109
ಚೆನ್ನೖ: ತಮಿಳುನಾಡಿನ ವಿರುದುನಗರ್ ಕಟ್ಟನಾರ್ ಪಾಟಿ ಎಃಬಲ್ಲಿ ಪಟಾಕಿ ನಿರ್ಮಾಣ ಘಟಕದಲ್ಲಿ ಅಗ್ನಿ ಆಕಸ್ಮಿಕ ಉಂಟಾಗಿ 19 ಮಂದಿ ಮೃತಮಟ್ಟ ದಾರುಣ ಘಟನೆ ವರದಿಯಾಗಿದೆ. ಆರು ಮಂದಿ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ವನಜ ಪಟಾಕಿ ನಿರ್ಮಾಣ ಘಟಕದಲ್ಲಿ ಸ್ಫೋಟ ಸಂಭವಿಸಿ ದುರಂತ ಉಂಟಾಯಿತು. ಇಲ್ಲಿ 30 ಮಂದಿ ಕಾರ್ಮಿಕರು ಪಟಾಕಿ ನಿರ್ಮಾಣ ಕೆಲಸದಲ್ಲಿ ತೊಡಗಿದ್ದರೆಂದು ಹೇಳಲಾಗಿದೆ.
ಘಟನೆ ನಡೆದು ಒಂದು ತಾಸಿನ ಬಳಿಕ ಅಗ್ನಿ ಶಾಮಕ ದಳ ತಲುಪಿದ್ದೇ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ರಕ್ಷಣಾ ಚಟುವಟಿಕೆಗಳು ನಡೆಯುತಿದ್ದು, ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ದುರಂತಕ್ಕೆಸಗಾಢ ಸಂತಾಪ ಪ್ರಕಟಿಸಿದ್ದಾರೆ.







