291
ಪುತ್ತೂರು: ಕಡಬ ತಾಲೂಕಿನ ಗುಂಡ್ಯ ಹೊಳೆಯ ಕೊಲ್ಯದಕಟ್ಟ ಡ್ಯಾಂ ಬಳಿ ಸ್ನಾನಕ್ಕಿಳಿದ ಇಬ್ಬರು ವಿದ್ಯಾರ್ಥಿನಿಯರು ನೀರು ಪಾಲಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತ ವಿದ್ಯಾರ್ಥಿನಿಯರನ್ನು ಕುಟ್ರುಪಾಡಿ ಗ್ರಾಮದ ವಿಮಲಗಿರಿ ನಿವಾಸಿಗಳಾದ ಅರ್ಪಿತ (15) ಹಾಗೂ ಸುನೀತಾ(21) ಎಂದು ಗುರುತಿಸಲಾಗಿದೆ.
ರಜೆ ಇರುವುದರಿಂದ ಸ್ನೇಹಿತರ ತಂಡದೊಂದಿಗೆ ನದಿ ಸ್ನಾನಕ್ಕೆ ಆಗಮಿಸಿದ್ದ ಐವರು ವಿದ್ಯಾರ್ಥಿನಿಯರು ಒಟ್ಟಾಗಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ನೀರಿನಾಳ ಅರಿಯದೇ ಇಬ್ಬರು ಮುಳುಗಿದರು. ರಕ್ಷಿಸಲು ಯಾರೂ ಇಲ್ಲದೇ ಇವರಿಬ್ಬರು ಮೃತಪಟ್ಟರು ಎನ್ನಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳೀಯ ನಾಗರಿಕ ಸಹಾಯದಿಂದ ಮೃತದೇಳ ಮೇಲಕ್ಕೆ ತಂದರು.








