ಸ್ವರ್ಗ: ಭೂಮಿಕಾ ಸಂಡೇ ಥಿಯೇಟರ್ಸ್ ಸ್ವರ್ಗ ಹಾಗೂ ಸಹೋದರ ಸಂಸ್ಥೆಗಳಾದ ಎಂ ಕೆ ಬಾಲಕೃಷ್ಣ ಗ್ರಂಥಾಲಯ ಮತ್ತು ವಾಚನಾಲಯ ಸ್ವರ್ಗ ಮತ್ತು ಮಾತೃಭೂಮಿ ಸ್ವರ್ಗ ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಶಾಲೆ ಸ್ಪರ್ಗದಲ್ಲಿ ರಂಗದೀಪಿಕಾ 2026 ಎಂಬ ಏಕದಿನ ರಂಗ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಅಧ್ಯಾಪಕ, ಯಕ್ಷಗಾನ ಭಾಗವತ ಡಾ.ಸತೀಶ್ ಪುಣಿಚಿತ್ತಾಯರು ಮಾತನಾಡಿ,” ನಾಟಕದ ಪರಂಪರೆ ಮತ್ತೆ ಸ್ವರ್ಗದಲ್ಲಿ ಆರಂಭವಾಗಿದೆ ಇದು ನಿಂತ ನೀರಾಗದಿರಲಿ ಎಂದರು”.

ಬಾಲಕೃಷ್ಣ ಗ್ರಂಥಾಲಯ ಹಾಗೂ ವಾಚನಾಲಯ ಸ್ವರ್ಗ ಇದರ ಅಧ್ಯಕ್ಷ ರವಿರಾಜ್ ಸ್ವರ್ಗ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರು ಸೋಮಶೇಖರ ಜೆ ಎಸ್ ಇವರು ತಮ್ಮ ನಾಟಕದ ಅನುಭವಗಳನ್ನು ಹಂಚಿಕೊಂಡರು. ಜೊತೆಗೆ ಗ್ರಾ. ಪಂ. ಸದಸ್ಯ ರಾಮಚಂದ್ರ ಎಂ ತಮ್ಮ ನಾಟಕದ ಆಸಕ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದರು. ಹಾಗೂ ಸ್ವರ್ಗ ಶಾಲಾ ಪ್ರಧಾನ ಅಧ್ಯಾಪಿಕೆ ಗೀತಾ ಕುಮಾರಿ ಭೂಮಿಕಾ ಸಂಡೆ ಥಿಯೇಟರ್ ಹಲವು ಮಕ್ಕಳ ಪ್ರತಿಭೆಗಳಿಗೆ ನಾಂದಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಊರಿನ ಹಿರಿಯ ನಾಟಕ ಕಲಾವಿದ ಬಾಬು ಪೂಜಾರಿ ಬೈರಡ್ಕ ಇವರಿಗೆ ರಂಗಗೌರವಾರ್ಪಣೆ ನೆರವೇರಿತು.
ರಂಗ ತರಬೇತಿಯ ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸಿದ್ಧ ರಂಗ ನಿರ್ದೇಶಕ ಉದಯ್ ಸಾರಂಗ್ ಹಾಗೂ ರಂಗಕರ್ಮಿ ಅಶೋಕ್ ಮಾಸ್ಟರ್ ಕೊಡ್ಲಮೊಗರು ಉತ್ತಮವಾಗಿ ರಂಗ ತರಬೇತಿ ಕಾರ್ಯಕ್ರಮವನ್ನು ನಡೆಸಿ ರಂಗಾಭಿನಯ ಕಾರ್ಯಾಗಾರಕ್ಕೆ ಹೊಸ ಅರ್ಥವನ್ನು ಬರೆದರು.
ವೈಷ್ಣವಿ ಕುಮಾರಿ, ಅಭಿಜ್ಞ ಕುಮಾರಿ, ದೀಪಿಕಾ ಪ್ರಾರ್ಥಿಸಿ ಕಾರ್ಯಕ್ರಮದ ಸಂಚಾಲಕ ಶ್ರೀನಿವಾಸ ನಾಯ್ಕ್ ಪೆರಿಕ್ಕಾನ ಸ್ವಾಗತಿಸಿ ಸರಕಾರಿ ಪದವಿ ಪೂರ್ವ ಕಾಲೇಜು, ಉಪ್ಪಿನಂಗಡಿಯ ಉಪನ್ಯಾಸಕಿ ಕುಮಾರಿ ನವ್ಯಶ್ರೀ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು.






