ಅತೃಪ್ತಿ ಪ್ರಕಟಿಸಿದ ವಿ. ಡಿ. ಸತೀಶನ್, ಮುಖ್ಯಮಂತ್ರಿ ಸ್ಥಾನ ಇಲ್ಲದಿದ್ದರೆ ಸಚಿವ ಸಂಪುಟಕ್ಕೆ ತಾನಿಲ್ಲ ಎಂದ ಸತೀಶನ್
ದೆಹಲಿ: ಸತತ ಚರ್ಚೆ ಮತ್ತು ಕಾಂಗ್ರೆಸ್ ನಲ್ಲಿ ಮತ್ತೆ ಗುಂಪುಗಾರಿಕೆಗೆ ದಾರಿ ತೆರೆದುಕೊಡುವ ಮೂಲಕ ಕೇರಳದ ನೂತನ ಮುಖ್ಯಮಂತ್ರಿಯಾಗಿ ಕೆ. ಸಿ. ವೇಣುಗೋಪಾಲ್ ಅವರನ್ನು ಹೖಕಮಾಂಡ್ ಪರಿಗಣಿಸಿ ನಿರ್ದೇಶಿಸಿದೆ.
ದೆಹಲಿಯಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ನಡೆದ ಮ್ಯಾರಥಾನ್ ಚರ್ಚೆಯ ಬಳಿಕ ಹೖಕಮಾಂಡ್ ಈ ನಿರ್ಧಾರ ತಳೆದಿದೆ.
ಇದೇ ವೇಳೆ ಮುಖ್ಯಮಂತ್ರಿ ಸ್ಥಾನದ ಗೌರವ ದೊರೆಯದಿದ್ದರೆ ತಾನು ಸಚಿವ ಸಂಪುಟಕ್ಕಿಲ್ಲವೆಂದು ತಿಳಿಸಿ ವಿ. ಡಿ. ಸತೀಶನ್ ತಿಳಿಸಿದ್ದಾರೆ. ಈ ಮೂಲಕ ಅನಿಶ್ಚತತೆ ಮುಂದುವರಿದಿದೆ. ವಿವಾದ ಇತ್ಯರ್ಥವಾಗದೇ ಇದ್ದರೆ ಸೋನಿಯಾ ಗಾಂಧಿ ಸಮ್ಮುಖ ನಿರ್ಧಾರ ಕೖಗೊಳ್ಳುವ ಸೂಚನೆಗಳಿವೆ. ಮುಖ್ಯಮಂತ್ರಿ ಸ್ಥಾನವಲ್ಲದಿದ್ದರೆ ಸಚಿವ ಸಂಪುಟಕ್ಕಿಲ್ಲ ಎಂಬುದಷ್ಟೇ ಅಲ್ಲದೇ ಪರವೂರು ಕ್ಷೇತ್ರಕ್ಕೆ ರಾಜೀನಾಮೆ ನೀಡುವ ಸೂಚನೆಯನ್ನೂ ಸತೀಶನ್ ತಿಳಿಸಿದ್ದಾರೆಂದು ವರದಿಯಾಗಿದೆ.

ಕೇರಳದ ಶಾಸಕರಿಂದ ಮತ್ತು ಘಟಕಪಕ್ಷಗಳಿಂದ ಅಭಿಪ್ರಾಯ ಸ್ವೀಕರಿಸಿಕೊಂಡ ಕೇಂದ್ರ ನಿರೀಕ್ಷಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಅವರಿಗೆ ವರದಿ ಸಲ್ಲಿಸಿತ್ತು. ವರದಿಯ ಹಿನ್ನೆಲೆಯಲ್ಲಿ ಕೇರಳದ ಸಿಎಂ ಗಾದಿಯ ಆಕಾಂಕ್ಷಿಗಳಾದ ರಮೇಶ್ ಚೆನ್ನಿತಲ, ಕೆಸಿ ವೇಣುಗೋಪಾಲ್ ಹಾಗೂ ವಿ. ಡಿ. ಸತೀಶನ್ ಅವರನ್ನಿಂದು ದೆಹಲಿಗೆ ಕರೆಸಿ ತಾಸುಗಳ ಕಾಲ ಹೖಕಮಾಂಡ್ ಮಾತುಕತೆ ನಡೆಸಿತ್ತು. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತಿಯಲ್ಲಿ ಮಾತುಕತೆ ನಡೆದಿತ್ತು.







