ಪೆರ್ಮುದೆ: ಚೇವಾರು ಶಾಲೆಯಲ್ಲಿ ಚಿಣ್ಣರ ಕಲರವಕ್ಕೆ ಮಂಗಲ: ರಂಗಚೇತನ ಸಾರಥ್ಯದ ತ್ರಿದಿನ ಸನಿವಾಸ ಶಿಬಿರ ವೖವಿಧ್ಯ ಚಟುವಟಿಕೆಗಳ ಹಬ್ಬದೊಂದಿಗೆ ಸಂಪನ್ನ

by Narayan Chambaltimar
  • ಕನ್ನಡ ಮಕ್ಕಳ ಕಾಳಜಿಯಿಂದ ರಂಗಾಸಕ್ತ ಕನ್ನಡ ಅಧ್ಯಾಪಕರು ನಡೆಸುವ ಶಿಬಿರಕ್ಕೆ ವ್ಯಾಪಕ ಪ್ರಶಂಸೆ

ಗಡಿನಾಡ ಕನ್ನಡ ಮಕ್ಕಳು ಹಿಂದುಳಿಯಬಾರದು ಎಂಬ ಕಳಕಳಿಯಿಂದ ರಂಗಾಸಕ್ತ ಕನ್ನಡ ಅಧ್ಯಾಪಕರ ಬಳಗ ನಡೆಸುವ ರಂಗಶಿಬಿರ ಜನಪ್ರಿಯವಾಗುತ್ತಿದೆ. ಮಕ್ಕಳ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಶಿಬಿರದ ಉಪಯುಕ್ತ ತರಗತಿಗಳಿಂದ ಎಳೆಯ ವಿದ್ಯಾರ್ಥಿಗಳು ನಾಳಿನ ಭರವಸೆಯ ಪ್ರತಿಭೆಗಳಾಗಿ ವಿಕಾಸಗೊಳ್ಳುತ್ತಿದ್ದಾರೆ. ಅಧ್ಯಾಪಕರ ಈ ಕಾಳಜಿ ಹೆತ್ತವರ ಪ್ರಶಂಸೆಗೆ ಪಾತ್ರವಾಗಿ ಮನ್ನಣೆ ಪಡೆದಿದೆ.

ಪೆರ್ಮುದೆ: ಕಾಸರಗೋಡಿನ ಕನ್ನಡ ಅಧ್ಯಾಪಕರ ಸಾಂಸ್ಕೃತಿಕ ರಂಗಭೂಮಿ ವೇದಿಕೆಯಾದ “ರಂಗಚೇತನ ಕಾಸರಗೋಡು” ಆಶ್ರಯದಲ್ಲಿ ನಡೆದ ಆರನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ “ಚಿಣ್ಣರ ದೃಶ್ಯ ಕಾವ್ಯ-ಚಿತ್ತಾರ 2026” ಚೇವಾರು ಎಸ್. ಎಸ್. ಯುಪಿ ಶಾಲೆಯಲ್ಲಿಂದು ಸಂಪನ್ನಗೊಂಡಿತು. ಎ. 11ರಂದು ಆರಂಭಗೊಂಡ ತ್ರಿದಿನ ಸನಿವಾಸ ಶಿಬಿರದಲ್ಲಿ 50.ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡು ನವ್ಯಾನುಭವ ಪಡೆದರು.

ರಂಗಕಲೆಯ ಮೂಲಪಾಠ, ಅಭಿನಯ, ಸಂವಹನ, ಮಿಯಾಜಾಲ, ಮಿಮಿಕ್ರಿ, ಪರಿಸರ ಮತ್ತು ಪಕ್ಷಿ ವೀಕ್ಷಣೆ, ಕಲಾವಿದರ ಗೃಹ ಸಂದರ್ಶನ, ನಾಟಕ-ಸಂಭಾಷಣೆ, ರಂಗಗೀತೆ, ರಂಗದ ನೆರಯಳು- ಬೆಳಕು, ರಂಗಪರಿಕರ ತಯಾರಿ, ಯೋಗ, ರಂಗವಿನ್ಯಾಸ, ಮುಂತಾದ ವಿಷಯಗಳನ್ನು ಆಡಿ ನಲಿದು ಒಲಿದು ಕಲಿತ ಶಿಬಿರಾರ್ಥಿಗಳು ಮೂರು ದಿನಗಳನ್ನು ಅವಿಸ್ಮರಣೀಯವಾಗಿಸಿಕೊಂಡರು.

