ಕೇರಳದ ನೂತನ ಸಿಎಂ ಯಾರು..? ಹೖಕಮಾಂಡ್ ಘೋಷಣೆಯಷ್ಟೇ ಬಾಕಿ

by Narayan Chambaltimar
  • ವಿಪಕ್ಷ ನಾಯಕ ವಿ. ಡಿ. ಸತೀಶನ್ ಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿ ದೇಹಕ್ಕೆ ಪೆಟ್ರೋಲ್ ಸುರಿದು ಕಾಂಗೖ ಕಾರ್ಯಕರ್ತನ ಆತ್ಮಹತ್ಯೆ ಯತ್ನ

ದೆಹಲಿ: ಕೇರಳದ ನೂತನ ಮುಖ್ಯಮಂತ್ರಿ ಯಾರೆಂಬ ಕೌತುಕಕ್ಕೆ ಶೀಘ್ರವೇ ತೆರಬೀಳಲಿದೆ. ಕೇರಳಕ್ಕಾಗಮಿಸಿ ನಿಯುಕ್ತ ಶಾಸಕರ ಮತ್ತು ಹಿರಿಯ ನಾಯಕರ, ಪ್ರಮುಖರ ಅಭಿಪ್ರಾಯ ಸಂಗ್ರಹಿಸಿದ ಎಐಸಿಸಿ ನಿಯುಕ್ತಿಗೊಳಿಸಿದ ವೀಕ್ಷಕರಾದ ಅಜಯ್ ಮಾಕನ್ ಮತ್ತು ಮುಕುಲ್ ವಾಸ್ನಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಿದ್ದಾರೆ. ಇನ್ನು ಕೇರಳ ಮುಖ್ಯಮಂತ್ರಿ ಯಾರೆಂದು ಹೖಕಮಾಂಡ್ ನ ಘೋಷಣೆಯಷ್ಟೇ ಬಾಕಿ ಉಳಿದಿದೆ.

ಕೇರಳ. ಮುಖ್ಯಮಂತ್ರಿ ಪದವಿಗೆ ಶಾಸಕರ ಕಡೆಯಿಂದ ಅತ್ಯಧಿಕ ಮಂದಿಯ ಬೆಂಬಲ ಎಐಸಿಸಿ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಪರವಾಗಿದೆ. ಇದೇ ವೇಳೆ ಘಟಕ ಪಕ್ಷಗಳು ಮತ್ತು ಸಾಮಾನ್ಯ ಕಾರ್ಯಕರ್ತರ ಬಹುಮತ ಚುನಾವಣೆಯಲ್ಲಿ ಕಾಂಗ್ರೆಸನ್ನು ಮುನ್ನಡೆಸಿದ ವಿಪಕ್ಷ ನಾಯಕ ವಿ. ಡಿ. ಸತೀಶನ್ ಪರವಾಗಿದೆ. ಇವರಿಬ್ಬರ ನಡುವೆ ಮಾಜಿ ಗೃಹ ಸಚಿವ ರಮೇಶ್ ಚೆನ್ನಿತಲ ಕೂಡಾ ಅನುಭವದ ಹಿರಿತನದೊಂದಿಗೆ ಸಿಎಂ ಪದವಿಯ ರೇಸ್ ನಲ್ಲಿದ್ದಾರೆ.
ಈದೇ ವೇಳೆ ಈ ಮೂವರ ಪರವಾಗಿ ಸಾಮಾಜಿಕ ಜಾಲತಾಣ ಮತ್ತು ಬೀದಿಗಿಳಿದು ಕಾಂಗ್ರೆಸ್ ಬೆಂಬಲಿಗರು ಅಭಿಯಾನ ಆರಂಭಿಸಿದ್ದಾರೆ.

ಇದೇ ವೇಳೆ ವಿಪಕ್ಷ ನಾಯಕನಾಗಿ ಯುಡಿಎಫ್ ನ್ನು ಅಧಿಕಾರಕ್ಕೇರಿಸಿದ ವಿ. ಡಿ. ಸತೀಶನ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಬೇಕೆಂದು ಒತ್ತಾಯಿಸಿ ಕೋಟಯಂ ನಲ್ಲಿ ಅಭಿಮಾನಿಯೊಬ್ಬರು ದೇಹಕ್ಕೆ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಕೋಟಯಂ ಕುರುಪ್ಪತರಯಿಲ್ ಎಂಬಲ್ಲಿನ ಕಾಂಗ್ರೆಸ್ ಕಾರ್ಯಕರ್ತ ಫ್ರಾನ್ಸಿಸ್ ಆತ್ಮಾಹುತಿ ನಡೆಸಲು ಯತ್ನಿಸಿ ಪ್ರತಿಭಟಿಸಿದರು. ಪೆಟ್ರೊಲ್ ದೇಹಕ್ಕೆ ಸುರಿದು ಕೖಯ್ಯಲ್ಲಿ ಲೖಟರ್ ಹಿಡಿದು, ವಿ. ಡಿ ಸತೀಶನ್ ಮುಖ್ಯ ಮಂತ್ರಿ ಆಗಬೇಕೆಂದು ಒತ್ತಾಯಿಸಿ ಆತ್ಮಹತ್ಯೆ ಬೆದರಿಕೆ ಒಡ್ಡಿದ ಇವರನ್ನು ಬಳಿಕ ಪೊಲೀಸರು ರಕ್ಷಿಸಿದರು. ಇದೇ ವೇಳೆ ತನ್ನ ಪರ ಯಾರೂ ಬೀದಿಗಿಳಿಯಕೂಡದು ಮತ್ತು ಫ್ಲೆಕ್ಸ್ ಸ್ಥಾಪಿಸದೇ ಶಾಂತರಾಗಿರಬೇಕೆಂದು ವಿಡಿ ಸತೀಶನ್ ಕರೆ ನೀಡಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00