- ಶಂಕರಾಚಾರ್ಯ ಪ್ರತಿಮೆ ಅನಾವರಣ ಮೂಲಕ ಬ್ರಹ್ಮೆಕ್ಯ ಕೇಶವಾನಂದ ಭಾರತೀ ಶ್ರೀಗಳ ಕನಸು ನನಸು
ಅತ್ಯುತ್ತರ ಕೇರಳದ ಏಕೖಕ ಶಂಕರಪೀಠವಾದ ಕಾಸರಗೋಡಿನ ಎಡನೀರು ಮಠದಲ್ಲಿ ಶ್ರೀ ಶಂಕರ ಭಗವತ್ಪಾದರ ಪ್ರತಿಮೆ ಸ್ಥಾಪನೆಯಾಗಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಆದಿ ಶಂಕರಾಚಾರ್ಯ ಪ್ರತಿಮೆ ಸ್ಥಾಪನೆಯಾಗುತ್ತಿರುವುದು ಇದೇ ಮೊದಲು..
ಕಾಸರಗೋಡು: ಶ್ರೀಶಂಕರಾಚಾರ್ಯ ಶಿಷ್ಯ ತೋಟಕಾಚಾರ್ಯ ಸ್ಥಾಪಿತ ಶ್ರೀಮದೆಡನೀರು ಮಠದಲ್ಲಿ ಸ್ಥಾಪನೆಯಾಗಲಿರುವ ಆಚಾರ್ಯ ವರೇಣ್ಯ ಶ್ರೀಆದಿ ಶಂಕರಾಚಾರ್ಯರ ಪಂಚಲೋಹ ಶೋಭಿತ ಪ್ರತಿಮೆ ಕಂಚಿನ ಶಿಲ್ಪಗ್ರಾಮವಾದ ಪಯ್ಯನ್ನೂರಿನ ಕುಂಞಿಮಂಗಲದಲ್ಲಿ ಸಿದ್ಧವಾಗುತ್ತಿದೆ. ಮೂರೂವರೆ ಅಡಿ ಎತ್ತರದ ಪ್ರತಿಮೆ ಸಹಿತ ಪ್ರತಿಮಾ ಮಂಟಪವನ್ನು ಶ್ರೀ ಎಡನೀರು ಮಠಕ್ಕೆ ರಾಜೀವನ್ ಅಗಸ್ತ್ಯಮಲ ಅವರ ಮೇಲುಸ್ತುವಾರಿಯಲ್ಲಿ ಮಲಪ್ಪುರಂ ಜಿಲ್ಲೆಯ ಸಾಂದೀಪನೀ ಸಾದನಾಲಯ ಚಾರಿಟೇಬಲ್ ಟ್ರಸ್ಟ್ ಆಶ್ರಯದ ನೂರಕ್ಕೂ ಅಧಿಕ ದೇವಸ್ಥಾನಗಳ ವತಿಯಿಂದ ಸಮರ್ಪಿಸಲಾಗುತ್ತಿದೆ.
ಎಡನೀರು ಮಠದಲ್ಲಿ ನನೂತನವಾಗಿ ಸ್ಥಾಪಿಸಲಾದ
ಶಿಲಾಮಯ ಮಂಟಪದಲ್ಲಿ ಮೇ11ರಂದು ಬೆಳಿಗ್ಗೆ9.30ಕ್ಕೆ
ಶೃಂಗೇರಿ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳವರು ಶಂಕರ ಭಗವತ್ಪಾದರ ಪ್ರತಿಮೆ ಅನಾವರಣಗೖದು ನಾಡಿಗೆ ಸಮರ್ಪಿಸುವರು. ಈ ಮೂಲಕ ಎಡನೀರು ಮಠದ ಕೀರ್ತಿಯನ್ನು ದೇಶದೆತ್ತರಕ್ಕೇರಿಸಿದ ಬ್ರಹ್ಮೖಕ್ಯ ಕೇಶವಾನಂದ ಭಾರತೀ ಶ್ರೀ ಪಾದಂಗಳವರ ಕನಸು ನನಸಾಗಲಿದೆ.
ಬ್ರಹ್ಮೖಕ್ಯ ಕೇಶವಾನಂದ ಭಾರತೀ ಶ್ರೀಪಾದರು 2015 ರಲ್ಲೇ ಶ್ರೀಮಠದಲ್ಲಿ ಶಂಕರಾಚಾರ್ಯ ಪ್ರತಿಮೆ ಸ್ಥಾಪನೆಗೆ ಬಯಸಿದ್ದರು. ಆವಾಗಲೇ ಅದನ್ನು ಶ್ರೀಮಠಕ್ಕೆ ನಾವು ಒಪ್ಪಿಸುತ್ತೇವೆಂದೂ ಭರವಸೆ ಇತ್ತಿದ್ದೆವು. ಆದರೆ ತದನಂತರ ಅನ್ಯಾನ್ಯ ಕಾರಣಗಳಿಂದ ಅದು ಕೖಗೂಡದೇ ವಿಳಂಬವಾಯಿತು. ಈಗ ಅದಕ್ಕೆ ಸಕಾಲದ ಸುಯೋಗ ಒದಗಿದೆ. ಪಯ್ಯನ್ನೂರಿನ ಕುಂಞಿಮಂಗಲದಲ್ಲಿ ಕಳೆದ ಒಂದು ವರ್ಷಗಳಿಂದ ಅದರ ಕೆಲಸ ಸಾಗಿದ್ದು, ಈಗ ಬಹುತೇಕ ಪೂರ್ಣಗೊಂಡಿದೆ. ಶಿಲ್ಪಿಗಳು ಮತ್ತು ಸ್ವಾಮೀಜಿಯವರ ನಿರ್ಣಯದಂತೆ ಪ್ರತಿಮೆ ಮಠಕ್ಕೆ ಹಸ್ತಾಂತರವಾಗಲಿದೆ. ನಾವಿದನ್ನು ನೂರಕ್ಕೂ ಅಧಿಕ ದೇವಸ್ಥಾನಗಳ ಒಕ್ಕೂಟದ ಟ್ರಸ್ಟ್ ಮೂಲಕ ಮಠಕ್ಕೆ ಸಮರ್ಪಿಸುತ್ತೇವೆ.
-ರಾಜೀವರ್ ಅಗಸ್ತ್ಯಮಲ
ಎಡನೀರಿಗೆ ಶೃಂಗೇರಿ ಶ್ರೀಗಳು
ಜಗದ್ಗುರು ಶೃಂಗೇರಿ ಮಠಾಧೀಶ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಮೇ 10 ರಂದೇ ಎಡನೀರು ಮಠಕ್ಕಾಗಮಿಸುವರು. 10ರಂದು ಸಂಜೆ ಏಳಕ್ಕೆ ಮಠಕ್ಕೆ ಆಗಮಿಸುವ ಅವರಿಗೆ
ಪಾರಂಪರಿಕ ಕ್ರಮಗಳ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಬಳಿಕ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ. ಮೇ. 11ರಂದು ಬೆಳಿಗ್ಗೆ 7ಕ್ಕೆ ರುದ್ರ ಹವನ, ಶ್ರೀಗೋಪಾಲಕೃಷ್ಣ ಹವನದ ಬಳಿಕ ಪ್ರತಿಮ ಸ್ಥಾಪನೆಯಾಗಲಿದೆ. ಕಾರ್ಯಕ್ರಮಗಳ ಯಶಸ್ಸಿಗೆ ಶ್ರೀಮಠದಲ್ಲಿ ಭರದ ಸಿದ್ಧತೆ ನಡೆದಿದೆ.