ಶಿಬಿರದ ನಿರ್ದೇಶಕರಾಗಿದ್ದ ದಿವಾಕರ ಬಲ್ಲಾಳ್, ಸದಾಶಿವ ಬಾಲಮಿತ್ರ, ಸಂಪನ್ಮೂಲ ವ್ಯಕ್ತಿಗಳಾದ ನಿರ್ಮಲ್ ಕುಮಾರ್, ಬಾಲಸುಬ್ರಹ್ಮಣ್ಯಂ, ಸುರೇಶ್ ಯಾದವ್, ರಾಜು ಕಿದೂರು, ವರ್ಣ ಕಲಾವಿದ ವಿಶ್ವಾಸ್, ಬಾಸುಮ ಕೊಡಗು, ಸುಧೀಶ್ ಕಾಸರಗೋಡು, ಪ್ರಕಾಶ್ ಕುಂಬಳೆ, ಸಾತ್ವಿಕ್, ವಸಂತ ಮೂಡಂಬೖಲು, ಕೃಷ್ಣಪ್ಪ ಬಂಬಿಲ ಮೊದಲಾದ ಕಲಾ ಪ್ರತಿಭೆಗಳು ಶಿಬಿರಾರ್ಥಿಗಳಿಗೆ ಉಪಯುಕ್ತ ತರಗತಿ ನಡೆಸಿದರು.
ಎ. 14ರಂದು ಅಪರಾಹ್ನ ನಡೆದ ಶಿಬಿರದ ಸಮಾರೋಪ ಸಮಾರಂಭವನ್ನು ಕಾಸರಗೋಡು ಜಿಲ್ಲಾ ನಿವೃತ್ತ ಶಿಕ್ಷಣ ಉಪ ನಿರ್ದೇಶಕ ಇಬ್ರಾಹಿಂ ಬಿ ಉದ್ಘಾಟಿಸಿದರು. ಇದೇ ವೇಳೆ
ಚೇವಾರು ಶಾಲೆಯಿಂದ ಪ್ರಸಕ್ತ ವರ್ಷ ನಿವೃತ್ತರಾಗುವ ಮುಖ್ಯೋಪಾಧ್ಯಾಯ, ಸಂಘಟಕ ಶಾಂಭಟ್ ಯು, ಎಸ್. ಎಸ್. ಕೆ ಯೌಜನಾಧಿಕಾರಿ ಆಗಸ್ಟಿನ್ ಬರ್ನಾಡ್, ಪಿಎಚ್ ಡಿ ಪದವಿ ಪಡೆದ ರಂಗಚೇತನ ಅಧ್ಯಕ್ಷ ಡಾ. ಯತೀಶ್ ಕುಮಾರ್ ಹಾಗೂ ಇಬ್ರಾಹಿಂ ಬಿ. ಅವರನ್ನು ಗೌರವಿಸಲಾಯಿತು.


ಸಂಘಟನೆಯ ಉಪಾಧ್ಯಕ್ಷ ವಿಜಯಕುಮಾರ್ ಬಿ. ಸ್ವಾಗತಿಸಿ, ಗೋಪಾಲ ಕಾಟುಕುಕ್ಕೆ ವಂದಿಸಿದರು. ಸಂಘಟನೆಯ ಪದಾಧಿಕಾರಿಗಳಾದ ರಂಗಕರ್ಮಿ ಅಶೋಕ್ ಕೊಡ್ಲಮೊಗರು, ಶಿವಪ್ರಸಾದ್ ರಾವ್ ಪೖವಳಿಕೆ, ಶಿವರಾಮ ಕಾಟುಕುಕ್ಕೆ, ಮೇಲ್ವಿನ್ ಪೆರ್ಮುದೆ, ರಾಜಕುಮಾರ್ ಕಾಟುಕುಕ್ಕೆ, ಉದಯ ಸಾರಂಗ್, ಪ್ರಮೀಳಾ ಟೀಚರ್, ಶಿವಪ್ರಸಾದ್ ಚೆರುಗೋಳಿ, ಪ್ರಸಾದ ಮುಗು ವಿವಿಧ ಜವಾಬ್ದಾರಿ ವಹಿಸಿ ಶಿಬಿರದ ಯಶಸ್ಸಿಗೆ ಕಾರಣರಾದರು.

ರಂಗಕಲೆ ಮತ್ತು ಶಿಕ್ಷಣ ಕ್ಷೇತ್ರದ ಅಭಿಮಾನಿಗಳು ಮತ್ತು ಪ್ರೋತ್ಸಾಹಕರಾದ ಬೇಕಲ ಉಪಶೀಕ್ಷಣಾಧಿಕಾರಿ ಶ್ರೀ ಅರವಿಂದ, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಪ್ರಕಾಶ್ ಮಸ್ತರ್, ಧರ್ಮತಡ್ಕ ಶಾಲೆಯ ಪ್ರಾಂಶುಪಾಲ ಶ್ರೀರಾಮಚಂದ್ರ ಭಟ್, ಕಾಸರಗೋಡು ಉಪ ಶಿಕ್ಷಣಾಧಿಕಾರಿ ಶ್ರೀ ನಾರಾಯಣ ದೇಲಂಪಾಡಿ, ಉದಯ ಗಿರಿ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಧರ ಭಟ್,ಬಂಬ್ರಾಣ ಶಾಲೆಯ ಮುಖ್ಯೋಪಾದ್ಯಾಯ ಶ್ರೀ ಸತ್ಯಪ್ರಕಾಶ್ ,ರಾಜೇಶ್ ಉಬ್ರಂಗಳ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀ ಅಡ್ವ ಚಂದ್ರಮೋಹನ ,ನಿವೃತ್ತ ಅಧ್ಯಾಪಕ ಶ್ರೀ ವೆಂಕಟರಮಣ ಎನ್,ಸುನಿಲ್ ಕುಮಾರ್ ಮಯ್ಯಳ, ಗುರುರಾಜ್ ಕೋಳ್ಯೂರು, ಇತ್ಯಾದಿ ಗಣ್ಯರು ತರಗತಿಯ ವಿವಿಧ ಸಂದರ್ಭಗಳಲ್ಲಿ ಭಾಗವಹಿಸಿ ಶುಭ ಹಾರೈಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00