448
ಮಂಜೇಶ್ವರ: ಮಹಿಳೆ ಮತ್ತು ಆಕೆಯ ಗೆಳೆಯನನ್ನು ಹೊಸಂಗಡಿಯ ಲಾಡ್ಜೊಂದರಲ್ಲಿ ಬೆತ್ತಲೆಯಾಗಿ ನಿಲ್ಲಿಸಿ ಫೋಟೋ ತೆಗೆದು ಬಳಿಕ ಎರಡು ಲಕ್ಷ ರೂ ಅಪಹರಿಸಲು ಯತ್ನಿಸಿದ ಘಟನೆಯ ಸೂತ್ರದಾರನನ್ನು ಬಂಧಿಸಲಾಗಿದೆ. ಕುಂಜತ್ತೂರು ನಿವಾಸಿ ಪಿ. ಎಂ. ಅಬೂಬಕರ್ (40) ಬಂಧಿತ ವ್ಯಕ್ತಿಯಾಗಿದ್ದಾನೆ. ಪ್ರಕರಣದ ಐದನೇ ಆರೋಪಿಯಾದ ಈತನನ್ನು ಮಂಗಳೂರಿನಿಂದ ಸೆರೆ ಹಿಡಿಯಲಾಯಿತೆಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
2026 ಜನವರಿ 12 ರಂದು ಮಧ್ಯಾಹ್ನ ಹೊಸಂಗಡಿ ಪೇಟೆಯ ಲಾಡ್ಜೊಂದರಲ್ಲಿ ಘಟನೆ ನಡೆದಿತ್ತು. ಉಳ್ಳಾಲ ಠಾಣಾ ವ್ಯಾಪ್ತಿಯ ಮಹಿಳೆ ಹಾಗೂ ಆಕೆಯ ಗೆಳೆಯ ಲಾಡ್ಜಿನಲ್ಲಿ ಕೊಠಡಿ ಪಡೆದಿದ್ದರು. ಅಲ್ಲಿಗೆ ಅತಿಕ್ರಮಿಸಿ ಬಂದ ತಂಡ ಇಬ್ಬರನ್ನೂ ಬೆತ್ತಲಾಗಿಸಿ ಫೋಟೋ, ವೀಡಿಯೋ ತೆಗೆದು ಹಣಕ್ಕಾಗಿ ಬೆದರಿಸಿದ್ದರು. ಅಲ್ಲದೇ ಕೖ ವಶವಿದ್ದ ಐದು ಸಾವಿರ ರೂ, ಮೊಬೖಲ್ ಫೋನ್ ಅಪಹರಿಸಿದ್ದರು. ಪ್ರಕರಣದ ಆರೋಪಿಗಳನ್ನು ಈ ಹಿಂದೆಯೇ ಬಂಧಿಸಲಾಗಿತ್ತು.








