156
ವರ್ಕಾಡಿ: ಸಂತೋಷ್ ಕಲಾವಿದರು ಪಾವಳ ವರ್ಕಾಡಿ ಇವರ ನೂತನ ತುಳು ನಾಟಕ ” ಇತ್ತೆ ಗೊತ್ತಾಂಡ.. ” ಇದರ ಮುಹೂರ್ತ ಸಮಾರಂಭ ಶ್ರೀಕ್ಷೇತ್ರ ಒಡಿಯೂರಿನಲ್ಲಿ ನಡೆಯಿತು. ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಂಸ್ಥೆಯ ಐದನೇ ನಾಟಕದ ಮುಹೂರ್ತ ನೆರವೇರಿಸಿ ನೂತನ ಕಲಾಕೃತಿಯು ಯಶಸ್ವಿ ಪ್ರದರ್ಶನ ಕಂಡು, ಜನಮನ ಗೆದ್ದು ವಿಜೃಂಭಿಸಲಿ ಎಂದು ಶುಭ ಹಾರೖಸಿದರು.
ಚೇತನ್ ವರ್ಕಾಡಿ ರಚಿಸಿದ ನೂತನ ಕಲಾಕೃತಿ ಇದಾಗಿದ್ದು, ನಿತಿನ್ ಹೊಸಂಗಡಿ ನಿರ್ದೇಶನದಲ್ಲಿ ಪ್ರತಿಭಾವಂತ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ.
ನಾಟಕದ ಮುಹೂರ್ತ ಸಮಾರಂಭದಲ್ಲಿ ತಂಡದ ಪ್ರಮುಖರಾದ ಕಿರಣ್ ಕುಮಾರ್ ಶೆಟ್ಟಿ ಕುರ್ಮನ್ ಗುತ್ತು, ರವೀಂದ್ರ ಕುಲಾಲ್ ವರ್ಕಾಡಿ, ಗಿರೀಶ್ ಕಾನ, ಗಿರೀಶ್ ಕೊಂದಲ ಕುಮೇರು, ಲಿಖಿತ್ ರಾಜ್ ಕೊಂದಲ್ಕುಮೇರ್, ಹರಿಣಿ ಪ್ರಕಾಶ್ ಶೆಟ್ಟಿ ಕುರಿಯಾಡಿಗುತ್ತು, ಹರ್ಷಿತಾ ಮಿತ್ತನಡ್ಕ, ಗ್ರೀಷ್ಮ ವರ್ಕಾಡಿ, ಕಿಶೋರ್ ಕುಮಾರ್ ಪಾವಳ, ವಿತೇಶ್ ವರ್ಕಾಡಿ, ಲೋಕೇಶ್ ಪಾವಳ ಮೊದಲಾದವರು ಪಾಲ್ಗೊಂಡರು.







