲಿ ಶ್ರೀ ಶಂಕರಾಚಾರ್ಯರ ಪ್ರತಿಮೆ ಅನಾವರಣ ಬ್ರಹ್ಮೖಕ್ಯ ಕೇಶವಾನಂದ ಭಾರತೀ ಶ್ರೀಗಳ ಬಯಕೆಯಾಗಿತ್ತು. ಪ್ರಸ್ತುತ ಅವರಿಲ್ಲದ ಬಳಿಕ ಆ ಕನಸು ನನಸಾಗುವುದು ನಮ್ಮ ಪಾಲಿಗೆ ಸಾರ್ಥ್ಯಕ್ಯದ ಸಂಭ್ರಮ. ಶಂಕರ ತತ್ವ ಲೋಕದೆಲ್ಲಡೆ ಪಸರಿಸಬೇಕೆಂಬುದೇ ನಮ್ಮ ಬಯಕೆ. ಆದ್ದರಿಂದ ಇದು ಕೇವಲ ಪ್ರತಿಮೆ ಸ್ಥಾಪನೆಯಲ್ಲ, ತಾತ್ವಿಕ ಆರಾಧನೆ, ಆಚರಣೆಯ ಪಯಣ. ಶಂಕರಾಚಾರ್ಯ ಪ್ರತಿಮೆಯ ಬಳಿಯಲ್ಲೇ ಇನ್ನೊಂದು ಮಂಟಪದಲ್ಲಿ ಮಹಾಗಣಪತಿಯ ಪ್ರತಿಮೆ ಶೀಘ್ರ ಅನಾವರಣವಾಗಲಿದೆ. ಅರ್ಥಾತ್ ಎಡನೀರು ಮಠದಲ್ಲಿ ಗುರು- ಗಣಪತಿ ಒಂದೆಡೆ ನೆಲೆಸುತ್ತಾರೆ.
– ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ, ಶ್ರೀಮದ್ ಎಡನೀರು ಮಠ

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00