ಕೇರಳ ಕೆಎಸ್ಸಾರ್ಟೀಸಿ ಬಸ್ ನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಸಿದ್ಧತೆ ಆರಂಭ: ಮೇ 9ರಿಂದ ಬಸ್ಸಿನಲ್ಲಿ ಜೆಂಡರ್ ಟಿಕೆಟಿಂಗ್

by Narayan Chambaltimar

ತಿರುವನಂತಪುರ: ಚುನಾವಣೆಗೆ ಮುನ್ನ ಯುಡಿಎಫ್ ನೀಡಿದ ಪಂಚ ಭರವಸೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಕೆಎಸ್ಸಾರ್ಟೀಸಿ ಪ್ರಯಾಣ ಸೌಲಭ್ಯ ಒದಗಿಸುವುದರ ಪೂರ್ವಭಾವಿ ಸಿದ್ಧತೆ ಆರಂಭಗೊಂಡಿದೆ. ನೂತನ ಮುಖ್ಯಮಂತ್ರಿ ಸಹಿತ ಸಚಿವ ಸಂಪುಟದ ಪ್ರಮಾಣ ವಚನ ನಡೆಯುವ ಮುನ್ನವೇ ನೀಡಿದ ಭರವಸೆಯನ್ನು ಸಾಕ್ಷಾತ್ಕಾರಗೊಳಿಸಲು ಸಾರಿಗೆ ಇಲಾಖೆಯಲ್ಲೇ ಸಿದ್ಧತೆ ನಡೆದಿರುವುದು ಅಚ್ಚರಿ ಮೂಡಿಸಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಯೋಜನೆಯಂಗವಾಗಿ ಮೊದಲ ಹಂತದಲ್ಲಿ ಕೆಎಸ್ಆರ್ಟಿಸಿ ಯಲ್ಲಿ ಜೆಂಡರ್ ಟಿಕೆಟಿಂಗ್ ವ್ಯವಸ್ಥೆಗೆ ಇಲಾಖೆ ಮುಂದಾಗಿದೆ.

ಏನಿದು ಜೆಂಡರ್ ಟಿಕೆಟಿಂಗ್?
ಕೆಎಸ್ಸಾರ್ಟೀಸಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸರಾಸರಿ ಸಂಖ್ಯೆ ಮತ್ತು ಮಹಿಳೆಯರೆಷ್ಟು, ಪುರುಷರೆಷ್ಟು ಎಂದು ವರ್ಗೀಕರಿಸುವುದೇ ಜೆಂಡರ್ ಟಿಕೆಟಿಂಗ್. ಇದರಂತೆ ಮೇ 9 ರಿಂದ ಬಸ್ ಟಿಕೆಟಿನಲ್ಲಿ ಪ್ರಯಾಣಿಕ ಸ್ತ್ರೀಯೋ, ಪುರುಷನೋ ಎಂದು ನಮೂದಿಸಲ್ಪಡುತ್ತದೆ. ಒಟ್ಟು ಮಹಿಳೆಯರ ಪ್ರಯಾಣದ ಅಂಕಿ ಅಂಶ ಪಡೆಯುವುದು ಇದರ ಉದ್ದೇಶವಾಗಿದೆ. ಯುಡಿಎಫ್ ಸರಕಾರ ಅಧಿಕಾರಕ್ಕೇರಿದರೆ ಕೆಎಸ್ಸಾರ್ಟೀಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಭರವಸೆ ನೀಡಲಾಗಿತ್ತು. ಆದನ್ನು ಜ್ಯಾರಿಗೊಳಿಸುವ ನಿಟ್ಟಿನಲ್ಲಿ ಜೆಂಡರ್ ಟಿಕೆಟಿಂಗ್ ಎನ್ನಲಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00